ಗಂಟು-ಮೂಟೆ ಕಟ್ಟಿಕೊಂಡು ಮನೆಯಿಂದ ಆಚೆ ಕಾಲಿಟ್ಟ 'ಕಳ್ಳಿ' ರಾಣಿ.!

By Harshitha

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಕಡೆಗೂ ಒಂದು ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ಇಷ್ಟು ದಿನ ರಮಣ್ ಮನೆಯಲ್ಲಿ ಠಿಕಾಣಿ ಹೂಡಿದ್ದ 'ಕಳ್ಳಿ' ರಾಣಿ ಇದೀಗ ಮನೆಯಿಂದ ಆಚೆ ಕಾಲಿಟ್ಟಿದ್ದಾಳೆ.

ಒಡವೆ, ವಸ್ತ್ರ, ಕ್ರೆಡಿಟ್ ಕಾರ್ಡ್ ಹಾಗೂ ಚೆಕ್ ಬುಕ್ ಅನ್ನೆಲ್ಲಾ ಪ್ಯಾಕ್ ಮಾಡಿಕೊಂಡು ರಾಣಿ ಹೊರಟ್ಟಿದ್ದಾಳೆ. ಸಿತಾರ ದೇವಿ ಕೊಡುವ ಜುಜುಬಿ ಕಾಸಿನ ಬದಲು ರಮಣ್ ಕೊಟ್ಟಿರುವ ಕ್ರೆಡಿಟ್ ಕಾರ್ಡ್ ಹಾಗೂ ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರವನ್ನ ಇಟ್ಟುಕೊಂಡು 'ಕಳ್ಳಿ' ರಾಣಿ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದಾಳೆ.

''ಸಿತಾರ ದೇವಿಯ ಸಹವಾಸ ಸಾಕು, ಈ ನಾಟಕ ಸಾಕು'' ಅಂತ ರಾಣಿಗೆ ಅನಿಸಿದೆ. ಹೀಗಾಗಿ, ಇದ್ದಕ್ಕಿದ್ದಂತೆ ಪರಾರಿ ಆಗಲು ರಾಣಿ ನಿರ್ಧಾರ ಮಾಡಿದ್ದಾಳೆ. ರಾಧಾ, ಅನ್ವಿತಾ, ಸಿತಾರ ದೇವಿ ಕಣ್ತಪ್ಪಿಸಿ ಕಾಲ್ಕೀಳಲು ರಾಣಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾಳೆ.

ಈ ಬಾರಿ ರಾಣಿಯ ಪ್ಲಾನ್ ಸಕ್ಸಸ್ ಆಗುತ್ತಾ.? ರಾಣಿ ಎಸ್ಕೇಪ್ ಆಗುವವರೆಗೂ ಸಿತಾರ ದೇವಿ ಸುಮ್ಮನೆ ಇರ್ತಾರಾ.? ಮುಂದೇನಾಗಬಹುದು.?

ಸಿತಾರ ದೇವಿ ಕಪಿಮುಷ್ಟಿಯಿಂದ ಹೊರಗೆ ಬರಬೇಕು.!

ಸಿತಾರ ದೇವಿ ಕಪಿಮುಷ್ಟಿಯಿಂದ ಹೊರಗೆ ಬರಬೇಕು.!

''ಸಿತಾರ ದೇವಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡ್ತಾರೆ. ನನಗೆ ದುಡ್ಡು ಕೊಡದೆ ಪ್ರಾಣ ತೆಗೆಯುವುದಕ್ಕೂ ಹೇಸಲ್ಲ'' ಎಂಬ ಸತ್ಯ ರಾಣಿಗೆ ಅರಿವಾಗಿದೆ. ಹೀಗಾಗಿ, ಸಿತಾರ ದೇವಿ ಕಪಿಮುಷ್ಟಿಯಿಂದ ಹೊರಗೆ ಬರಲು ರಾಣಿ ನಿರ್ಧಾರ ಮಾಡಿದ್ದಾಳೆ.

ಸಿತಾರ ಬೆದರಿಕೆಗೆ ಬಗ್ಗಲಿಲ್ಲ.!

