ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯ ಕಥಾನಕದಲ್ಲಿ ದಿನಕರ್ ಒಂಥರಾ ಹಲ್ಲು ಕಿತ್ತ ಹಾವಿನಂತೆ. ಆಗಾಗ ಸಿತಾರ ದೇವಿ ವಿರುದ್ಧ ಬುಸುಗುಡುವ ದಿನಕರ್, ಕಚ್ಚಲು ಮಾತ್ರ ಯಾವತ್ತೂ ಮನಸ್ಸು ಮಾಡಿಲ್ಲ. ಇದೇ ದಿನಕರ್ ಗೆ ಸದ್ಯ ದೊಡ್ಡ ಶಾಪವಾಗಿ ಪರಿಣಮಿಸಿರುವ ಹಾಗಿದೆ.

ಸಿತಾರ ದೇವಿ ಹೆಣೆದಿರುವ ವ್ಯೂಹದಲ್ಲಿ ದಿನಕರ್ ಸಿಲುಕಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ, ದಿನಕರ್ ಮೇಲೆ ದೊಡ್ಡ ಅಪವಾದ ಹೊರಿಸಲಾಗಿದೆ. ಸಿತಾರ ದೇವಿಗೆ ಚೆಲ್ಲಾಟವಾಗಿದ್ದರೆ, ದಿನಕರ್ ಗೆ ಪ್ರಾಣ ಸಂಕಟ ಎದುರಾಗಿದೆ.

ನೇರವಾಗಿ ದಿನಕರ್ ಟಾರ್ಗೆಟ್ ಆಗಿದ್ದರೂ, ಅದರ ಅಡ್ಡ ಪರಿಣಾಮ ರಾಧಾ-ರಮಣ್ ಸಂಸಾರದ ಮೇಲೆ ಬೀಳುವ ಹಾಗೆ ಮಾಡುವುದು ಸಿತಾರ ದೇವಿ ಸ್ಕೆಚ್ ಆಗಿರಬಹುದು. ಮುಂದೆ ಓದಿರಿ...

ಸಿತಾರ ದೇವಿ ಮೇಲೆ ಅಟ್ಯಾಕ್

ಸಿತಾರ ದೇವಿ ಮೇಲೆ ಅಟ್ಯಾಕ್

ಸಿತಾರ ದೇವಿ ಮೇಲೆ ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ಈ ಅಟ್ಯಾಕ್ ಹಿಂದೆ ಬೇರೆ ಯಾರ ಕೈವಾಡವೂ ಇಲ್ಲ. ಅಷ್ಟಕ್ಕೂ, ಸಿತಾರ ದೇವಿ ಪ್ಲಾನ್ ಪ್ರಕಾರ, ಈ ನಾಟಕದ ಅಟ್ಯಾಕ್ ನಡೆದಿದ್ದು, ದಿನಕರ್ ಮೇಲೆ ಅಪವಾದ ಬರುವ ಹಾಗೆ ನೋಡಿಕೊಳ್ಳಲಾಗಿದೆ.

ಎಲ್ಲರಿಗೂ ದೊಡ್ಡ ಶಾಕ್

ಎಲ್ಲರಿಗೂ ದೊಡ್ಡ ಶಾಕ್

ಸಿತಾರ ದೇವಿ ಮೇಲೆ ನಡೆದ ಅಟ್ಯಾಕ್ ಹಿಂದೆ ದಿನಕರ್ ಇದ್ದಾರೆ ಎಂದು ಪೊಲೀಸರು ಹೇಳಿದ ಕೂಡಲೆ ಮನೆಯವರೆಲ್ಲರಿಗೂ ದೊಡ್ಡ ಆಘಾತ ಆಗಿದೆ. ಮೊದಲೇ ರಮಣ್ ಗೆ ದಿನಕರ್ ಕಂಡ್ರೆ ಆಗಲ್ಲ. ಈಗ ದಿನಕರ್ ಮೇಲೆ ಈ ಆರೋಪ ಬಂದಿರುವ ಕಾರಣ ರಮಣ್ ಗೆ ಇನ್ನಷ್ಟು ಕೋಪ ಬರುವುದರಲ್ಲಿ ಡೌಟೇ ಬೇಡ.

ದಿನಕರ್ ಮೇಲೆ ರಾಧಾಗೆ ನಂಬಿಕೆ

ದಿನಕರ್ ಮೇಲೆ ರಾಧಾಗೆ ನಂಬಿಕೆ

ದಿನಕರ್ ಮೇಲೆ ಪುತ್ರಿ ಅನ್ವಿತಾ ಮತ್ತು ಸೊಸೆ ರಾಧಾಗೆ ಅಪಾರ ನಂಬಿಕೆ. ಆದ್ರೆ, ಈ ಆರೋಪದ ಬಗ್ಗೆ ಇವರಿಬ್ಬರು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

ದೂರವಾಗುತ್ತಾರಾ ರಾಧಾ-ರಮಣ್.?

ದೂರವಾಗುತ್ತಾರಾ ರಾಧಾ-ರಮಣ್.?

ಸಿತಾರ ದೇವಿ, ದೀಪಿಕಾ ಮತ್ತು ರಾಣಿ.. ಈ ಮೂವರ ಅಜೆಂಡಾ ಒಂದೇ. ಅದೇ 'ರಾಧಾ ಮತ್ತು ರಮಣ್' ಸಂಸಾರ ಒಡೆಯುವುದು. ದಿನಕರ್ ಮೇಲೆ ಬಂದಿರುವ ಅಪವಾದದಿಂದ ರಾಧಾ ಮತ್ತು ರಮಣ್ ದೂರ ಆಗುತ್ತಾರಾ.? ಕಾದು ನೋಡಬೇಕು.

More from Filmibeat

English summary
Radha Ramana serial written update: Sitara Devi attacked, Dinakar in trouble.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X