ಕೋಸ್ಟಲ್‌ವುಡ್ ನಲ್ಲಿ ಪ್ರಖ್ಯಾತಿ ಗಳಿಸಿದ ನಟಿ ರಾಧಿಕಾ

By ಪೂರ್ವ

ಕೋಸ್ಟಲ್‌ವುಡ್ ನಲ್ಲಿ ಪ್ರಖ್ಯಾತಿ ಗಳಿಸಿ ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ ಭರ್ಜರಿಯಾಗಿ ಎಂಟ್ರಿ ಪಡೆದ ಖ್ಯಾತ ನಟಿ ರಾಧಿಕ ರಾವ್. ಬಬ್ಲಿ ಬಬ್ಲಿಯಾಗಿ ಕಾಣುವ ಈ ಬೆಡಗಿಯ ಸೌಂದರ್ಯಕ್ಕೆ, ನಟನೆಗೆ ಮಾರು ಹೋಗದವರೆ ಇಲ್ಲ. ತುಳು ಚಲನಚಿತ್ರ ಏಸಾದಲ್ಲಿ ಮೊದಲು ನಾಯಕಿ ನಟಿಯಾಗಿ ಅಭಿನಯಿಸಿ ಕರಾವಳಿ ಸಿನಿಮಾ ಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಏಸಾ ಸಿನಿಮಾದ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಹುಡುಗಿ ರಾಧಿಕಾ ರಾವ್ ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ರಾಜಗೋಪಾಲ ಮತ್ತು ತಾಯಿ ವಿಜಯ ಲಕ್ಷ್ಮಿ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ರಾಧಿಕ ಭರತನಾಟ್ಯದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು.

ಭರತನಾಟ್ಯದಲ್ಲಿ ಏನಾದರು ಸಾಧಿಸಬೇಕು ಎಂದು ಕನಸನ್ನು ಕಂಡವರು ರಾಧಿಕಾ. ರಾಧಿಕಾ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕೆಲವು ಆಡಿಷನ್ ಗೆ ಹೋಗಿ ಆರಂಭದಲ್ಲಿ ಕೆಲವು ಹಿನ್ನಡೆಗಳನ್ನೂ ಅನುಭವಿಸಿದ್ದರು. 17ನೆ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು ರಾಧಿಕಾ. ರಾಧಿಕ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ನಲ್ಲಿ ಬಿಎಸ್ ಸಿ ಪದವಿ ಪಡೆದುಕೊಂಡರು. ಬಳಿಕ 2018ರಲ್ಲಿ ಇನ್ನೊಂದು ತುಳು ಸಿನಿಮಾ 'ಪುದರ್ ಗೊಂಜಿ ಬುಡೆದಿ' ಎಂಬ ಸಿನಿಮಾ ಮೂಲಕ ಮಂಗಳೂರು ಜನರ ಮನಗೆಲ್ಲುವಲ್ಲಿ ಸಫಲರಾದರು.

ಹಾಸ್ಯಮಯ ಸಿನಿಮಾದಲ್ಲಿ ಅಭಿನಯ

ಹಾಸ್ಯಮಯ ಸಿನಿಮಾದಲ್ಲಿ ಅಭಿನಯ

ಪುದಾರ್ ಗೊಂಜಿ ಬುಡೆದಿ ಸಿನಿಮಾ ಬಹಳ ಹಾಸ್ಯಮಯ ಸಿನಿಮಾ ಆಗಿದ್ದು ತುಳು ಪ್ರೇಕ್ಷಕರನ್ನು ಬಹುವಾಗಿ ಸೆಳೆದಿತ್ತು ಈ ಸಿನಿಮಾ. ಬಳಿಕ ಇವರು ಕನ್ನಡ ಕಿರುತೆರೆಯತ್ತ ಮುಖ ಮಾಡಿದರು. ಕನ್ನಡ ಧಾರಾವಹಿಯಲ್ಲಿ ನಟಿಸಲು ಆಡಿಷನ್ ಗೆ ಸಹ ತೆರಳಿದರು. ಹಲವು ಆಡಿಷನ್‌ಗಳಲ್ಲಿ ಅಭಿನಯಿಸಿದ ಬಳಿಕ ಅವರಿಗೆ ಕನ್ನಡ ಕಿರುತೆರಯಲ್ಲಿ ನಟನೆ ಮಾಡಲು ಅವಕಾಶ ಸಿಗುತ್ತದೆ. 'ಹುಬ್ಬಳ್ಳಿ ಹುಡುಗ ಮಂಗಳೂರು ಹುಡುಗಿ' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಮನೋಜ್ಞವಾಗಿ ನಟಿಸುವ ಕರುನಾಡ ಬೆಡಗಿ

