ಸಿತಾರ ದೇವಿ, ದೀಪಿಕಾ ಜುಟ್ಟು ರಾಣಿ ಕೈಯಲ್ಲಿ: ಇನ್ಮೇಲಿದೆ ಹಬ್ಬ.!

Recommended Video

ಸಿತಾರ, ದೀಪಿಕಾ ಈಗ ರಾಣಿ ಕೈ ಗೊಂಬೆಗಳು..! | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ.

''ಇಷ್ಟು ದಿನ ರಮಣ್ ಮನೆಯಲ್ಲಿ ಇದ್ದದ್ದು ಸಾಕು, ಈ ಟಾರ್ಚರ್ ಬೇಡ'' ಎಂದು ಗಂಟುಮೂಟೆ ಕಟ್ಟಿಕೊಂಡು ಊರು ಬಿಟ್ಟು ಹೋಗಲು ಮುಂದಾಗಿದ್ದ 'ಅವನಿ' ವೇಷಧಾರಿ ರಾಣಿ ಇದೀಗ ಹೊಸ ಆಟ ಶುರು ಮಾಡಿಕೊಂಡಿದ್ದಾಳೆ.

ಓಡಿ ಹೋಗಿದ್ದ ರಾಣಿ, ಮನೆಗೆ ವಾಪಸ್ ಬಂದು ಸಿತಾರ ದೇವಿಗೆ ಚಮಕ್ ಕೊಟ್ಟಿದ್ದಾಳೆ. ಸಿತಾರ ದೇವಿ ಬ್ಲಾಕ್ ಮೇಲ್ ಗೆ ರಾಣಿ ಬಗ್ಗಲಿಲ್ಲ. ಬದಲಾಗಿ, ಸಿತಾರ ದೇವಿಯನ್ನೇ ಟ್ರ್ಯಾಪ್ ಮಾಡಿದ್ದಾಳೆ.

ಅತ್ತ ದೀಪಿಕಾ ಸೀಕ್ರೆಟ್ ಕೂಡ ರಾಣಿಗೆ ಗೊತ್ತಾಗಿದೆ. ರಾಧಾ ಹಾಗೂ ರಮಣ್ ಜೀವನದಲ್ಲಿ ದೀಪಿಕಾ ಆಟ ಆಡುತ್ತಿರುವುದು ರಾಣಿ ಅರಿವಿಗೆ ಬಂದಿದೆ. ಇದನ್ನೆಲ್ಲ ಉಪಯೋಗಿಸಿಕೊಂಡು ಸಿತಾರ ದೇವಿ ಹಾಗೂ ದೀಪಿಕಾ ವಿರುದ್ಧ ರಾಣಿ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೋ, ನೋಡಬೇಕು. ಮುಂದೆ ಓದಿರಿ...

ದುಡ್ಡು ಪೀಕಿದ ರಾಣಿ

ದುಡ್ಡು ಪೀಕಿದ ರಾಣಿ

ಪ್ರಾಜೆಕ್ಟ್ ಗೆ ಸಹಿ ಮಾಡಬೇಕು ಅಂದ್ರೆ, ದುಡ್ಡು ಕೊಡಲೇಬೇಕು ಅಂತ ಸಿತಾರ ದೇವಿ ಮುಂದೆ ರಾಣಿ ಹಠ ಹಿಡಿದಳು. ಬೇರೆ ದಾರಿ ಇಲ್ಲದೆ, ರಾಣಿಗೆ ಸಿತಾರ ದೇವಿ ದುಡ್ಡು ಕೊಡಲೇಬೇಕಾಯಿತು.

ದುಡ್ಡು ಇಲ್ಲ, ಪ್ರಾಜೆಕ್ಟ್ ಇಲ್ಲ.!

ದುಡ್ಡು ಇಲ್ಲ, ಪ್ರಾಜೆಕ್ಟ್ ಇಲ್ಲ.!

ಸಿತಾರ ದೇವಿ ಮಾಡಿದ್ದ ಪ್ರಾಜೆಕ್ಟ್ ನ ರಮಣ್ ಕ್ಯಾನ್ಸಲ್ ಮಾಡಿದರು. ಇದರಿಂದ ಸಿತಾರ ದೇವಿ ಕೈಗೆ ಬಂದಿದ್ದ ದೊಡ್ಡ ಮೊತ್ತ ವಾಪಸ್ ಹೋಯ್ತು. ಅತ್ತ ರಾಣಿಯಿಂದಲೂ ಸಿತಾರ ದೇವಿಗೆ ಲಾಸ್ ಆಯ್ತು.

ವಿಡಿಯೋ ಮಾಡಿದ ರಾಣಿ

ವಿಡಿಯೋ ಮಾಡಿದ ರಾಣಿ

ಸಿತಾರ ದೇವಿಯ ರೌದ್ರಾವತಾರವನ್ನ ರಾಣಿ ವಿಡಿಯೋ ಮಾಡಿದ್ದಾಳೆ. ರಾಣಿಯನ್ನ ಬ್ಲಾಕ್ ಮೇಲ್ ಮಾಡಲು ಹೋಗಿ, ರಾಣಿ ಹಾಕಿದ ಬಲೆಗೆ ಸಿತಾರ ದೇವಿ ಬಿದ್ದಂತಾಗಿದೆ.

ದೀಪಿಕಾಗೆ ಶಾಕ್

ದೀಪಿಕಾಗೆ ಶಾಕ್

ಅತ್ತ ದೀಪಿಕಾಗೂ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾಳೆ ರಾಣಿ. ರಮಣ್ ಕಂಡ್ರೆ ದೀಪಿಕಾಗೆ ಪ್ರೀತಿ ಇದೆ ಎಂಬ ಸತ್ಯ ರಾಣಿಗೆ ಗೊತ್ತು. ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ದೀಪಿಕಾ ನ ರಾಣಿ ಆಟವಾಡಿಸಲು ಮುಂದಾಗಿದ್ದಾಳೆ.

ಮನಸ್ಸು ಬಿಚ್ಚಿ ಮಾತನಾಡ್ತಾರಾ ರಾಧಾ-ರಮಣ್.?

ಮನಸ್ಸು ಬಿಚ್ಚಿ ಮಾತನಾಡ್ತಾರಾ ರಾಧಾ-ರಮಣ್.?

ದೀಪಿಕಾಳಿಂದಾಗಿ ರಾಧಾ ಹಾಗೂ ರಮಣ್ ಮಧ್ಯೆ ಮನಸ್ತಾಪ ಮೂಡಿತ್ತು. ಇದೀಗ ರಾಧಾಗೆ ಕೆಲವು ಸತ್ಯ ಗೊತ್ತಾಗಿರುವ ಕಾರಣ, ಈಗಲಾದರೂ ರಮಣ್ ಮುಂದೆ ಮನಸ್ಸು ಬಿಚ್ಚಿ ಮಾತನಾಡುತ್ತಾರಾ.? ಎಂಬುದೇ ಸದ್ಯದ ಪ್ರಶ್ನೆ.

More from Filmibeat

English summary
Radha Ramana serial written update: Rani takes revenge against Sitara Devi and Deepika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X