ಕೂರ್ಗ್‌ನಲ್ಲಿ ಕಾವ್ಯಾ ಶಾಸ್ತ್ರಿ: ಆಕೆಯ ಫೋಟೋ ತೆಗೆದವರನ್ನು ಕನ್ನಡಕ ನೋಡಿ ಕಂಡು ಹಿಡಿದ ನೆಟ್ಟಿಗರು!

By ಎಸ್ ಸುಮಂತ್

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಿಕಾ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕಾವ್ಯಾ ಶಾಸ್ತ್ರಿ. ಆದರೆ, ಆ ಧಾರಾವಾಹಿಯಿಂದ ಹೊರ ಬಂದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ಕೂರ್ಗ್‌ನತ್ತ ಪ್ರಯಾಣ ಬೆಳೆಸಿದ್ದು, ಮಸ್ತ್ ಮಜಾ ಮಾಡಿಕೊಂಡು ಬಂದಿದ್ದಾರೆ.

ಕಾವ್ಯಾ ಶಾಸ್ತ್ರಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಧ್ಯಾತ್ಮದತ್ತ ಹೆಚ್ಚು ಒಲವು ತೋರಿದ್ದಾರೆ. ಅವರಿಗೆ ಈಗಾಗಲೇ 315 ಸಾವಿರ ಫಾಲೋವರ್ಸ್ ಇದ್ದು, ಅವರಿಗೂ ಆದ್ಯಾತ್ಮದತ್ತ ಚಿತ್ತವನ್ನು ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅಸ್ಸಾಂ ಕಾಮಾಕ್ಯ ದೇವಿಯ ದೇವಸ್ಥಾನಕ್ಕೂ ಹೋಗಿದ್ದರು. ಅಲ್ಲಿಂದಾನೇ ಅವರ ಫಾಲೋವರ್ಸ್‌ಗೂ ಅಲ್ಲಿನ ಮಹತ್ವವನ್ನು ತಿಳಿಸಿದ್ದಾರೆ.

Radhika serial actress Kavya Shastry in a coorg photoshoot went viral

ಕಾವ್ಯಾ ಶಾಸ್ತ್ರಿ ಹೇಳಿದ್ದೇನು?

ಮೊದಲೇ ಹೇಳಿದಂತೆ 'ರಾಧಿಕಾ' ಧಾರಾವಾಹಿ ಬಿಟ್ಟ ಮೇಲೆ ನಟಿ ಕಾವ್ಯಾ ಶಾಸ್ತ್ರಿ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗುವುದಕ್ಕೆ ಶುರು ಮಾಡಿದ್ದಾರೆ. ಈಗ ಮೊದಲೇ ಸೋಷಿಯಲ್ ಮೀಡಿಯಾ ಜಮಾನ. ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್ ಬಂದ ಮೇಲೆ ಟಿವಿ ನೋಡುವುದಕ್ಕಿಂತ, ಮೊಬೈಲ್‌ನಲ್ಲಿಯೇ ಬೇಕಾದ್ದೆಲ್ಲಾ ಸಿಗುವಂತೆ ಆಗಿದೆ‌. ಹೀಗಾಗಿ ಆ ಟ್ರೆಂಡ್ ತಕ್ಕ ಹಾಗೇ ಪ್ರಸ್ತುತ ವಿಚಾರಗಳನ್ನು ವಿಡಿಯೋ ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುತ್ತಾರೆ. ಕಾವ್ಯಾ ಶಾಸ್ತ್ರಿ ಪ್ರೊಫೈಲ್‌ನಲ್ಲಿ ಎಷ್ಟೋ ಜನರಿಗೆ ಅನುಕೂಲವಾಗುವಂತ ವಿಚಾರ ಧಾರೆಗಳನ್ನೇ ಹಂಚಿಕೊಂಡಿದ್ದಾರೆ.

ದೇವಸ್ಥಾನ, ದೇವರ ಮಹಿಮೆ ಬಗ್ಗೆ ಮಾಹಿತಿ

ಅದರಲ್ಲೂ ಕಾವ್ಯಾ ಶಾಸ್ತ್ರಿ ಆಧ್ಯಾತ್ಮದ ವಿಚಾರಗಳ ಬಗ್ಗೆಯೇ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದೇವರು, ದೇವಸ್ಥಾನಗಳು ಎಂದರೆ ಮೊದಲು ಭೇಟಿ ಕೊಡುತ್ತಾರೆ. ಅಲ್ಲಿನ ದೇವಸ್ಥಾನಗಳ ವಿಶೇಷತೆ, ದೇವಾಲಯದ ಇತಿಹಾಸವನ್ನೆಲ್ಲಾ ತಿಳಿಯುವ ಕುತೂಹಲ ಜೊತೆಗೆ ತಮ್ಮವರಿಗೂ ಅದನ್ನು ಹಂಚುವ ಆಸೆ ಕಾವ್ಯಾ ಅವರದ್ದು. ಹೀಗಾಗಿ ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ.

