ದಿಗಂತ್-ಐಂದ್ರಿತಾ ಮದುವೆ ಯಾವಾಗ ಗೊತ್ತೇ?

ನಿನ್ನೆ, ಶನಿವಾರ ರಾತ್ರಿ 8-00 ಗಂಟೆಗೆ ಪ್ರಸಾರವಾದ ಈ ಶೋದಲ್ಲಿ ದಿಂಗತ್-ಐಂದ್ರಿತಾ ಜೋಡಿ ಪಕ್ಕಾ ಪ್ರಣಯ ಪಕ್ಷಿಗಳಂತೆ ಪ್ರೇಕ್ಷಕರಿಗೆ ಫೋಸ್ ನೀಡಿದರು. ಯಾವುದೇ ವೈಯಕ್ತಿಕ ಪ್ರಶ್ನೆಗೆ ಅಂಜದೇ ಅಳುಕದೇ ಈ ಜೋಡಿ ನೀಡಿದ 'ಬಿಂದಾಸ್' ಉತ್ತರ ಕೇಳಿ ಪ್ರೇಕ್ಷಕರು ಅಚ್ಚರಿಗೊಳ್ಳುವುದರ ಜೊತೆಗೆ ಬೆಚ್ಚಿಬಿದ್ದರು. ಕೆಲವರು ರೋಮಾಂಚನ ಅನುಭವಿಸಿರಲಿಕ್ಕೂ ಸಾಕು! ಬಿಂದಾಸ್ ಆಗಿ ಬಂದು ಮಾತನಾಡಿ ಈ ಜೋಡಿ ಹರಡಿರುವ 'ಗಾಸಿಪ್'ಗೆ ಸಾಕ್ಷಿಯೆಂಬಂತೆ ನಡೆದುಕೊಂಡರು.
ನಿಮ್ಮಬ್ಬರ ಮದುವೆ ಯಾವಾಗ ಎಂಬ ರಿಷಿಕಾ ಪ್ರಶ್ನೆಗೆ ಸ್ವತಃ ದಿಗಂತ್ "2015 ರಲ್ಲಿ ನಮ್ಮಿಬ್ಬರ ಮದುವೆ ನಡೆಯಲಿದೆ" ಎಂಬ ದಿಟ್ಟ(!) ಕೊಟ್ಟರು. ಅದನ್ನು ಅನುಮೋದಿಸಿ ನಕ್ಕರು ಬೆಳದಿಂಗಳಿನಂತಹ ಬಾಲೆ ಐಂದ್ರಿತಾ. ದಿಗಂತ್ ಊರಿಗೆ ತಾವು ಹೋದಾಗಿನ ಅನುಭವವನ್ನು 'ಸೂಪರ್' ಎಂದು ಐಂದ್ರಿತಾ ವಿವರಿಸಿದರೆ ಐಂದ್ರಿತಾ ಊರಿಗೆ ಹೋದಾಗಿನ ಅನುಭವ 'ಸಖತ್' ಆಗಿತ್ತು ಎಂದು ದಿಗಂತ್ ಬಣ್ಣಿಸಿದ್ದು ಪ್ರೇಕ್ಷಕರ ಗಮನಸೆಳೆಯುವಂತಿತ್ತು.
ಚಿತ್ರರಂಗದಲ್ಲಿ 'ಗಾಸಿಪ್'ಗಳು ಸರ್ವೆ ಸಾಮಾನ್ಯ. ಹಾಗಂತೆ, ಹೀಗಂತೆ, ಹೇಗೇಗೋ ಅಂತೆ, ಈ ರೀತಿ ನಾನಾ ತರದ ಗಾಳಿ ಸುದ್ದಿಗಳು ಗಾಂಧಿನಗರದಲ್ಲಿ ಯಾವಾಗಲೂ ಹರಿದಾಡುತ್ತಿರುತ್ತವೆ. ಆದರೆ ನಿಜ ವಿಷಯ ಬೇರೆಯದೇ ಇರುತ್ತದೆ. ಆದರೆ ಅದನ್ನು ಜನರಿಗೆ ಸಕಾಲಕ್ಕೆ ತಲುಪಿಸುವುದು ಎಷ್ಟೋ ವೇಳೆ ಸಾಧ್ಯವಾಗುವುದಿಲ್ಲ. ಈ ಸುದ್ದಿಗಳಿಗೆ ಸಂಬಂಧಪಟ್ಟವರು ತಮ್ಮ ಅಭಿಪ್ರಾಯವನ್ನು ನೇರವಾಗಿ ಜನರಿಗೆ ತಿಳಿಸುವುದಕ್ಕೆ ವೇದಿಕೆ ಜೀ ಕನ್ನಡದ ಈ ಟಾಕ್ ಶೋ 'ರಗಳೆ ವಿತ್ ರಿಷಿಕಾ.'
ಶೋ ಉದ್ದೇಶಕ್ಕೆ ಸಂಬಂಧಿಸಿದಂತೆ ಈ ಮೊದಲೇ ರಿಷಿಕಾ ಸಿಂಗ್ "ಹುಟ್ಟಿದಾಗಿನಿಂದಲೂ ಚಿತ್ರರಂಗದ ನಂಟಿನಲ್ಲೇ ಬೆಳೆದ ನಾನು ಎಲ್ಲಾ ಕಲಾವಿದರನ್ನು ತುಂಬಾ ಹತ್ತಿರದಿಂದ ಕಂಡವಳು. ಹೀಗಾಗಿ ಗಾಸಿಪ್ ಗಳಿಗೆ ಆಹಾರವಾದ ಕೆಲವು ಕಲಾವಿದರನ್ನು ನನ್ನ ಟಾಕ್ ಷೋನಲ್ಲಿ ಕರೆಸಿ ಅವರ ಜೊತೆ ಕೆಲ ಹೊತ್ತು ಹರಟೆ, ಮಾತುಕತೆ ನಡೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಮುಂದಿನ ಪುಟ ನೋಡಿ...


Click it and Unblock the Notifications











