ಅತ್ತ ವಿನಯ್ ಕೊಲೆ, ಇತ್ತ 'ಅವನಿ' ಕಾಣೆ: ಅಯ್ಯೋ ದೇವರೇ.!
Recommended Video

ಯಾವುದು ಆಗಬಾರದು ಅಂತ ವೀಕ್ಷಕರ ಬೇಡಿಕೊಳ್ತಿದ್ರೋ, ಅದು ನಿನ್ನೆಯ 'ರಾಧಾ ರಮಣ' ಸಂಚಿಕೆಯಲ್ಲಿ ಆಗೇ ಹೋಯ್ತು.
ಅಂತೂ, ಇಂತೂ... ಇಷ್ಟು ದಿನಗಳ ನಂತರ 'ಅವನಿ' ಮುಖವನ್ನ ಕುಟುಂಬದವರು ನೋಡ್ತಾರೆ ಅಂತ ವೀಕ್ಷಕರು ಕಾಯ್ತಿದ್ರು. ಆದ್ರೆ, ನಿರ್ದೇಶಕರು ಮಾತ್ರ ಇನ್ನೂ 'ಅವನಿ' ದರ್ಶನವನ್ನ ವೀಕ್ಷಕರಿಗೂ ಮಾಡಿಸಿಲ್ಲ, ಕುಟುಂಬದವರಿಗೂ ಮಾಡಿಸಿಲ್ಲ. ಸದ್ಯಕ್ಕೆ 'ಅವನಿ' ಮುಖ ದರ್ಶನ ಆಗುವ ಯಾವುದೇ ಸೂಚನೆ ಕೂಡ ಕಾಣಿಸ್ತಿಲ್ಲ. ಯಾಕಂದ್ರೆ, 'ಅವನಿ' ಮತ್ತೆ ರುದ್ರನ ಕೈಸೇರಿದ್ದಾಳೆ.
ಇನ್ನೇನು ದೀಪಿಕಾ ಪ್ಲಾನ್ ನಂತೆ 'ಅವನಿ'ಯನ್ನ ವಿನಯ್ ಕಿಡ್ನ್ಯಾಪ್ ಮಾಡಬೇಕಿತ್ತು. ಆದ್ರೆ, ಅಷ್ಟರಲ್ಲಿ ವಿನಯ್ ಕೊಲೆಯಾಗಿದ್ದಾನೆ. 'ಅವನಿ'ಯನ್ನ ರುದ್ರ ಕರೆದುಕೊಂಡು ಹೋಗಿದ್ದಾನೆ. ಮುಂದೆ ಓದಿರಿ...

ರಮಣ್ ಗೆ ಕಾದಿದ್ದು ಶಾಕ್.!
ವರ್ಷಗಳ ಬಳಿಕ ತಂಗಿ 'ಅವನಿ'ಯನ್ನ ನೋಡಲು ತುದಿಗಾಲಲ್ಲಿ ನಿಂತಿದ್ದ ರಮಣ್ ಗೆ ಪ್ರಕೃತಿ ಆಸ್ಪತ್ರೆಯಲ್ಲಿ ಶಾಕ್ ಕಾದಿತ್ತು. ಐ.ಸಿ.ಯು ಒಳಗೆ ರಮಣ್ ಕಾಲಿಡುವಷ್ಟರಲ್ಲಿ 'ಅವನಿ' ಕಾಣೆಯಾಗಿದ್ದಳು.

'ಅವನಿ'ಗಾಗಿ ಮತ್ತೆ ಹುಡುಕಾಟ.!
ಐ.ಸಿ.ಯು ನಿಂದ ಇದ್ದಕ್ಕಿದ್ದಂತೆ ಮಾಯವಾಗಿದ್ದ 'ಅವನಿ'ಯನ್ನ ಹುಡುಕಲು ರಮಣ್ ಹಾಗೂ ಆಸ್ಪತ್ರೆ ವೈದ್ಯರು ಆರಂಭಿಸುತ್ತಾರೆ. 'ಅವನಿ'ಯನ್ನ ರುದ್ರ ಕರೆದುಕೊಂಡು ಹೋಗುತ್ತಿರುವುದು ಸಿ.ಸಿ.ಟಿ.ವಿ ಪರಿಶೀಲಿಸಿದ್ಮೇಲೆ ಗೊತ್ತಾಗಿದ್ದು.

ದೀಪಿಕಾಗೆ ಬಿಗ್ ಶಾಕ್.!
ತನ್ನ ಪ್ಲಾನ್ ನಂತೆ 'ಅವನಿ'ಯನ್ನ ವಿನಯ್ ಕಿಡ್ನ್ಯಾಪ್ ಮಾಡಿದ್ದಾನೆ ಅಂತ ಖುಷಿಯಲ್ಲಿದ್ದ ದೀಪಿಕಾಗೆ ದೊಡ್ಡ ಶಾಕ್ ಕಾದಿತ್ತು. ಆಸ್ಪತ್ರೆ ಆವರಣದಲ್ಲೇ ವಿನಯ್ ಕೊಲೆಯಾಗಿದ್ದಾನೆ. ವಿನಯ್ ಕತ್ತು ಸೀಳಿ ಹತ್ಯೆ ಮಾಡಿದ್ದು ಯಾರು ಅನ್ನೋದು ಮಾತ್ರ ನಿಗೂಢ.

ಅಯ್ಯೋ ದೇವರೇ.!
ಈಗಲಾದರೂ 'ಅವನಿ'ಯನ್ನ ಕುಟುಂಬದವರು ನೋಡ್ತಾರೆ ಅಂತ ಭಾವಿಸಿದ್ದ ವೀಕ್ಷಕರಿಗೆ ನಿನ್ನೆ ಸಂಚಿಕೆಯಲ್ಲಿ ಸಿಕ್ಕಿದ್ದು ಈ ಟ್ವಿಸ್ಟ್. ಇದನ್ನೆಲ್ಲ ನೋಡಿ ವೀಕ್ಷಕರು ತಲೆ ಮೇಲೆ ಕೈ ಇಟ್ಟು ''ಅಯ್ಯೋ ದೇವರೇ.!'' ಅಂತ ಗೊಣಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ವೀಕ್ಷಕರಿಗೆ ಇನ್ನೇನ್ ಶಾಕ್ ಕಾದಿದ್ಯೋ... ಆ ದೇವರೇ ಬಲ್ಲ.!


Click it and Unblock the Notifications