Radhika serial actress Kavya Shastry in a coorg photoshoot went viral

ಕೂರ್ಗ್‌ನಲ್ಲಿ ಕಾವ್ಯಾ ಶಾಸ್ತ್ರ ಮಸ್ತಿ

ಪ್ರಸ್ತುತ ವಿಚಾರಗಳನ್ನು ವಿಡಿಯೋ ಮೂಲಕ ಹಾಕುವುದಲ್ಲದೆ ವೈಯಕ್ತಿಕವಾಗಿಯೂ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲೂ ಫೋಟೊಶೂಟ್‌ಗಳನ್ನು ಮಾಡಿಸುತ್ತಾ ಇರುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಕೂರ್ಗ್ ಕಡೆಗೆ ಪ್ರವಾಸ ಕೂಡ ಹೋಗಿ ಬಂದಿದ್ದಾರೆ. ಆ ಬ್ಯೂಟಿಫುಲ್ ಫೋಟೋಗಳನ್ನು ನಟಿ ಕಾವ್ಯಾ ಶಾಸ್ತ್ರಿ ಹಂಚಿಕೊಂಡಿದ್ದಾರೆ. ಕೂರ್ಗ್ನಲ್ಲಿ ಎಲ್ಲೆಲ್ಲಾ ಓಡಾಡಿದ್ದಾರೆ ಎಂಬೆಲ್ಲಾ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕಾವ್ಯಾ ಶಾಸ್ತ್ರಿ ಫೋಟೋ ತೆಗೆದವರು ಯಾರು?

ಇನ್ನು ಕಾವ್ಯಾ ಶಾಸ್ತ್ರಿ ಈ ಕೂರ್ಗ್‌ನಲ್ಲಿ ತೆಗೆಸಿಕೊಂಡ ಫೋಟೋಗಳಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ. ಪೂಲ್ ಹತ್ತಿರ ತೆಗೆಸಿಕೊಂಡಿರುವ ಫೋಟೋದಲ್ಲಂತೂ ವ್ಹಾವ್ ಎನಿಸುವಂತೆ ಕಾಣುತ್ತಿದ್ದಾರೆ. ಎಲ್ಲೋ ಕಲರ್ ಡ್ರೆಸ್‌ನಲ್ಲೂ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ. ಇವೆಲ್ಲಾ ಸೆಲ್ಫಿ ಫೋಟೋಸ್ ಅಲ್ಲ. ಎದುರು ಇದ್ದವರು ತೆಗೆದಿರುವುದು. ಯಾರು ಕೂಡ ಅಷ್ಟು ನೀಟಾಗಿ ಪರಿಶೀಲನೆ ಮಾಡುವುದಿಲ್ಲ. ಆದರೆ ಕಾವ್ಯಾ ಶಾಸ್ತ್ರಿ ಅವರ ಫೋಟೋ ತೆಗೆದವರನ್ನು 'ಯಶೋಧೆ' ಸೀರಿಯಲ್‌ನ ನಟಿ ಹುಡುಕಿದ್ದಾರೆ. ಕಾವ್ಯಾ ಶಾಸ್ತ್ರಿ ಹಾಕಿರುವ ಗ್ಲಾಸ್ ಮೂಲಕ ಆ ಫೋಟೋ ತೆಗೆದವರನ್ನು ಕಂಡು ಹಿಡಿದಿದ್ದಾರೆ. "ನಿಮ್ಮ ಕಣ್ಣಲ್ಲಿ ನಿಮ್ಮ ತಂದೆ ಕಾಣುತ್ತಿದ್ದಾರೆ. ತಂದೆ ನಮ್ಮ ಫೋಟೋ ತೆಗೆದರೆ ಅಷ್ಟೊಂದು ಖುಷಿ ಅಲ್ವಾ" ಎಂದು ಕಮೆಂಟ್ ಹಾಕಿದ್ದಾರೆ. ಸೃಷ್ಠಿ ಶೃಂಗೇರಿ ಅವರ ದೃಷ್ಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

More from Filmibeat

English summary
Radhika serial actress Kavya Shastry in a coorg photoshoot went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X