'ರಮಣ್' ಮುಂದೆ ಸತ್ಯ ಹೇಳ್ತಾರಾ ದಿನಕರ್.?
Recommended Video

ದಿನಕರ್ ಕಂಡ್ರೆ ರಮಣ್ ಗೆ ಕೆಂಡದಷ್ಟು ಕೋಪ. ದಿನಕರ್ ಕಿಡ್ನ್ಯಾಪ್ ಆಗಿದ್ದಾಗಲೂ, ಅವರನ್ನ ಹುಡುಕಿಸುವ ಪ್ರಯತ್ನ ರಮಣ್ ಮಾಡಲಿಲ್ಲ. ಹೀಗಿದ್ದರೂ, ಸದ್ಯ ರಮಣ್ ಜೊತೆಗೆ ಮಾತನಾಡಲು ಆಫೀಸಿಗೆ ದಿನಕರ್ ಆಗಮಿಸಿದ್ದಾರೆ.
ಹೊಸ ಪ್ರಾಜೆಕ್ಟ್ ನ ಅವನಿ ಹೆಸರಿಗೆ ಬರೆಯಲು ರಮಣ್ ಉತ್ಸುಕರಾಗಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವಿಷಯವನ್ನ ಬಹಿರಂಗ ಪಡಿಸಬೇಕು ಅನ್ನೋದು ರಮಣ್ ಆಸೆ.
ರಮಣ್ ತಾಯಿ ಹಾಗೂ ಪತ್ನಿ ರಾಧಾಗೆ ಬಿಟ್ಟರೆ ಬೇರೆ ಯಾರಿಗೂ ಈ ವಿಚಾರ ಗೊತ್ತಿಲ್ಲ. ಹಾಗೂ ಹೀಗೂ ದಿನಕರ್ ಮುಂದೆ ಈ ವಿಷಯವನ್ನ ರಾಧಾ ಬಾಯ್ಬಿಟ್ಟರು.

''ಯಾವುದೇ ಕಾರಣಕ್ಕೂ ಅವನಿ ಹೆಸರಿಗೆ ಯಾವುದೇ ಪ್ರಾಜೆಕ್ಟ್ ಹೋಗಬಾರದು. ಹಾಗೊಂದು ವೇಳೆ ಆದರೆ ದೊಡ್ಡ ಅನಾಹುತ ಆಗುತ್ತೆ. ಯಾಕಂದ್ರೆ, ಅವಳು ಅವನಿ ಅಲ್ಲ'' ಅಂತ ಬಾಯ್ತಪ್ಪಿ ರಾಧಾ ಮುಂದೆ ದಿನಕರ್ ಹೇಳ್ಬಿಟ್ಟರು.
ಬಳಿಕ ''ಅವನಿ ಆರೋಗ್ಯ ಪರಿಸ್ಥಿತಿ ಸರಿಯಿಲ್ಲ. ಈ ಸಮಯದಲ್ಲಿ ಅವನಿ ಹೆಸರಿಗೆ ಆಸ್ತಿ ಬರೆಯುವುದು ಬೇಡ'' ಅಂತ ಮ್ಯಾನೇಜ್ ಮಾಡಲು ದಿನಕರ್ ಪ್ರಯತ್ನ ಪಟ್ಟರು. ದಿನಕರ್ ಎಷ್ಟೇ ಹೇಳಿದರೂ ಅದರ ಸೂಕ್ಷ್ಮತೆ ರಾಧಾಗೆ ಅರ್ಥ ಆಗಲಿಲ್ಲ.
ಹೀಗಾಗಿ, ನೇರವಾಗಿ ರಮಣ್ ಜೊತೆಗೆ ಮಾತನಾಡೋಣ ಅಂತ ದಿನಕರ್ ಆಫೀಸಿಗೆ ಎಂಟ್ರಿ ಕೊಟ್ಟಿದ್ದಾರೆ. ಈಗಲಾದರೂ, ರಮಣ್ ಗೆ ಸತ್ಯ ಗೊತ್ತಾಗುತ್ತಾ.? ಕಾದು ನೋಡಬೇಕು.


Click it and Unblock the Notifications











