'ಇವಳು' ನನ್ನ ಗರ್ಲ್ ಫ್ರೆಂಡ್ ಎಂದು ರಮಣ್ ಕುಟುಂಬಕ್ಕೆ ಶಾಕ್ ಕೊಟ್ಟ ಮಾದ.!

By Harshitha

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಗೆ ದೊಡ್ಡ ತಿರುವು ಸಿಕ್ಕಿದೆ. 'ಅವನಿ' ಹೆಸರಿನಲ್ಲಿ ರಮಣ್ ಮನೆ ಸೇರಿರುವ ರಾಣಿ ಮುಖವಾಡ ಕಳಚಿ ಬೀಳುವ ಹಂತ ತಲುಪಿದೆ. ಸಿತಾರ ದೇವಿ ಕಳ್ಳಾಟ ಬಯಲಾಗುವ ಸಮಯ ಹತ್ತಿರಕ್ಕೆ ಬಂದಿದೆ.

ಹೌದು, 'ರಾಧಾ ರಮಣ' ಧಾರಾವಾಹಿಯಲ್ಲಿ ಸದ್ಯ 'ವಿವಾಹ ವಾರ್ಷಿಕೋತ್ಸವ' ಅಧ್ಯಾಯ ಆರಂಭ ಆಗಿದೆ. ಹೆಸರಿಗೆ 'ರಾಧಾ-ರಮಣ' ಹಾಗೂ 'ಅನ್ವಿತಾ-ಆದಿತ್ಯ' ವಿವಾಹ ವಾರ್ಷಿಕೋತ್ಸವ ನಡೆಯುತ್ತಿದ್ದರೂ, ಪಾರ್ಟಿಯಲ್ಲಿ ದೊಡ್ಡ ಹೈಲೈಟ್ ಆಗಿರುವುದು 'ಅವನಿ'.!

ವಿವಾಹ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ''ಆಸ್ಟ್ರೇಲಿಯಾದ ಪ್ರಾಜೆಕ್ಟ್ 'ಅವನಿ' ಹೆಸರಿಗೆ ಹೋಗುತ್ತಿದೆ'' ಎಂದು ಅನೌನ್ಸ್ ಮಾಡಿ ಸಿತಾರ ದೇವಿಗೆ ರಮಣ್ ಬಿಗ್ ಶಾಕ್ ಕೊಟ್ಟಿದ್ದರು. ಆದ್ರೀಗ, ಅವನಿ ಜೊತೆಗೆ ಮತ್ತದೇ ಮಾದ ಕಾಣಿಸಿಕೊಂಡು ಒಂದೊಂದೇ ಸತ್ಯ ಕಕ್ಕುತ್ತಿರುವುದು ರಮಣ್ ಫ್ಯಾಮಿಲಿಗೆ ಆಘಾತ ತಂದಿದೆ. ಮುಂದೆ ಓದಿರಿ...

ಕಡೆಗೂ ದೀಪಿಕಾ ಪ್ಲಾನ್ ವರ್ಕ್ ಆಯ್ತು.!

ಕಡೆಗೂ ದೀಪಿಕಾ ಪ್ಲಾನ್ ವರ್ಕ್ ಆಯ್ತು.!

ಅವನಿ ಹೆಸರಿನಲ್ಲಿ ಮನೆಗೆ ಬಂದಿರುವ ರಾಣಿಯನ್ನ ಹೊರಗೆ ಹಾಕಲು ಪ್ಲಾನ್ ಮಾಡಿದ್ದ ದೀಪಿಕಾ, ಮಾದನನ್ನ ಪಾರ್ಟಿಗೆ ಇನ್ವೈಟ್ ಮಾಡಿದ್ದಳು. ಇನ್ನೇನು ರಾಣಿಯನ್ನ ಮಾದ ಕರೆದುಕೊಂಡು ಹೋಗಬೇಕು, ಅಷ್ಟರಲ್ಲಿ ಕಣ್ಣೀರು ಸುರಿಸಿದ ರಾಣಿ, ಮಾದನನ್ನ ಸಮಾಧಾನ ಪಡಿಸಿ ಕಳುಹಿಸಿದ್ದಳು. ಪ್ಲಾನ್ ಫ್ಲಾಪ್ ಆಗಲು ಬಿಡದ ದೀಪಿಕಾ ಮರಳಿ ಮಾದನ ತಲೆಗೆ ಹುಳ ಬಿಟ್ಟಳು. ಪರಿಣಾಮ ಪಾರ್ಟಿಯಲ್ಲಿ ಕರೆಂಟ್ ತೆಗೆದು ಯಾರಿಗೂ ಗೊತ್ತಾಗದ ಹಾಗೆ ರಾಣಿಯನ್ನ ಮಾದ ಎಳ್ಕೊಂಡು ಬಂದ.