ಮನೋಜ್ಞವಾಗಿ ನಟಿಸುವ ಕರುನಾಡ ಬೆಡಗಿ

'ಹುಬ್ಬಳ್ಳಿ ಹುಡುಗ ಮಂಗಳೂರು ಹುಡುಗಿ' ಧಾರಾವಾಹಿಯಲ್ಲಿ ಬಹಳ ಮನೋಜ್ಞಾವಾಗಿ ನಟಿಸಿದ ರಾಧಿಕಾಗೆ ತೆಲುಗು, ತಮಿಳು ಕಿರುತೆರೆಯಲ್ಲಿ ಅವಕಾಶಗಳು ತಾನಾಗಿಯೇ ಅರಸಿಕೊಂಡು ಬಂದಿತ್ತು. ತಮಿಳು ಕಿರುತೆರೆಗೆ ಹಾರಿದ ಬೆಡಗಿ 'ಪಾನ್ನುಕ್ಕು ತಂಗ ಮನಸು' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ತಮಿಳು ಕಿರುತೆರೆ ಇದೀಗ ಬಹು ಬೇಡಿಕೆಯ ಕಿರುತೆರೆಯ ನಟಿಯಾಗಿ ರಾಧಿಕಾ ರಾವ್ ಹೊರಹೊಮ್ಮಿದ್ದಾರೆ.

ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

ರಾಧಿಕಾ ರಾವ್ ವಾಪಸ್ ಕನ್ನಡ ಕಿರುತೆರೆಗೆ 'ರಾಧಾ ಕಲ್ಯಾಣ' ಎಂಬ ಧಾರವಾಹಿ ಮೂಲಕ ಎಂಟ್ರಿ ನೀಡಿದರು. ಕಿರುತೆರಯಲ್ಲಿ ಜನಪ್ರಿಯರಾದ ರಾಧಿಕಾ ಬಳಿಕ ಸ್ಯಾಂಡಲ್‌ವುಡ್ ಮೆಟ್ಟಿಲೇರಿದ್ದರು. 'ಲುಂಗಿ' ಎಂಬ ಸಿನಿಮಾದಲ್ಲಿ ನಟಿಸಿ ಜನ ಮನ ಗೆದ್ದಿದ್ದಾರೆ. ಬಳಿಕ ಹರಿಪ್ರಿಯ, ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ರಾಧಿಕಾ ರಾವ್ ಮತ್ತಷ್ಟು ಉತ್ತಮ ಸಿನಿಮಾ ಹಾಗೆಯೇ ಧಾರಾವಾಹಿಗಳಲ್ಲಿ ಉತ್ತಮವಾಗಿ ನಟಿಸಲಿ ಎಂಬುವುದು ಅಭಿಮಾನಿಗಳ ಆಶಯ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

ರಾಧಿಕಾ ರಾವ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಲವು ಫಾಲೋವರ್‌ಗಳನ್ನು ಹೊಂದಿರುವ ರಾಧಿಕಾ ರಾವ್ ತಮ್ಮ ಹಲವು ಚಿತ್ರಗಳನ್ನು, ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಹನ ಮಾಡುತ್ತಾರೆ ರಾಧಿಕಾ.

More from Filmibeat

English summary
Radhika Rao acted in several Telugu Kannada movies. She is now acting in Kannada serials.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X