ಬೆದರಿ ಬೆಂಡಾದ ಸಿತಾರ ದೇವಿ: ಕಿಡ್ನ್ಯಾಪ್ ಆಗಿದ್ದಾಳಾ 'ಅವನಿ'?

By Harshitha

ಇಷ್ಟು ವರ್ಷ ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದ ಸಿತಾರ ದೇವಿಯ ಸುಳ್ಳಿನ ಸಾಮ್ರಾಜ್ಯ ಇದೀಗ ಕುಸಿದು ಬೀಳುವ ಹಂತಕ್ಕೆ ಬಂದಿದೆ. ಯಾವುದು ಆಗಬಾರದು ಅಂತ ಸಿತಾರ ದೇವಿ ಇಷ್ಟು ದಿನ ಜಾಗರೂಕತೆ ವಹಿಸಿದ್ರೋ, ಅದೀಗ ಘಟಿಸುವ ಸಾಧ್ಯತೆ ಹೆಚ್ಚಾಗಿದೆ.

'ಅವನಿ' ಅನಾರೋಗ್ಯದ ಬಗ್ಗೆ ರಮಣ್ ಅಂಡ್ ಫ್ಯಾಮಿಲಿಗೆ ಸತ್ಯ ಗೊತ್ತಾಗಿದೆ. 'ಅವನಿ' ಚಿಕಿತ್ಸೆ ಪಡೆಯುತ್ತಿರುವ ಪ್ರಕೃತಿ ಆಸ್ಪತ್ರೆಗೆ ರಮಣ್ ಕುಟುಂಬ ಬಂದು ತಲುಪಿದ್ದಾಗಿದೆ.

ಪ್ರಕೃತಿ ಆಸ್ಪತ್ರೆಯಲ್ಲಿ 'ಅವನಿ' ಸ್ಟಾಫ್ ಅಥವಾ ಡಾಕ್ಟರ್ ಆಗಿರಬಹುದು ಎಂದು ರಮಣ್ ಊಹಿಸಿದ್ದರು. ಆದ್ರೆ, ಹಾಸ್ಪಿಟಲ್ ನಲ್ಲಿ 'ಅವನಿ' ಪೇಷೆಂಟ್ ನಂಬರ್ 111 ಎಂಬ ಕಹಿ ಸತ್ಯ ರಮಣ್ ಅರಿವಿಗೆ ಬಂದಿದೆ. ಮುಂದೆ ಓದಿರಿ...

ವೈದ್ಯರಿಗೆ ಏನೂ ಗೊತ್ತಿಲ್ಲ.!

ವೈದ್ಯರಿಗೆ ಏನೂ ಗೊತ್ತಿಲ್ಲ.!

ಪೇಷೆಂಟ್ ನಂಬರ್ 111 ಬಗ್ಗೆ ಪ್ರಕೃತಿ ಆಸ್ಪತ್ರೆಯಲ್ಲಿ ಯಾವುದೇ ದಾಖಲೆ ಇಲ್ಲ. ಆಕೆಯ ಕುಟುಂಬದವರ ಬಗ್ಗೆ ವೈದ್ಯರ ಬಳಿ ಮಾಹಿತಿಯೂ ಇಲ್ಲ. ಆದ್ರೆ, 'ಅವನಿ' ಆಪರೇಶನ್ ಗೆ ಸಮ್ಮತಿ ಸೂಚಿಸಿ, ಒಪ್ಪಿಗೆ ಪತ್ರಕ್ಕೆ ದೀಪಿಕಾ ಸಹಿ ಹಾಕಿದ್ದಳು. ದೀಪಿಕಾ ಯಾರು ಅನ್ನೋದು ಕೂಡ ಆಪರೇಶನ್ ಮಾಡಿದ ವೈದ್ಯರಿಗೆ ಗೊತ್ತಿಲ್ಲ.

ರಮಣ್ ಗೆ ಸತ್ಯ ಗೊತ್ತಾಗಿಲ್ಲ.!

ರಮಣ್ ಗೆ ಸತ್ಯ ಗೊತ್ತಾಗಿಲ್ಲ.!

ರಮಣ್ ಅಂಡ್ ಫ್ಯಾಮಿಲಿ ಡಾಕ್ಟರ್ ಬಳಿ ಮಾತನಾಡುವಾಗ, ದೀಪಿಕಾ ಸಹಿ ಮಾಡಿದ್ದ ಒಪ್ಪಿಗೆ ಪತ್ರ ಹರಿದು ಹೋಗಿತ್ತು. ಹೀಗಾಗಿ, 'ಅವನಿ'ಗೆ ಆಪರೇಶನ್ ಮಾಡಿಸಿದ್ದು ದೀಪಿಕಾ ಅಂತ ರಮಣ್ ಗೆ ಇನ್ನೂ ಗೊತ್ತಾಗಿಲ್ಲ.

ಮುಖಾಮುಖಿಯಾದ ಅಮ್ಮ-ಮಗಳು

ಮುಖಾಮುಖಿಯಾದ ಅಮ್ಮ-ಮಗಳು

ಇತ್ತ ಪ್ರಕೃತಿ ಆಸ್ಪತ್ರೆಯಲ್ಲಿ ದೀಪಿಕಾ ಹಾಗೂ ತಾಯಿ ಸಿತಾರ ಮುಖಾಮುಖಿ ಆಗಿದ್ದಾರೆ. ರಮಣ್ ಆಸ್ಪತ್ರೆಯೊಳಗೆ ಕಾಲಿಟ್ಮೇಲೆ, ಸಿತಾರಗೆ ನಡುಕ ಶುರುವಾಗಿದೆ. ತಾನು ಎಲ್ಲಿ ಸಿಕ್ಕಿ ಹಾಕಿಕೊಳ್ತೀನೋ ಅಂತ ಸಿತಾರ ದೇವಿ ಬೆದರಿ ಬೆಂಡಾಗಿದ್ದಾರೆ. ತಾಯಿಗೆ ಧೈರ್ಯ ಹೇಳುತ್ತಿರುವ ದೀಪಿಕಾ ತಲೆಯಲ್ಲಿ 'ಅವನಿ'ಯನ್ನ ಕಿಡ್ನ್ಯಾಪ್ ಮಾಡುವ ಪ್ಲಾನ್ ಕೂಡ ಇದೆ.

ಇವತ್ತು ಇನ್ನೇನ್ ಟ್ವಿಸ್ಟ್ ಇದೆಯೋ.?

ಇವತ್ತು ಇನ್ನೇನ್ ಟ್ವಿಸ್ಟ್ ಇದೆಯೋ.?

ಪ್ರಕೃತಿ ಆಸ್ಪತ್ರೆಯಿಂದ 'ಅವನಿ'ಯನ್ನ ಕಿಡ್ನ್ಯಾಪ್ ಮಾಡುವಲ್ಲಿ ದೀಪಿಕಾ ಮತ್ತು ವಿನಯ್ ಯಶಸ್ವಿ ಆಗ್ತಾರಾ.? ಇಲ್ಲ, 'ಅವನಿ'ಯನ್ನ ರಮಣ್ ಕಣ್ಣಾರೆ ನೋಡ್ತಾರಾ.? ಇವತ್ತು ಸಂಚಿಕೆಯಲ್ಲಿ ಗೊತ್ತಾಗಲಿದೆ.

More from Filmibeat

English summary
Radha Ramana serial written update: Will Raman meet his sister Avani.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X