ಈಗ ರಾಣಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಕಷ್ಟ ಕಷ್ಟ.!

By Harshitha

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ಇಷ್ಟು ದಿನ ರಮಣ್ ಮನೆಯಲ್ಲಿ ಸಿತಾರ ದೇವಿ ಆಜ್ಞೆ ಮೇರೆಗೆ 'ಅವನಿ' ಅಂತ ಹೇಳಿಕೊಂಡು ಡ್ರಾಮಾ ಮಾಡ್ತಿದ್ದ ರಾಣಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುವ ಸಮಯ ಹತ್ತಿರಕ್ಕೆ ಬಂದಿದೆ.

''ಮನೆಯಲ್ಲಿ ನಾನೇ ಪವರ್ ಫುಲ್'' ಅಂತ ತೋರಿಸಿಕೊಳ್ಳಲು ರಾಣಿ ಮಾಡುತ್ತಿದ್ದ ನಾಟಕ ದೀಪಿಕಾಗೆ ಇಷ್ಟ ಆಗಲಿಲ್ಲ. ಅದ್ರಲ್ಲೂ, ದೀಪಿಕಾ ಕಪಾಳಕ್ಕೆ ರಾಣಿ ಹೊಡೆದ ಮೇಲೆ ಸೇಡು ತೀರಿಸಿಕೊಳ್ಳಲು ದೀಪಿಕಾ ಸಜ್ಜಾದಳು.

ಹೇಗಾದರೂ ಮಾಡಿ ರಾಣಿಯನ್ನ ಮನೆಯಿಂದ ಹೊರಗೆ ಹಾಕಬೇಕು ಅಂತ ಸಂಚು ರೂಪಿಸಿ ರಾಣಿಯೂ ಸೇರಿದಂತೆ ಹೆಣ್ಮಕ್ಕಳ ಗ್ಯಾಂಗ್ ನ ದೀಪಿಕಾ ಪಾರ್ಕ್ ಗೆ ಕರೆದುಕೊಂಡು ಬಂದಳು.

Radha Ramana serial: Will Rani get caught.?

ರಾಣಿ ಬಾಯ್ ಫ್ರೆಂಡ್ 'ಮಾದ'ನನ್ನೂ ಪಾರ್ಕ್ ಗೆ ಬರುವ ಹಾಗೆ ದೀಪಿಕಾ ನೋಡಿಕೊಂಡಳು. ಇಷ್ಟೆಲ್ಲ ಆದ್ಮೇಲೆ, ರಾಣಿ-ಮಾದ ಪಾರ್ಕ್ ನಲ್ಲಿ ಭೇಟಿ ಆದರು. ರಾಣಿ-ಮಾದ ಮಾತನಾಡುತ್ತಿದ್ದನ್ನ ನೋಡಿ ರಾಧಾ ಹಾಗೂ ಅನ್ವಿತಾ ಶಾಕ್ ಆಗಿದ್ದಾರೆ.

ಮಾದನ ಜೊತೆಗೆ ರಾಣಿ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಆದ್ದರಿಂದ, ಈಗ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ರಾಣಿಗೆ ಕಷ್ಟಕಷ್ಟ.

ಕೆಲ ಆಸ್ತಿಗಳನ್ನ 'ಅವನಿ' ಹೆಸರಿಗೆ ರಮಣ್ ಬರೆಯುವ ಮುನ್ನ ರಾಣಿ ಮುಖವಾಡ ಕಳಚಿ ಬೀಳಬೇಕು. ಇದಕ್ಕಾಗಿ ದಿನಕರ್ ಕೂಡ ಹರಸಾಹಸ ಮಾಡುತ್ತಿದ್ದಾರೆ. ಇನ್ನೂ ದೀಪಿಕಾ ಕೂಡ ರಾಣಿ ವಿರುದ್ದ ತಿರುಗಿ ಬಿದ್ದಿರುವುದರಿಂದ ರಾಣಿ ಎಸ್ಕೇಪ್ ಆಗುವುದು ಆಲ್ಮೋಸ್ಟ್ ಡೌಟೇ.!

ಈಗಲಾದರೂ, ರಾಣಿ ಸಿಕ್ಕಿಬಿದ್ದು ನಿಜವಾದ 'ಅವನಿ' ಮನೆ ಸೇರಿದರೆ ಮನೆ ಮಂದಿಗಿಂತ ವೀಕ್ಷಕರಿಗೆ ಹೆಚ್ಚು ಖುಷಿ ಅಲ್ಲವೇ.?!

More from Filmibeat

English summary
Radha Ramana serial written update: Will Rani get caught.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X