ಸಿಕ್ಕಿಬಿದ್ದ ಸಿತಾರ ದೇವಿ: ಸಿಡಿಮಿಡಿಗೊಂಡ ರಮಣ್.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ರೋಚಕ ತಿರುವು ಸಿಕ್ಕಿದೆ. ಇಷ್ಟು ದಿನ ತಮ್ಮ ತಾಳಕ್ಕೆ ತಕ್ಕಂತೆ ಇಡೀ ಮನೆಯನ್ನ ಕುಣಿಸುತ್ತಿದ್ದ ಸಿತಾರ ದೇವಿ ವಿರುದ್ಧ ರಮಣ್ ಸಿಡಿದೆದ್ದಿದ್ದಾನೆ.
ರಮಣ್ ಮುಂದೆ ಸಿತಾರ ದೇವಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾಳೆ. ಸಿತಾರ ದೇವಿಯನ್ನ ರಮಣ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಸಿತಾರ ದೇವಿ ಮುಂದೆ ಎಂದೂ ಏರು ಧ್ವನಿಯಲ್ಲಿ ಮಾತನಾಡದ ರಮಣ್, ಇದೀಗ ಸಿತಾರ ದೇವಿಗೆ ಬಿಸಿ ಮುಟ್ಟಿಸಿದ್ದಾನೆ.
ಮಾದನನ್ನ ಕಿಡ್ನ್ಯಾಪ್ ಮಾಡಿ ರಾಣಿಯನ್ನ ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳಲು ಸಿತಾರ ದೇವಿ ಪ್ಲಾನ್ ಮಾಡಿದ್ದಳು. ಆದ್ರೆ, ಅಷ್ಟರಲ್ಲಿ ರಮಣ್ ಗೆ 'ಕಿಡ್ನ್ಯಾಪ್' ವಿಚಾರ ಗೊತ್ತಾದ ಕಾರಣ, ಸಿತಾರ ದೇವಿ ಪ್ಲಾನ್ ಉಲ್ಟಾ ಪಲ್ಟಾ ಆಯ್ತು. ಮುಂದೆ ಓದಿರಿ...

ಮಾದನನ್ನು ಕಿಡ್ನ್ಯಾಪ್ ಮಾಡಲು ಸಿತಾರ ದೇವಿ ಪ್ಲಾನ್
ಅತ್ತ ರಾಣಿ ತನ್ನ ಲಿಮಿಟ್ ಮೀರಿ ವರ್ತಿಸುತ್ತಿದ್ದ ಕಾರಣ, ಮಾದನನ್ನ ಕಿಡ್ನ್ಯಾಪ್ ಮಾಡಲು ಸಿತಾರ ದೇವಿ ಪ್ಲಾನ್ ಮಾಡಿದ್ದಳು. ಇತ್ತ ಮಾದನ ಜೊತೆಗೆ ಒಮ್ಮೆ ಮಾತುಕತೆ ನಡೆಸಲು ರಾಧಾ-ರಮಣ್ ಮಾದನ ಮನೆ ಕಡೆ ಹೋದರು. ಮಾದನ ಮನೆಯಲ್ಲಿ ನಡೆಯುತ್ತಿದ್ದ ಗಲಭೆ ಕಂಡು ರಾಧಾ-ರಮಣ್ ಶಾಕ್ ಆದರು.

ಎಲ್ಲವೂ ಮಾದನ ಪ್ಲಾನ್
ತಾನೇ ಹುಡುಗರನ್ನು ಕರೆಯಿಸಿಕೊಂಡು, ತನಗೆ ಹೊಡೆಯಲು ಹೇಳಿ ಕೊನೆಗೆ ನಿಮ್ಮ ಸಿತಾರ ದೇವಿ ಕಳುಹಿಸಿರುವ ಹುಡುಗರು ಇವರು ಮಾದ, ರಾಧಾ-ರಮಣ್ ಗೆ ಹೇಳಿದ. ಇದು ರಮಣ್ ಗೆ ದೊಡ್ಡ ಶಾಕ್ ನೀಡ್ತು.

ಸಿತಾರ ದೇವಿಗೆ ರಮಣ್ ಕ್ಲಾಸ್
ರೌಡಿಗಳ ಜೊತೆಗೆ ಲಿಂಕ್ ಹೊಂದಿರುವ ಸಿತಾರ ದೇವಿಗೆ ರಮಣ್ ಕ್ಲಾಸ್ ತೆಗೆದುಕೊಂಡರು. ಕೊನೆಗೆ ತಮ್ಮ ಹುಡುಗರು ಮಾದನ ಮೇಲೆ ಕೈ ಮಾಡಿಲ್ಲ ಅಂತ ಸತ್ಯ ಸಿತಾರ ದೇವಿಗೆ ಖಚಿತ ಆಯ್ತು. ಆಗ ಸಿತಾರ ದೇವಿ ಭಾವುಕರಾಗಿ ಮಾತನಾಡಿದರು.

ಸಿತಾರ ಸೆರೆಯಲ್ಲಿ ಮಾದ
ನಂತರ ತನ್ನ ಸೆರೆಯಲ್ಲಿ ಮಾದ ಸಿಕ್ಕಿಬಿದ್ದಿದ್ದಾನೆ ಅಂತ ಸಿತಾರ ದೇವಿ ಬೀಗುವ ಹೊತ್ತಿಗೆ ರಮಣ್ ಗೆ ಸತ್ಯ ಗೊತ್ತಾಯ್ತು. ಮನೆಯಲ್ಲಿ ದೊಡ್ಡ ರಂಪಾಟ ನಡೆಯಿತು. ಕೊನೆಗೆ ಮಾದನನ್ನ ಬಿಡುಗಡೆ ಮಾಡುವಂತೆ ಸಿತಾರ ಸೂಚನೆ ನೀಡಿದಳು. ಇಲ್ಲಿ ಮತ್ತೊಂದು ಬಾರಿಗೆ ಗೆಲುವು ಸಿಕ್ಕಿದ್ದು ರಾಣಿ-ಮಾದಗೆ. ಸೋಲು ಕಂಡ ಸಿತಾರ ದೇವಿ ಇನ್ನೂ ಸುಮ್ಮನೆ ಕೂರ್ತಾಳಾ.?


Click it and Unblock the Notifications