ಸಿತಾರ ಬೆದರಿಕೆಗೆ ಬಗ್ಗಲಿಲ್ಲ.!

ಸಿತಾರ ದೇವಿ ಹಾಕಿದ ಬೆದರಿಕೆಗೆ ರಾಣಿ ಬಗ್ಗಲಿಲ್ಲ. ಸಿತಾರ ದೇವಿ ತಂದಿದ್ದ ಆಸ್ತಿ ಪತ್ರಕ್ಕೆ ರಾಣಿ ಸಹಿ ಹಾಕಲಿಲ್ಲ. ಸಿತಾರ ದೇವಿ ಕೊಡುವ ದುಡ್ಡಿನ ಬದಲು, ರಮಣ್ ಕೊಟ್ಟಿರುವ ಆಸ್ತಿ ಪತ್ರ ಹಾಗೂ ಕ್ರೆಡಿಟ್ ಕಾರ್ಡ್ ನ ತಗೊಂಡು ರಾಣಿ ಪರಾರಿ ಆಗಲು ಸ್ಕೆಚ್ ಹಾಕಿದ್ದಾಳೆ.

ಮನೆಯಲ್ಲಿ ರಮಣ್ ಇಲ್ಲ

ಮನೆಯಲ್ಲಿ ರಮಣ್ ಇಲ್ಲ

ಮೀಟಿಂಗ್ ಇರುವ ಕಾರಣಕ್ಕೆ ರಮಣ್ ದೆಹಲಿಗೆ ತೆರಳಿದ್ದಾರೆ. ರಮಣ್ ಮನೆಯಲ್ಲಿ ಇಲ್ಲದಿರುವ ಕಾರಣ, ಎಸ್ಕೇಪ್ ಆಗಲು ಇದೇ ಸರಿಯಾದ ಸಮಯ ಅಂತ ರಾಣಿ ಪ್ಲಾನ್ ಮಾಡಿದ್ದಾಳೆ. ಹಾಗೂ ಹೀಗೂ ಮನೆಯಿಂದ ರಾಣಿ ಹೊರಗೆ ಬಂದಿದ್ದಾಳೆ.

ದೀಪಿಕಾ ಕಣ್ಣು ರಾಧಾ ಮೇಲೆ.!

ದೀಪಿಕಾ ಕಣ್ಣು ರಾಧಾ ಮೇಲೆ.!

ಇಷ್ಟು ದಿನ ರಾಣಿಯನ್ನ ಮನೆಯಿಂದ ಆಚೆ ಹಾಕಬೇಕು ಅಂತಿದ್ದ ದೀಪಿಕಾ ಇದೀಗ ರಾಧಾ ವಿರುದ್ಧ ತಿರುಗಿ ಬಿದ್ದಿದ್ದಾಳೆ. ರಾಧಾ-ರಮಣ್ ದಂಪತಿಯನ್ನ ದೂರ ಮಾಡಲು ದೀಪಿಕಾ ಪ್ರಯತ್ನ ಪಡುತ್ತಿದ್ದಾಳೆ.

ಸಿತಾರ ದೇವಿ ತಲೆಯಲ್ಲೂ ಪ್ಲಾನ್

ಸಿತಾರ ದೇವಿ ತಲೆಯಲ್ಲೂ ಪ್ಲಾನ್

ರಮಣ್ ವಾಪಸ್ ಬರುವಷ್ಟರಲ್ಲಿ ರಾಣಿಗೆ ಒಂದು ಗತಿ ಕಾಣಿಸಬೇಕು ಎಂಬ ಪ್ಲಾನ್ ಸಿತಾರ ದೇವಿ ತಲೆಯಲ್ಲೂ ಇದೆ. ಸಿತಾರ ದೇವಿ ಮಾಡಿರುವ ಪ್ಲಾನ್ ಏನು.? ರಾಣಿ ಎಸ್ಕೇಪ್ ಆಗುವಲ್ಲಿ ಯಶಸ್ವಿ ಆಗ್ತಾಳಾ.? ಕಾದು ನೋಡಬೇಕು.

More from Filmibeat

English summary
Radha Ramana serial written update: Rani plans to escape from Raman's house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X