ಜಿದ್ದಿಗೆ ಬಿದ್ದ ದೀಪು: ಇವತ್ತಾದರೂ ರಾಣಿ ಬಂಡವಾಳ ಬಯಲು.?
Recommended Video

'ರಾಧಾ ರಮಣ' ಧಾರಾವಾಹಿಯ ಸಿತಾರ ದೇವಿ ಎಷ್ಟು ಖತರ್ನಾಕೋ, ಅಷ್ಟೇ ಖಿಲಾಡಿ ಆಕೆಯ ಮಗಳು ದೀಪಿಕಾ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವಂತೆ ದೀಪಿಕಾ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಸಿತಾರ ದೇವಿಗೆ ಉಲ್ಟಾ ಕೂಡ ಹೊಡೆಯಬಹುದು.
ತಾಯಿ ಮೇಲೆ ನಂಬಿಕೆ ಇಲ್ಲದೆ, ಈಗಾಗಲೇ ಒಮ್ಮೆ ದೀಪಿಕಾ ಪ್ಲಾನ್ ಮಾಡಿದ್ದಕ್ಕೆ ಮನೆಯೊಳಗೆ ಅವನಿ ಬರುವ ಹಾಗೆ ಆಗಿದ್ದು. ಆದ್ರೆ, ಅಷ್ಟರಲ್ಲಿ ಸಿತಾರ ದೇವಿ ಎಚ್ಚರ ವಹಿಸಿದ ಕಾರಣಕ್ಕೆ ಅವನಿ ಜಾಗಕ್ಕೆ ರಾಣಿ ರೀಪ್ಲೇಸ್ ಆದಳು.
ಕೊಟ್ಟಿರುವ ಕೆಲಸವನ್ನ ಮಾಡದೆ ಅತಿ ಬುದ್ಧಿ ಉಪಯೋಗಿಸುತ್ತಿರುವ ರಾಣಿ ಬಗ್ಗೆ ದೀಪಿಕಾಗೆ ಕೊಂಚ ಕೂಡ ಇಷ್ಟ ಇಲ್ಲ. ಸ್ನೇಹಿತನ ಮೀಟ್ ಮಾಡಲು, ಬಾಯ್ ಫ್ರೆಂಡ್ ನ ಭೇಟಿ ಆಗಲು ಸುಳ್ಳು ಹೇಳಿ ಹೊರಗೆ ಹೋಗುವ ರಾಣಿ ಈಗಾಗಲೇ ಒಮ್ಮೆ ದೀಪಿಕಾಳನ್ನ ಪೇಚಿಗೆ ಸಿಲುಕಿಸಿದ್ದಾಳೆ.
ಇದರಿಂದ ರೊಚ್ಚಿಗೆದ್ದಿರುವ ದೀಪಿಕಾ, ರಾಣಿ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಹೇಗಾದರೂ ಮಾಡಿ ಮನೆಯಿಂದ ರಾಣಿಯನ್ನ ಹೊರಗೆ ಹಾಕಬೇಕು ಅಂತ ದೀಪಿಕಾ ಪಣ ತೊಟ್ಟಿದ್ದಾಳೆ. ಇದರಿಂದ ಸಿತಾರ ದೇವಿ ಬುಡಕ್ಕೆ ಬೆಂಕಿ ಬಿದ್ದರೂ ಅಚ್ಚರಿ ಇಲ್ಲ. ಮುಂದೆ ಓದಿರಿ...

ದೀಪಿಕಾ ಕಪಾಳಕ್ಕೆ ಹೊಡೆದ ರಾಣಿ
ದೀಪಿಕಾ ಹಾಗೂ ರಾಣಿ ಮಧ್ಯೆ ಮೊದಲಿನಿಂದಲೂ ಕೋಳಿ ಜಗಳ ನಡೆಯುತ್ತಲೇ ಇದೆ. ''ಮನೆಯಲ್ಲಿ ನಾನೇ ಪವರ್ ಫುಲ್'' ಅಂತ ತೋರಿಸಿಕೊಳ್ಳಲು ರಾಣಿ ಮಾಡುತ್ತಿರುವ ನಾಟಕ ದೀಪಿಕಾಗೆ ಸಹಿಸಲು ಆಗುತ್ತಿಲ್ಲ. ರಾಣಿ ಹಾಗೂ ದೀಪಿಕಾ ಮಧ್ಯೆ ಮಾತಿಗೆ ಮಾತು ಬೆಳೆದು ರಾಣಿ ಕೆನ್ನೆಗೆ ದೀಪಿಕಾ ಹೊಡೆದಳು. ಆಕೆ ತನಗೆ ದುಡ್ಡು ಕೊಡುವ ಬಾಸ್ ಮಗಳು ಅನ್ನೋದನ್ನೂ ಲೆಕ್ಕಿಸದೆ ದೀಪಿಕಾ ಕಪಾಳಕ್ಕೆ ರಾಣಿ ಹೊಡೆದು ಬಿಟ್ಟಳು. ಇಲ್ಲಿಂದಲೇ ದೀಪಿಕಾಗೆ ರಾಣಿ ಮೇಲೆ ಜಿದ್ದು ಶುರುವಾಗಿದ್ದು.!

