»   » ಪುನೀತ್ ಜೊತೆಗಿನ ಕನಸನ್ನ ನನಸು ಮಾಡಿಕೊಂಡ ರಾಧಿಕಾ

ಪುನೀತ್ ಜೊತೆಗಿನ ಕನಸನ್ನ ನನಸು ಮಾಡಿಕೊಂಡ ರಾಧಿಕಾ

Posted By:
Subscribe to Filmibeat Kannada

ತಮ್ಮ ಮೋಹಕ ಅಭಿನಯ ಮತ್ತು ಡ್ಯಾನ್ಸ್ ಮೂಲಕ ಅಭಿಮಾನಿಗಳ ಪಾಲಿಗೆ ಸ್ವೀಟಿ ಎನಿಸಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿ. ಈ ಸ್ವೀಟಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಬೇಕು ಎಂಬ ಬಹುದೊಡ್ಡ ಆಸೆ.

ಕೇವಲ ರಾಧಿಕಾ ಅವರಿಗೆ ಮಾತ್ರವಲ್ಲ, ಈ ಇಬ್ಬರು ಅಭಿಮಾನಿಗಳಿಗೂ ಕೂಡ ಇದೇ ಆಸೆ. ಇಬ್ಬರು ಪರ್ಫೆಕ್ಟ್ ಡ್ಯಾನ್ಸರ್. ಇವರಿಬ್ಬರು ಒಂದು ಸಿನಿಮಾ ಒಟ್ಟಿಗೆ ಮಾಡಬೇಕು ಎಂದು ಕನಸು ಕಂಡವರು ಇದ್ದಾರೆ. ಈ ಆಸೆ ಮಾತ್ರ ಇದುವರೆಗೂ ನೆರವೇರಲೇ ಇಲ್ಲ.

ಆದ್ರೆ, ಇಷ್ಟು ದೊಡ್ಡ ಕನಸು ಕಂಡಿದ್ದ ಅಭಿಮಾನಿ ಮತ್ತು ಸ್ವತಃ ರಾಧಿಕಾ ಅವರಿಗೆ ಈ ಭಾನುವಾರ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಏನದು ? ಮುಂದೆ ಓದಿ....

ಅಪ್ಪು ಜೊತೆ ರಾಧಿಕಾ ಡ್ಯಾನ್ಸ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ರಿಯಾಲಿಟಿ ಶೋ, ಭಾನುವಾರ ಸರ್ಪ್ರೈಸ್ ವೊಂದಕ್ಕೆ ಸಾಕ್ಷಿಯಾಯಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪವರ್ ಸ್ಟಾರ್ ಪುನೀತ್ ಜೊತೆ ರಾಧಿಕಾ ಹೆಜ್ಜೆ ಹಾಕುವ ಮೂಲಕ ತಮ್ಮ ಬಹುದಿನಗಳ ಆಸೆಯೊಂದನ್ನ ಈಡೇರಿಸಿಕೊಂಡಿದ್ದಾರೆ.

ಜೂನ್ 24 ರಿಂದ ನಿಮ್ಮನೆ ಟಿವಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬರ್ತಾರೆ

ರೊಮ್ಯಾಂಟಿಕ್ ಸಾಂಗ್ ಗೆ ಹೆಜ್ಜೆ

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ವೇದಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಡ್ಯಾನ್ಸ್ ಮಾಡಲು ರಾಧಿಕಾ ಅವರಿಗೆ ಅವಕಾಶ ಸಿಕ್ಕಿತ್ತು. ''ಈ ಚಾನ್ಸ್ ನಾನಂತೂ ಮಿಸ್ ಮಾಡಿಕೊಳ್ಳಲ್ಲ'' ಎಂದ ರಾಧಿಕಾ, ಅಣ್ಣಾಬಾಂಡ್ ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಅಪ್ಪು ಜೊತೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದರು.

'ಹೇ ಪಾರು.....' ಹಾಡಿಗೆ ಭರ್ಜರಿ ಡ್ಯಾನ್ಸ್

ರಾಧಿಕಾ ಅವರ ಜೊತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಪುನೀತ್, ''ಇವರ ಜೊತೆ ಸ್ಲೋ ಸಾಂಗ್ ಗೆ ಡ್ಯಾನ್ಸ್ ಮಾಡಬಾರದು'' ಎಂದು ರಾಧಿಕಾ ಅವರ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ಸಂತಸದಲ್ಲಿ ರಾಜ್ ಚಿತ್ರದ 'ಹೇ ಪಾರು........' ಹಾಡಿಗೆ ಅಪ್ಪು ಮತ್ತು ರಾಧಿಕಾ ಭರ್ಜರಿ ಆಗಿ ಕುಣಿದಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.

ಹೊಸ ಅದೃಷ್ಟ ಪರೀಕ್ಷೆಗೆ ನಿಂತ ರಾಧಿಕಾ ಕುಮಾರಸ್ವಾಮಿ, ಏನದು?

ಅಪ್ಪು ಜೊತೆ ಸಿನಿಮಾ ಮಾಡುವುದು ರಾಧಿಕಾ ಆಸೆ

ಪವರ್ ಸ್ಟಾರ್ ಜೊತೆ ಸಿನಿಮಾ ಮಾಡ್ಬೇಕು ಎನ್ನುವುದು ರಾಧಿಕಾ ಕುಮಾರಸ್ವಾಮಿ ಅವರ ಬಹುದೊಡ್ಡ ಆಸೆ. ಆದ್ರೆ, ಇದುವರೆಗೂ ಆ ಅವಕಾಶ ಸಿಕ್ಕಿಲ್ಲ. ಇದೇ ಮೊದಲ ಬಾರಿಗೆ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ವೇದಿಕೆಯಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿತ್ತು. ಹೀಗಾಗಿ, ಸಹಜವಾಗಿಯೇ ರಾಧಿಕಾ ಕುಮಾರಸ್ವಾಮಿ ಅವರು ಸಿಕ್ಕಾಪಟ್ಟೆ ಖುಷಿಯಾದರು.

ಅಪ್ಪು ಡ್ಯಾನ್ಸ್ ಬಗ್ಗೆ ರಾಧಿಕಾ ಪ್ರಶಂಸೆ

''ಪುನೀತ್ ಅವರ ಜೊತೆ ಡ್ಯಾನ್ಸ್ ಮಾಡುವುದು ತುಂಬಾ ಕಷ್ಟ. ಆದ್ರು ನಾನು ಪ್ರಯತ್ನ ಪಟ್ಟಿದ್ದೀನಿ. ಅವರೊಬ್ಬ ಒಳ್ಳೆ ಡ್ಯಾನ್ಸರ್, ನಮ್ಮಿಬ್ಬರಿಗೂ ಡ್ಯಾನ್ಸ್ ನಲ್ಲಿ ಗುರುಗಳಿಲ್ಲ'' ಎಂದು ಪುನೀತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ'ಗೆ ರಾಧಿಕಾ ಕುಮಾರಸ್ವಾಮಿ ನಾಯಕಿ

English summary
Kannada Actress Radhika Kumarswamy Debut Dance Performance With Power Star Puneeth Rajkumar in Dance Dance Juniors At Star Suvrana.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada