Radhika Serial: ಕುಟುಂಬವೇ ಇಲ್ಲ ಅಂತಿರೋ 'ರಾಧಿಕಾ'ಗೆ ಸ್ವಾರ್ಥಿಗಳ ಬಗ್ಗೆ ಅರಿವೇ ಇಲ್ಲ!

By ಎಸ್ ಸುಮಂತ್

ಇಡೀ ಮನೆಯ ಜವಬ್ದಾರಿ ಹೊರುವುದು ಅಂದ್ರೆ ಅಷ್ಟು ಸುಲಭವಲ್ಲ. ತನ್ನವರಿಗಾಗಿ ತನ್ನೆಲ್ಲಾ ಜೀವನವನ್ನು ತ್ಯಾಗ ಮಾಡಿ, ಕಷ್ಟಗಳನ್ನೆಲ್ಲಾ ಬದಿಗೆ ಸರಿಸಿ, ಧೈರ್ಯದಿಂದ ಮುನ್ನುಗ್ಗೋದಿದೆಯಲ್ಲ ಅದು ಎಲ್ಲರಿಗೂ ಬರುವಂತದ್ದಲ್ಲ. ಅಂಥ ದೊಡ್ಡ ಜವಬ್ದಾರಿಯುತ ಸ್ಥಾನದಲ್ಲಿ ನಿಂತಿರುವುದೇ ʻರಾಧಿಕಾʼ.

'ರಾಧಿಕಾ' ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಮಧ್ಯಮವರ್ಗದ ಕುಟುಂಬದವರ ಕಥೆ ಅದು. ಮನೆಯಲ್ಲಿ ತಂಗಿಯಂದಿರು, ತಮ್ಮ, ಅಮ್ಮ, ಅಣ್ಣನ ಸಂಸಾರ. ಇಷ್ಟನ್ನು ನಿಭಾಯಿಸುವ ಗಟ್ಟಿಗಿತ್ತಿ ಇದೇ ರಾಧಿಕಾ. ಈ ಧಾರಾವಾಹಿ ಶುರುವಾದಾಗಿನಿಂದ ಎಲ್ಲರ ಮನಸ್ಸನ್ನು ಗೆದ್ದುಬಿಟ್ಟಿದೆ. ಕಾರಣ ಮಿಡಲ್ ಕ್ಲಾಸ್ ಫ್ಯಾಮಿಲಿಯ ಪ್ರತಿಯೊಂದು ಮನೆಯಲ್ಲೂ ಇಂಥ ಒಬ್ಬ ರಾಧಿಕಾ ಕಾಣ ಸಿಗದೆ ಇರಳು.

ರಾಧಿಕಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಸ್ಪತ್ರೆಯ ರೋಗಿಗಳಿಗೂ ಈಕೆಯೇ ಬೆಸ್ಟ್ ನರ್ಸ್. ರಾಧಿಕಾ ಬಂದರೆ ಅದೇನು ಉತ್ಸಾಹ, ಉಲ್ಲಾಸ ಅಂತೀರಿ. ರೋಗವೆಲ್ಲಾ ಒಂದು ಕ್ಷಣ ಮಾಯವಾಗಿ, ಹಾಗೇ ಮೈಯಲೆಲ್ಲಾ ಶಕ್ತಿ ಹರಿದಾಡಿ ಬಿಡುತ್ತೆ. ಬೇರೆ ನರ್ಸ್ ಗಳಂತಲ್ಲ ಎಂಬುದನ್ನು ರಾಧಿಕಾ ಪ್ರೂವ್ ಮಾಡಿದ್ದಾಳೆ.

Radhika Tv Serial Written Update On March 18th Episode

ಕಾವ್ಯಾ ಶಾಸ್ತ್ರಿ ಈಗ 'ರಾಧಿಕಾ' ಪಾತ್ರಧಾರಿ

ಆಂಕರ್ ಆಗಿ, ನಟಿಮಣಿಯಾಗಿ ಇಷ್ಟು ದಿನ ಮನರಂಜಿಸಿದ್ದ ಕಾವ್ಯಾ ಶಾಸ್ತ್ರಿ ಈಗ ರಾಧಿಕಾ ಆಗಿ ಎಲ್ಲರ ಮನ ಮನೆಗಳನ್ನೂ ರಂಜಿಸುತ್ತಿದ್ದಾರೆ. ಈಕೆಗೆ ಕುಟುಂಬವೇ ದೊಡ್ಡ ಪ್ರಪಂಚ. ತನ್ನವರು ಚೆನ್ನಾಗಿರಬೇಕೆಂಬ ಕಾರಣಕ್ಕೆ ತನ್ನದೆಲ್ಲವನ್ನು ತ್ಯಾಗ ಮಾಡುತ್ತಿದ್ದಾಳೆ. ತಿಂಗಳು ಬಂತೆಂದರೆ ಅಕ್ಕನ ಬೆವರಿನ ಹಣದಲ್ಲಿ ಮಜಾ ಮಾಡೋದಕ್ಕೆ ಒಡಹುಟ್ಟಿದವರು ಹೊಂಚು ಹಾಕುತ್ತಿರುತ್ತಾರೆ. ಇದು ಹೆತ್ತ ತಾಯಿಯ ಅರಿವೆಗೆ ಬಾರದೆ ಇರುತ್ತದೆಯೇ..?

ರಾಧಿಕಾ ತಾಯಿ ಅದೆಷ್ಟೇ ಬುದ್ದಿ ಹೇಳಿದರೂ ಈಕೆ ಕೇಳೋದೆ ಇಲ್ಲ. ಯಾಕಂದ್ರೆ ತಾನಿಷ್ಟ ಪಟ್ಟಂತೆ, ತನ್ನಲ್ಲಿರುವ ನಿಷ್ಕಲ್ಮಶ ಪ್ರೀತಿಯಂತೆ ತನ್ನವರು ಇದ್ದಾರೆಂಬ ಭ್ರಮಾಲೋಕದಲ್ಲಿ ರಾಧಿಕಾ ಜೀವಿಸುತ್ತಿದ್ದಾಳೆ. ಆದ್ರೆ ರಾಧಿಕಾ ವೈಯಕ್ತಿಕ ಜೀವನ ಚರ್ಚೆಗೆ ಬಂದಾಗಲೇ ಮನೆಯವರ ಬಂಡವಾಳ ಬಟಾ ಬಯಲಾಗುತ್ತಿರೋದು.

ಅಕ್ಕನ ಜೀವನಕ್ಕಿಂತ ತಮ್ಮ ಜೀವನ ಮುಖ್ಯ ಅಂತಿದ್ದಾರೆ ತಂಗಿ-ತಮ್ಮ

ರಾಧಿಕಾಗೆ ಮದುವೆ ಮಾಡಿ, ಆಕೆಯ ಜೀವನವನ್ನ ಒಂದು ಸೇಫರ್ ಝೋನ್ ನಲ್ಲಿಡಬೇಕೆಂಬುದು ತಾಯಿಯ ಆಸೆ. ಅದರಂತೆ ಗಂಡನ್ನು ಹುಡುಕೋದಕ್ಕೆ ಹೇಳಿರುತ್ತಾಳೆ. ಒಳ್ಳೆ ಸಂಬಂಧವೆ ಒಲಿದು ಬಂದಿದೆ. ಹೆಣ್ಣು ನೋಡೋದಕ್ಕೆ ಗಂಡಿನ ಕಡೆಯವರು ಬರುತ್ತಾರೆಂಬ ವಿಚಾರವನ್ನ ಮನೆ ಮಂದಿಗೆಲ್ಲಾ ಜಾನಕಮ್ಮ ತಿಳಿಸುತ್ತಾರೆ. ಅಲ್ಲೆ ಇರೋದು ನೋಡಿ ಪ್ರೇಕ್ಷಕರ ಮನಸ್ಸು ಕೆರಳಿ ಕೆಂಡವಾಗುವಂತ ವಿಚಾರ.