ಹುಡುಕಾಟ ಶುರು

ಹುಡುಕಾಟ ಶುರು

ಇದ್ದಕ್ಕಿದ್ದ ಹಾಗೆ ಅವನಿ (ರಾಣಿ) ನಾಪತ್ತೆ ಆದ ಕಾರಣ ಎಲ್ಲರೂ ಹುಡುಕಾಟ ಆರಂಭಿಸಿದರು. ರಾಣಿ-ಮಾದ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳಲಿ ಅಂತಲೇ ರಮಣ್ ಗೆ ದೀಪಿಕಾ ಸುಳಿವು ಕೊಟ್ಟಳು.

ರಮಣ್ ಮುಂದೆ ಸಿಕ್ಕಿಬಿದ್ದ ಅವನಿ-ಮಾದ

ರಮಣ್ ಮುಂದೆ ಸಿಕ್ಕಿಬಿದ್ದ ಅವನಿ-ಮಾದ

ರೂಮ್ ಒಂದರಲ್ಲಿ ಮಾದ ಹಾಗೂ ಅವನಿ (ರಾಣಿ) ಮಾತನಾಡುತ್ತಿದ್ದದ್ದು ರಮಣ್ ಕಣ್ಣಿಗೆ ಬಿತ್ತು. ಕ್ಷಣಾರ್ಧದಲ್ಲೇ ಇಡೀ ಕುಟುಂಬ ಆ ರೂಮ್ ನಲ್ಲಿ ಸೇರ್ತು. ಆಗಲೇ ಮಾದ ಸತ್ಯ ಹೇಳಲು ಆರಂಭಿಸಿದ.

'ಇವಳು ನನ್ನ ಗರ್ಲ್ ಫ್ರೆಂಡ್' ಎಂದ ಮಾದ

'ಇವಳು ನನ್ನ ಗರ್ಲ್ ಫ್ರೆಂಡ್' ಎಂದ ಮಾದ

''ಯಾಕೆ ಅವನಿ ಹಿಂದೆ ಬಿದ್ದಿದ್ದೀಯಾ.?'' ಎಂಬ ಪ್ರಶ್ನೆ ಪದೇ ಪದೇ ಕೇಳಿ ಬಂದ ಕಾರಣ ''ಇವಳು ನನ್ನ ಗರ್ಲ್ ಫ್ರೆಂಡ್'' ಎಂದು ಮಾದ ಹೇಳಿಬಿಟ್ಟ. ಮಾದ ಹಾಗೆ ಹೇಳುತ್ತಿದ್ದ ಹಾಗೆಯೇ, ಎಲ್ಲರೂ ಶಾಕ್ ಆದರು. ಸಿತಾರ ದೇವಿ ಆಘಾತಗೊಂಡರು.

ದಿನಕರ್-ದೀಪಿಕಾಗೆ ಖುಷಿ.!

ದಿನಕರ್-ದೀಪಿಕಾಗೆ ಖುಷಿ.!

ಮಾದ ಸತ್ಯ ಹೇಳಲು ಮುಂದಾಗುತ್ತಿದ್ದಂತೆಯೇ, ದೀಪಿಕಾ ಹಾಗೂ ದಿನಕರ್ ಗೆ ಖುಷಿಯೋ ಖುಷಿ. ರಾಣಿ ಬೇಗ ಸಿಕ್ಕಿಬೀಳಲಿ ಅನ್ನೋದೇ ಇವರಿಬ್ಬರ ಗುರಿ.

ಮಾದ ಉಲ್ಟಾ ಹೊಡೆದರೆ.?

ಮಾದ ಉಲ್ಟಾ ಹೊಡೆದರೆ.?

''ಇವಳು ನನ್ನ ಗರ್ಲ್ ಫ್ರೆಂಡ್'' ಅಂತ ಮಾದ ಹೇಳಿದ್ದಾನೆ ಅಷ್ಟೇ. ಆದ್ರೆ, ''ಇವಳು ಅವನಿ ಅಲ್ಲ, ರಾಣಿ'' ಅಂತ ಮಾದ ಇನ್ನೂ ಹೇಳಿಲ್ಲ. ಇಂದಿನ ಸಂಚಿಕೆಯಲ್ಲಿ ಹೇಳ್ತಾನೋ, ಇಲ್ವೋ ಗೊತ್ತಿಲ್ಲ. ಒಂದ್ವೇಳೆ ಹಾಗೆ ಹೇಳದೆ ಮಾದ ಉಲ್ಟಾ ಹೊಡೆದು, ಬೇರೆ ಪ್ಲಾನ್ ಮಾಡಿದರೆ ದೀಪಿಕಾ ಹಾಗೂ ಸಿತಾರ ದೇವಿಗೆ ಕಷ್ಟ ಕಷ್ಟ.

More from Filmibeat

English summary
Radha Ramana serial written update: 'She is my girl friend' says Madha in front of Raman family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X