ಮನೆಯಿಂದ ಮತ್ತೆ ಎಸ್ಕೇಪ್ ಆದ ರಾಣಿ: ಈಗ ಇನ್ನೇನು ಆಗುತ್ತೋ.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಅದಾಗಲೇ ಒಂದು ಬಾರಿ ಗಂಟು-ಮೂಟೆ ಕಟ್ಟಿಕೊಂಡು ಮನೆಯಿಂದ ಆಚೆ ಕಾಲಿಟ್ಟು, ಕೊನೆಗೆ ಸಿಕ್ಕಿಬಿದ್ದು 'ತಪ್ಪಾಯ್ತು' ಎಂದು ಸಿತಾರ ದೇವಿಯ ಕಾಲಿಗೆ ಬಿದ್ದಿದ್ದಳು ರಾಣಿ.
''ಇನ್ನೊಮ್ಮೆ ಹೀಗೆ ಮಾಡಲ್ಲ'' ಅಂತ ಸಿತಾರ ದೇವಿ ಮುಂದೆ ರಾಣಿ ಗೋಗರೆದಿದ್ದಳು. ಕೊನೆಗೆ ರಾಣಿಯನ್ನ ಮನೆಗೆ ವಾಪಸ್ ಕರೆದುಕೊಂಡು ಬಂದಳು ಸಿತಾರ ದೇವಿ.
ಹಾಗೂ ಹೀಗೂ ಮಾದನನ್ನ ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸುವಲ್ಲಿ ರಾಣಿ ಯಶಸ್ವಿ ಆದಳು. ಈಗ ಮತ್ತೊಂದು ಬಾರಿಗೆ ಮನೆಯಿಂದ ರಾಣಿ ಎಸ್ಕೇಪ್ ಆಗಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಬಟ್ಟೆ ಪ್ಯಾಕ್ ಮಾಡಿಕೊಳ್ಳದೇ, ಮುಖ್ಯವಾದ ವಸ್ತುಗಳನ್ನ ಮಾತ್ರ ತೆಗೆದುಕೊಂಡು ರಾಣಿ ಹೊರಬಂದಿದ್ದಾಳೆ. ಈಗ ಇನ್ನೇನು ತಿರುವು ಕಾದಿದೆಯೋ.?

ಗಣೇಶ ಹಬ್ಬದ ಸಂಭ್ರಮ
'ರಾಧಾ ರಮಣ' ಧಾರಾವಾಹಿಯಲ್ಲಿ ತಡವಾಗಿ ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ. ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಲು ಎಲ್ಲರೂ ಹೊರಟಿದ್ದಾರೆ. ಸರಸ್ವತಿ ಎಷ್ಟೇ ಕರೆದರೂ, ''ಪೂಜೆಗೆ ಬರಲ್ಲ'' ಅಂತ ರಾಣಿ (ಅವನಿ) ಹಠ ಹಿಡಿದಳು.

ಮನೆಯಲ್ಲಿ ದೀಪಿಕಾ ಬಿಟ್ಟರೆ ಇನ್ಯಾರೂ ಇಲ್ಲ.!
ಎಲ್ಲರೂ ದೇವಸ್ಥಾನಕ್ಕೆ ಹೊರಟಿರುವ ಕಾರಣ, ಮನೆಯಲ್ಲಿ ದೀಪಿಕಾ ಬಿಟ್ಟರೆ ಇನ್ಯಾರೂ ಇಲ್ಲ ಎಂಬ ಸತ್ಯ ರಾಣಿಗೆ ಗೊತ್ತಾಯ್ತು. ಎಸ್ಕೇಪ್ ಆಗಲು ಇದೇ ಸರಿಯಾದ ಸಮಯ ಅಂತ ರಾಣಿ ಹೊರಟು ನಿಂತಳು.

ಕಳುಹಿಸಿ ಕೊಟ್ಟ ದೀಪಿಕಾ.!
ರಾಣಿಯನ್ನ ಮನೆಯಿಂದ ಆಚೆ ಹಾಕಬೇಕು ಅಂತ ದೀಪಿಕಾ ಕಾಯ್ತಿದ್ಲು. ಈಗ ರಾಣಿಯೇ ಮನೆಯಿಂದ ಹೊರಟಿರುವ ಕಾರಣ, ಆಕೆಯನ್ನ ತಡೆಯಲು ದೀಪಿಕಾ ಹೋಗಲಿಲ್ಲ. ಸಿತಾರ ದೇವಿಗೂ ವಿಷಯ ತಿಳಿಸದೆ, ರಾಣಿಯನ್ನ ದೀಪಿಕಾ ಕಳುಹಿಸಿಕೊಟ್ಟಳು.

ಮುಂದೇನಾಗುತ್ತೆ.?
ರಾಣಿ ಮತ್ತೆ ಎಸ್ಕೇಪ್ ಆಗಿ ಬಂದಿರುವುದನ್ನು ನೋಡಿ ಮಾದನಿಗೆ ಶಾಕ್ ಆಗಿದೆ. ಇತ್ತ ತವರು ಮನೆಗೆ ರಾಧಾ ಹೋಗಿದ್ದಾಗಿದೆ. ರಮಣ್ ಗಾಗಿ ರಾಧಾ ಕಾಯುತ್ತಿದ್ದಾಳೆ. ಮುಂದೇನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.


Click it and Unblock the Notifications