ಅಯ್ಯೋ ಅಕ್ಕ ಮದುವೆಯಾಗಿ ಹೋದರೆ ನಮ್ಮ ಗತಿಯೇನು ಅಂತ ಯೋಚನೆ ಮಾಡಿದ್ದೀಯಾ..? ನಾನು ಪೊಲೀಸ್ ಆಗುವ ತನಕವಾದರೂ ಅಕ್ಕನಿಗೆ ಮದುವೆ ಬೇಡಮ್ಮ, ನಾನು ಡಾಕ್ಟರ್ ಆದ ಮೇಲೂ ಮದುವೆ ಮಾಡಬಹುದಲ್ಲವಾ..? ಹೀಗೆ ವೆರೈಟಿ ವೆರೈಟಿ ಮಾತುಗಳು ತನ್ನವರೇ ಸ್ವರ್ಗ ಎಂದುಕೊಂಡಿದ್ದ ರಾಧಿಕಾ ಮದುವೆ ವಿಚಾರಕ್ಕೆ ಕೇಳಿ ಬರುತ್ತೆ.

ಮಕ್ಕಳಿಗೆ ಕ್ಲಾಸ್ ತೆಗೆದುಕೊಂಡ ಜಾನಕಮ್ಮ

ಈ ಮಾತುಗಳನ್ನ ಕೇಳಿಸಿಕೊಂಡ ಜಾನಕಮ್ಮನಿಗೆ ನಿಜಕ್ಕೂ ಶಾಕ್ ಆಗದೆ ಇರದು. ಮಕ್ಕಳು ಇಷ್ಟೊಂದು ಸ್ವಾರ್ಥಿಗಳ ಅನ್ನೋದು. ಇದೆಲ್ಲವನ್ನೂ ತಲೆಗೆ ಹಾಕಿಕೊಳ್ಳದೆ, ಮೊದಲು ರಾಧಿಕಾ ಬಳಿ ಹೋಗಿ ಇವತ್ತು ಗಂಡಿನ ಕಡೆಯವರು ಬರುತ್ತಿದ್ದಾರೆ. ನನ್ನ ಮಗಳು ಬೇರೆಯವರ ಮುಂದೆ ತಾಯಿ ಮರ್ಯಾದೆ ಕಳೆಯಲ್ಲ ಅಂತ ಭಾವಿಸುತ್ತೇನೆಂದು ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಬಂದಾಗಿದೆ.

ಈ ಎಪಿಸೋಡ್ ನೋಡಿದ ಅಷ್ಟೇ ಜವಾಬ್ದಾರಿ ಹೊತ್ತ ಹೆಣ್ಣು ಮಕ್ಕಳು ಅರೆ ಕ್ಷಣ ಯಾರಿಗೋಸ್ಕರ ಎಲ್ಲವನ್ನು ತ್ಯಾಗ ಮಾಡುತ್ತಾ ಕುಳಿತಿದ್ದಾರೋ ಅವರೆಡೆಗೆ ಒಂದು ನೋಟ ಬೀರದೆ ಇರಲಾರರು. ಸ್ವಾರ್ಥದ ಜಗತ್ತಲ್ಲಿ, ರಾಧಿಕಾಳ ನಿಸ್ವಾರ್ಥ ಸೇವೆಗೆ ಯಾವ ಒಳ್ಳೆಯ ಫಲ ಸಿಗುತ್ತೇ ನೋಡಬೇಕು. ವೀಕ್ಷಕರ ಹಾರೈಕೆಯಂತು ತುಸು ಹೆಚ್ಚಾಗಿಯೇ ರಾಧಿಕಾ ಮೇಲೆ ಇರೋದಂತು ಸತ್ಯವಾಗಿದೆ.

More from Filmibeat

English summary
Radhika Tv Serial Written Update On March 18th Episode. Here is the Details About Radhika Mother Planning For Radhika Marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X