ಅಂತೂ ಪರಾರಿ ಆಗಲು ರಾಣಿ ತಯಾರಿ: ಇವತ್ತು ಉಲ್ಟಾ-ಪಲ್ಟಾ ಆಗಬಹುದೇನೋ.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಇಲ್ಲಿಯವರೆಗೂ ರಮಣ್ ಮನೆಯಲ್ಲಿ ನಾಟಕ ಮಾಡುತ್ತಿದ್ದ ಕಳ್ಳಿ ರಾಣಿ ಇದೀಗ ಮನೆಯಿಂದ ಹೊರಬರುವಲ್ಲಿ ಯಶಸ್ವಿ ಆಗಿದ್ದಾಳೆ.
ಆಸ್ತಿ ಪತ್ರ, ಒಡವೆ ಹಾಗೂ ವಸ್ತ್ರವನ್ನ ಪ್ಯಾಕ್ ಮಾಡಿಕೊಂಡು ಹಾಗೂ ಹೀಗೂ ಮಾದ ಇದ್ದ ಜಾಗಕ್ಕೆ ರಾಣಿ ಬಂದು ಸೇರಿದ್ದಾಳೆ. ರಮಣ್ ಮನೆಯಿಂದ ರಾಣಿ ತಪ್ಪಿಸಿಕೊಂಡು ಬಂದಿರುವುದು ಮಾದನಿಗೆ ಇಷ್ಟ ಆಗಿಲ್ಲ. ಯಾಕಂದ್ರೆ, ಮಾದನ ತಲೆಯಲ್ಲಿ ಬೇರೆಯದ್ದೇ ಪ್ಲಾನ್ ಇದೆ.
ಮಾದನ ಪ್ಲಾನ್ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ರಾಣಿ ಪರಾರಿ ಆಗಲು ಸಕಲ ತಯಾರಿ ಮಾಡಿಕೊಂಡಿದ್ದಾಳೆ. ಸತೀಶ ಕೂಡ ಗಾಡಿ ತಂದಿದ್ದಾಗಿದೆ. ಇನ್ನೇನು ರಾಣಿ ಹೊರಡಬೇಕು ಅಷ್ಟರಲ್ಲಿ ಸಂಚಿಕೆ ಮುಗಿದಿದೆ.
ರಾಣಿ ಮಾಡಿರುವ ಪ್ಲಾನ್ ಗೆ ಮಾದ ಅಡ್ಡಗಾಲು ಹಾಕುತ್ತಾನಾ.? ರಾಣಿ ಮನೆಯಿಂದ ಎಸ್ಕೇಪ್ ಆಗಿರುವ ಸಂಗತಿ ಸಿತಾರ ದೇವಿಗೆ ಗೊತ್ತಾಗುತ್ತಾ.? ಇಂದಿನ ಸಂಚಿಕೆಯಲ್ಲಿ ಇನ್ನೇನು ಉಲ್ಟಾ ಪಲ್ಟಾ ಆಗುತ್ತೋ.?

ಸಿತಾರ ದೇವಿ ಪ್ಲಾನ್ ಏನಾಯ್ತು.?
''ರಮಣ್ ದೆಹಲಿಯಿಂದ ವಾಪಸ್ ಬರುವಷ್ಟರಲ್ಲಿ ರಾಣಿಗೆ ಒಂದು ಗತಿ ಕಾಣಿಸಬೇಕು'' ಎಂಬುದು ಸಿತಾರ ದೇವಿ ಪ್ಲಾನ್ ಆಗಿತ್ತು. ಆದ್ರೆ, ಅಷ್ಟರಲ್ಲಿ ಮನೆಯಿಂದ ರಾಣಿ ಕಾಲ್ಕಿತ್ತಿದ್ದಾಳೆ.

ಯಾರಿಗೂ ಗೊತ್ತಿಲ್ಲ.!
ರಾಣಿ (ಅವನಿ) ಏಕಾಏಕಿ ಎಸ್ಕೇಪ್ ಆಗಿರುವುದು ದಿನಕರ್ ಬಿಟ್ಟರೆ ಮನೆಯಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ. ಎಲ್ಲರ ಕಣ್ತಪ್ಪಿಸಿ, ಮನೆಯಿಂದ ರಾಣಿ ಆಚೆ ಬಂದಿದ್ದಾಳೆ. ''ಸದ್ಯ ಪೀಡೆ ತೊಲಗಿತು'' ಅಂತ ದಿನಕರ್ ಖುಷಿ ಪಟ್ಟಿದ್ದಾರೆ.

ದೀಪಿಕಾಗೆ ಬೇರೆ ಸಂಕಟ
ಹೇಗಾದರೂ ಮಾಡಿ ರಾಧಾರನ್ನ ಮನೆಯಿಂದ ಶಾಶ್ವತವಾಗಿ ಹೊರಗೆ ಕಳುಹಿಸಬೇಕು ಅಂತ ದೀಪಿಕಾ ಸ್ಕೆಚ್ ಹಾಕುತ್ತಿದ್ದಾಳೆ. ಅದಕ್ಕೆ ತಕ್ಕ ಹಾಗೆ, ಮನೆಗೆ ಅನ್ವಿತಾ ಪತಿ ಆದಿತ್ಯ ಬಂದಿದ್ದಾಗಿದೆ. ಅಣ್ಣ ಆದಿತ್ಯ ಜೊತೆಗೆ ತಂಗಿ ರಾಧಾ ಹಬ್ಬದ ಸಲುವಾಗಿ ತವರು ಮನೆಗೆ ಹೋಗ್ತಾರಾ.?

ಅನ್ವಿತಾಗೆ ಸತ್ಯ ಗೊತ್ತಾಗುತ್ತಾ.?
ರಾಧಾ ಕಣ್ಣೀರು ಹಾಕುತ್ತಿದದ್ದನ್ನ ಅನ್ವಿತಾ ನೋಡಿದ್ದಾಳೆ. ರಾಧಾ-ರಮಣ್ ಮಧ್ಯೆ ಏನೋ ಸಮಸ್ಯೆ ಆಗಿದೆ ಅನ್ನೋ ಅನುಮಾನ ಅನ್ವಿತಾಗೆ ಮೂಡಿದೆ. ಅನ್ವಿತಾ ಮುಂದೆ ರಾಧಾ ಸತ್ಯವನ್ನ ಹೇಳ್ತಾಳಾ.? ಇಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.


Click it and Unblock the Notifications











