'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?

By Harshitha

ಇಷ್ಟು ದಿನ ರಮಣ್ ಮನೆಯಲ್ಲಿ ರಾಣಿ ಆಡಿದ್ದೇ ಆಟ ಆಗಿತ್ತು. 'ಅವನಿ' ಹೆಸರಿನಲ್ಲಿ ರಮಣ್ ಮನೆಗೆ ಎಂಟ್ರಿಕೊಟ್ಟಿರುವ 'ರಾಣಿ' ತನಗೆ ಬೇಕಾದ ಹಾಗೆ ಎಲ್ಲರನ್ನೂ ಬಳಸಿಕೊಳ್ಳುತ್ತಿದ್ದಾಳೆ. ತನ್ನ ತಾಳಕ್ಕೆ ತಕ್ಕ ಹಾಗೆ ಎಲ್ಲರನ್ನೂ ಕುಣಿಸುತ್ತಿದ್ದಾಳೆ.

ಅತ್ತ 'ರಾಣಿ'ಯೇ ನಿಜವಾದ 'ಅವನಿ' ಅಂತ ರಾಧಾ ಹಾಗೂ ರಮಣ್ ನಂಬಿದ್ದಾರೆ. ಹೀಗಾಗಿ, ರಾಣಿ ಏನೇ ಮಾಡಿದರೂ, ಅವರಿಗೆ ತಪ್ಪು ಕಾಣುತ್ತಿಲ್ಲ.

ಮನೆಯಲ್ಲಿ ಕೂತರೇ ಬೋರು, ಹೊರಗೆ ಹೋಗಬೇಕು ಅಂತ ಪ್ರತಿ ಬಾರಿ ಸುಳ್ಳು ಹೇಳಿ ಆಚೆ ಬರುತ್ತಿದ್ದಾಳೆ ರಾಣಿ. ತನ್ನ ಪ್ರಿಯಕರನನ್ನು ಭೇಟಿ ಮಾಡಲು ದೀಪಿಕಾ ಹೆಸರು ಬಳಸಿ ಶಾಪಿಂಗ್ ಮಾಡುವ ನೆಪದಲ್ಲಿ ರಾಣಿ ಮನೆಯಿಂದ ಹೊರಗೆ ಬಂದಿದ್ದಾಗಿದೆ.

Radha Ramana serial: Will Rani get caught

ಶಾಪಿಂಗ್ ಮಾಡಲು ರಮಣ್ ಕಾರ್ಡ್ ಕೊಟ್ಟಿದ್ದರೆ, ಅದನ್ನ ಮನೆಯಲ್ಲೇ ಬೀಳಿಸಿ ರಾಣಿ ಹೊರಬಂದಿದ್ದಳು. ಕಾರ್ಡ್ ಕೊಡಲು ಹೊರಗೆ ಬಂದ ರಾಧಾಗೆ ಈಗ ದೊಡ್ಡ ಶಾಕ್ ಕಾದಿದೆ.

ಪ್ರಿಯತಮನನ್ನು ಮೀಟ್ ಮಾಡಲು ರಾಣಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದನ್ನ ರಾಧಾ ನೋಡಿದ್ದಾರೆ. ಈಗಲಾದರೂ, ರಾಣಿ ಆಟ ಬಟಾ ಬಯಲಾಗುತ್ತಾ.?

'ಅವನಿ' ಹೆಸರಿಗೆ ಆಸ್ತಿ ಬರೆಯಲು ರಮಣ್ ಮನಸ್ಸು ಮಾಡಿದ್ದಾರೆ. ಇನ್ನೂ, ಸಿತಾರ ದೇವಿ ಹೆಸರಿನಲ್ಲಿಯೂ ಕೆಲ ಪ್ರಾಜೆಕ್ಟ್ ಬರೆಯಲು ರಮಣ್ ತೀರ್ಮಾನ ಮಾಡಿದ್ದಾರೆ. ಇದನ್ನೆಲ್ಲ ಬಹಿರಂಗಗೊಳಿಸುವ ಮುನ್ನ ರಾಣಿ ಮುಖವಾಡ ಕಳಚಿ ಬೀಳುತ್ತಾ.?

'ಅವನಿ'ಯನ್ನ ಇಷ್ಟು ದಿನ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು ಸಿತಾರ ಎಂಬ ಸತ್ಯ ಯಾವಾಗ ಹೊರಬೀಳುತ್ತೋ.? ನಿರ್ದೇಶಕರೇ ಹೇಳಬೇಕು. ಅದಕ್ಕೂ ಮುನ್ನ 'ರಾಣಿ' ಯಾರು ಅಂತ 'ರಾಧಾ'ಗೆ ಗೊತ್ತಾಗಬೇಕು. ಇವತ್ತಿನ ಸಂಚಿಕೆಯಲ್ಲಿ ಅದಾಗುತ್ತಾ.? ನೋಡೋಣ.!

More from Filmibeat

English summary
Radha Ramana serial written update: Will Rani get caught.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X