ರಾಣಿಯನ್ನ ಹೊರ ಹಾಕದೇ ಬಿಡಲ್ಲ.!
ಕಪಾಳಕ್ಕೆ ಹೊಡೆದ ರಾಣಿಯನ್ನ ಮನೆಯಿಂದ ಹೊರ ಹಾಕಲು ದೀಪಿಕಾ ಸಂಚು ರೂಪಿಸಿದ್ದಾಳೆ. ರಾಣಿ ಮುಖವಾಡವನ್ನ ಬಯಲು ಮಾಡಲು ದೀಪಿಕಾ ಪ್ಲಾನ್ ಮಾಡಿದ್ದಾಳೆ.

ರಾಣಿ ಕೈ ಸುಟ್ಟ ಸಿತಾರ ದೇವಿ
''ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು'' ಎಂಬುದನ್ನ ಸಾಬೀತು ಪಡಿಸಲು ರಾಣಿ ಕೈ ಸುಟ್ಟಿದ್ದಾರೆ ಸಿತಾರ ದೇವಿ.

ಪಾರ್ಕ್ ನಲ್ಲಿ ಹೆಂಗಳೆಯರು
ರಾಣಿ ಕೈಗೆ ಬ್ಯಾಂಡೇಜ್ ಹಾಕಿಕೊಂಡು ಕೂತ ಮೇಲೆ ಪಾರ್ಕ್ ಗೆ ಹೋಗುವ ಪ್ಲಾನ್ ಮಾಡಿದ್ದು ದೀಪಿಕಾ. ಅದಾಗಲೇ ಪಾರ್ಕ್ ನಲ್ಲಿ ರಾಣಿ ಬಾಯ್ ಫ್ರೆಂಡ್ ಮಾದ ಎಂಟ್ರಿಕೊಟ್ಟಿದ್ದಾಗಿದೆ. ಈಗ ಮನೆ ಮಂದಿ ಮುಂದೆ ಬಂದು ರಾಣಿಯನ್ನ ಮಾದ ಕರೆದುಕೊಂಡು ಹೋಗ್ತಾನಾ.?

ಬೇರೆ ಸ್ಕೆಚ್ ಹಾಕಿದ ದಿನಕರ್.!
ಇತ್ತ ರಾಣಿ ಸ್ನೇಹಿತ ಸತೀಶ್ ಫೋನ್ ನಂಬರ್ ಪಡೆದು ಆತನಿಗೊಂದು ಡೀಲ್ ಕೊಡಲು ದಿನಕರ್ ರೆಡಿ ಆಗಿದ್ದಾರೆ. ಅದು ಸಕ್ಸಸ್ ಆಗುತ್ತಾ.?

ರಮಣ್ ಘೋಷಿಸುವ ಮುನ್ನ ರಾಣಿ ಬಂಡವಾಳ ಬಯಲು.!
ಏನೇ ಆದರೂ ರಾಣಿಗೆ ರಮಣ್ ಆಸ್ತಿ ಹೋಗಬಾರದು, ವಿವಾಹ ವಾರ್ಷಿಕೋತ್ಸವದ ದಿನ ರಮಣ್ ಆಸ್ತಿ ಹಂಚಿಕೆ ಬಗ್ಗೆ ಘೋಷಣೆ ಮಾಡುವ ಮುನ್ನ ರಾಣಿ ಬಂಡವಾಳ ಬಯಲಾಗಬೇಕು ಎಂಬುದು ದಿನಕರ್ ಇಚ್ಛೆ. ಇತ್ತ, ಆನಿವರ್ಸರಿ ದಿನವೇ ರಾಣಿ ಮುಖವಾಡ ಕಳಚಲು ದೀಪಿಕಾ ಹೊಂಚು ಹಾಕಿದ್ದಾಳೆ. ಮುಂದೇನಾಗುವುದೋ, 'ರಾಧಾ ರಮಣ' ಧಾರಾವಾಹಿ ನಿರ್ದೇಶಕರೇ ಬಲ್ಲ.!


Click it and Unblock the Notifications











