ರಾಣಿ ಸಾಯಲ್ಲ, ಅವನಿ ಸಿಗಲ್ಲ, 'ರಾಧಾ ರಮಣ' ಧಾರಾವಾಹಿ ಮುಗಿಯಲ್ಲ.!
Recommended Video

ಇದೊಂಥರಾ 'ತೋಳ ಬಂತು ತೋಳ' ಕಥೆ ರೀತಿ ಆಯ್ತು... ಇನ್ನೇನು ಧಾರಾವಾಹಿಗೆ ರೋಚಕ ತಿರುವು ಸಿಕ್ತು ಅಂತ ಕಣ್ಣರಳಿಸುವಷ್ಟರಲ್ಲಿ ಆ ಟ್ವಿಸ್ಟ್ ಡಮ್ಮಿ ಆಗಿರುತ್ತೆ. ಸುತ್ತಿ ಬಳಸಿ ಕಥೆ ಅಲ್ಲಿಗೆ ಬಂದು ನಿಲ್ಲುತ್ತೆ. ಕುತೂಹಲದಿಂದ ಕಾದು ಕೂತ ವೀಕ್ಷಕರ ಮುಖಕ್ಕೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದ ಅನುಭವ ಆಗುತ್ತೆ.!
ಒಟ್ನಲ್ಲಿ.. ರಾಣಿ ಸಾಯಲ್ಲ.. ಚಿಲ್ಲರೆ ಪ್ಲಾನ್ ಮಾಡುವುದನ್ನು ದೀಪಿಕಾ ಬಿಡಲ್ಲ.. ಸಿತಾರ ದೇವಿ ಸುಮ್ಮನೆ ಇರಲ್ಲ.. 'ರಾಧಾ ರಮಣ' ಧಾರಾವಾಹಿ ಮುಗಿಯಲ್ಲ.. ವೀಕ್ಷಕರಿಗೆ ಕಿರಿಕಿರಿ ತಪ್ಪಿದ್ದಲ್ಲ.!
ಕಳೆದ ಸಂಚಿಕೆಯಲ್ಲಿ ಅವನಿ ವೇಷಧಾರಿ ರಾಣಿ ಸತ್ತೇ ಹೋದ್ಲು ಎಂಬಂತೆ ನಿರ್ದೇಶಕರು ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದರು. ಆದ್ರೀಗ ನೋಡಿದ್ರೆ, ನದಿಯಲ್ಲಿ ಬಿದ್ದಿದ್ದ ರಾಣಿ ದಿಢೀರ್ ಅಂತ ಬದುಕಿದ್ದಾಳೆ. ಈ ಪವಾಡ ನಡೆಯಲು ಕಾರಣ ದೀಪಿಕಾ ಅಂತ ತೋರಿಸಲಾಗಿದೆ.
ರಾಣಿ ಮುಖ ನೋಡಿದ್ರೆ ಕೆಂಡಕಾರುತ್ತಿದ್ದ ದೀಪಿಕಾ ಇಂಥ ಕೆಲಸ ಯಾಕೆ ಮಾಡಿದ್ಲು ಅಂದ್ರೆ ಅದರಲ್ಲೂ ಒಂದು 'ಪೇಲವ' ಟ್ವಿಸ್ಟ್ ಇದೆ. ಕೆಪಾಸಿಟಿ ಪ್ರಶ್ನೆ ಇದೆ.!

ಸಿತಾರ ದೇವಿಗೆ ಮಗಳೇ ಶತ್ರು.!
ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂಬ ಮಾತಿದೆ. ಆದ್ರೆ, ಈ ಧಾರಾವಾಹಿಯಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ. ಸಿತಾರ ದೇವಿ ಏನೇ ಪ್ಲಾನ್ ಮಾಡಿದರೂ, ಅದನ್ನ ಫ್ಲಾಪ್ ಮಾಡೋಕೆ ದೀಪಿಕಾ ಕಾದು ಕೂತಿರುತ್ತಾಳೆ. ರಾಣಿ ಅಧ್ಯಾಯ ಮುಗಿಸಲು ಸಿತಾರ ದೇವಿ ಮುಂದಾದಾಗ, ಆಕೆಗೆ ಶತ್ರುವಾಗಿ ಕಾಡಿದ್ದು ಪುತ್ರಿ ದೀಪಿಕಾ.

ರಾಣಿ ಪ್ರಾಣಿ ಉಳಿಸಿದ ದೀಪಿಕಾ
ರಾಣಿಯನ್ನ ಮುಗಿಸಲು ಸಿತಾರ ದೇವಿ ಮಾಡಿದ್ದ ಮಾಸ್ಟರ್ ಪ್ಲಾನ್ ನ ಪಿನ್ ಟು ಪಿನ್ ಡೀಟೇಲ್ಸ್ ದೀಪಿಕಾಗೆ ಹೇಗೆ ಗೊತ್ತಾಯ್ತೋ.? ಅದು ಸ್ವತಃ ಧಾರಾವಾಹಿಯ ನಿರ್ದೇಶಕರಿಗೂ ಗೊತ್ತಿಲ್ಲ ಬಿಡಿ. ಅದರೂ, ಅಮ್ಮನ ಪ್ಲಾನ್ ಗೆ ಟಕ್ಕರ್ ಕೊಡಲು ಪ್ರತ್ಯೇಕ ಪ್ಲಾನ್ ಮಾಡಿ ರಾಣಿ ಪ್ರಾಣ ಉಳಿಸಿದ್ದಾಳೆ ದೀಪಿಕಾ.

ದೀಪಿಕಾ ಹೀಗೆ ಮಾಡಿದ್ದು ಯಾಕೆ.?
ಇಡೀ ಜಗತ್ತಿನಲ್ಲಿ ರಾಧಾ-ರಮಣ್ ರನ್ನ ದೂರ ಮಾಡುವ ಕೆಪಾಸಿಟಿ ಇರುವುದು ಅವನಿ ವೇಷದಲ್ಲಿ ಇರುವ ರಾಣಿಗೆ ಮಾತ್ರ ಎಂಬುದು ದೀಪಿಕಾ ಲೆಕ್ಕಾಚಾರ. ಹೀಗಾಗಿ, ರಾಣಿ ಪ್ರಾಣ ಉಳಿಸಿ... ರಾಣಿ ಮೂಲಕ ರಮಣ್ ನ ಪಡೆಯುವ ದುಸ್ಸಾಹಸ ದೀಪಿಕಾಗೆ.!

ದೀಪಿಕಾ ಪ್ಲಾನ್ ಸಕ್ಸಸ್ ಆಗುತ್ತಾ.?
ಅತ್ತ ಸಾವಿನ ಕದ ತಟ್ಟಿ ಬಂದಿರುವ ರಾಣಿಗೆ ನಡುಕ ಶುರುವಾಗಿದ್ದರೆ, ಇತ್ತ ನಿಜವಾದ ಅವನಿ ಪ್ರತಿದಿನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ಈ ನಡುವೆ ದೀಪಿಕಾ ಪ್ಲಾನ್ ಸಕ್ಸಸ್ ಆಗುತ್ತಾ.? ಎಲಾಸ್ಟಿಕ್ ಗಿಂತಲೂ ಹೆಚ್ಚು ಎಳೆಯಲಾಗುತ್ತಿರುವ ಈ ಧಾರಾವಾಹಿಗೆ ಕೊನೆ ಎಂದೋ.?!


Click it and Unblock the Notifications











