ಗಟ್ಟಿಗಿತ್ತಿ ಗಂಗಮ್ಮನ ಅವತಾರವೆತ್ತಿ ಉಮಾಶ್ರೀ ನೆನಪಿಸಿದ ರಾಘವೇಂದ್ರ ಅಲಿಯಾಸ್ ರಾಗಿಣಿ

By ಅನಿತಾ ಬನಾರಿ

ಹಾಸ್ಯ ನಟ ರಾಘವೇಂದ್ರ ಯಾರಿಗೆ ಗೊತ್ತಪ್ಪ ಅಂತ ಕೇಳುವ ಬದಲು 'ಗಿಚ್ಚಿ ಗಿಲಿ ಗಿಲಿ' ರಾಗಿಣಿ ಯಾರಿಗೆ ಗೊತ್ತು ಎಂದು ಕೇಳಿದರೆ ಪ್ರೇಕ್ಷಕರು ಬೇಗ ಗುರುತಿಸಬಹುದು. 'ಮಜಾಭಾರತ' ಎಂಬ ರಿಯಾಲಿಟಿ ಶೋ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿಕೊಂಡು ಬಂದಿರುವ ನಟ ರಾಘವೇಂದ್ರ ಅವರು ನಂತರ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋನಲ್ಲಿ ತಮ್ಮ ಹಾಸ್ಯ ಪ್ರಜ್ಞೆ ಹಾಗೂ ನಟನೆಯ ಮೂಲಕ ಬಹಳ ಸುದ್ದಿ ಮಾಡಿದರು. ಹಾಸ್ಯ ನಟನಾಗಿ ಪ್ರತಿ ವೇದಿಕೆಯಲ್ಲಿ ಜನರನ್ನು ನಗಿಸುವ ಇವರು, ತಮ್ಮ ಸ್ತ್ರೀ ಪಾತ್ರಕ್ಕೆ ಸಖತ್ ಫೇಮಸ್.

ಅದರಲ್ಲೂ 'ಗಿಚ್ಚಿ ಗಿಲಿ ಗಿಲಿ' ಸೀಸನ್ ಒಂದು ಹಾಗೂ ಎರಡರಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದ ಇವರು ನಾನಾ ರೀತಿಯ ಸ್ತ್ರೀ ಪಾತ್ರಗಳನ್ನು ತೊಟ್ಟು ಜನ ಮನ ಗೆದ್ದರು. ಅಷ್ಟೇ ಅಲ್ಲದೆ ತಮ್ಮ ಇನ್‌ಸ್ಟಾಗ್ರಾಂನಲ್ಲಿಯೂ ಹಲವಾರು ರೀತಿಯ ಹಾಸ್ಯಾಸ್ಪದ ವಿಡಿಯೋಗಳನ್ನು ಮಾಡುವ ಮೂಲಕ ತಮ್ಮ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ ನಟ ರಾಘವೇಂದ್ರ.

Raghavendra Aliyaas Ragini entry into the Maja Talkies as Gattigitti Gangamma

ತಮ್ಮ ಹೆಣ್ಣು ಪಾತ್ರಗಳಿಗೆ ಜನಮನ ಗೆದ್ದಿರುವ ನಟ ರಾಘವೇಂದ್ರ, ಸದ್ಯಕಂತೂ 'ಮಜಾ ಟಾಕೀಸ್' ರಿಯಾಲಿಟಿ ಶೋ ಮೂಲಕ ಫುಲ್ ವೈರಲ್. ಹೌದು 'ಮಜಾ ಟಾಕೀಸ್' ರಿಯಾಲಿಟಿ ಶೋನಲ್ಲಿ ನಟಿಸುತ್ತಿರುವ ನಟ ರಾಘವೇಂದ್ರ ಗಟ್ಟಿಗಿತ್ತಿ ಗಂಗಮ್ಮನ ಪಾತ್ರ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ 'ಮಜಾ ಟಾಕೀಸ್' ಸೃಜನ್ ಲೋಕೇಶ್ ಅವರ ಕಾನ್ಸೆಪ್ಟ್. ಕನ್ನಡದ ಹಲವು ಕಲಾವಿದರು ನಾನಾ ಪಾತ್ರಗಳ ಮೂಲಕ ಮಜಾ ಟಾಕೀಸ್ ರಿಯಾಲಿಟಿ ಶೋನಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.

ಅದರಂತೆ ಇದೀಗ ಹಾಸ್ಯ ನಟ ರಾಘವೇಂದ್ರ ಅವರು ಗಟ್ಟಿಗಿತ್ತಿ ಗಂಗಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತಃ ರಾಘವೇಂದ್ರ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಪಾತ್ರದ ಲುಕ್ ಶೇರ್ ಮಾಡಿದ್ದು, ಕಾಮೆಂಟ್ ಸೆಕ್ಷನ್ ತುಂಬಾ ಶ್ಲಾಘನೆ ಸಿಕ್ಕಿದೆ.

ಹೆಣ್ಣು ಮಕ್ಕಳೇ ನಾಚುವಂತೆ ಸಾಂಪ್ರದಾಯಕವಾಗಿ ಚೆನ್ನಾಗಿ ರೆಡಿಯಾಗಿದ್ದೀರಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ನೀವು ಮುಂದಿನ ಜನ್ಮದಲ್ಲಿ ಹೆಣ್ಣಾಗಿ ನಾನೇ ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಅಭಿಮಾನಿ ಒಬ್ಬರು ಕಮೆಂಟ್ ಮಾಡಿದ್ದಾರೆ. ನಟ ರಾಘವೇಂದ್ರ ಅವರ ಈ ಹೊಸ ಲುಕ್‌ಗೆ 44,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಮೊದಮೊದಲಿಗೆ ಹೆಣ್ಣು ಮಕ್ಕಳ ಪಾತ್ರವನ್ನೇ ಮಾಡುತ್ತಾರೆ ಎಂದು ನಟ ರಾಘವೇಂದ್ರ ಬಹಳಷ್ಟು ಟ್ರೋಲ್ ಆಗಿದ್ದರು. ಆದರೆ ಈಗ ಮಾತ್ರ ಹೆಣ್ಣು ಮಕ್ಕಳ ಪಾತ್ರಗಳೇ ಅವರನ್ನು ಫೇಮಸ್ ಮಾಡಿದೆ. ಬರೀ ರಿಯಾಲಿಟಿ ಶೋಗಳಿಗಷ್ಟೇ ಅಲ್ಲದೆ ಕಾರ್ಯಕ್ರಮಗಳಿಗೂ ಅವಾರ್ಡ್ ಫಂಕ್ಷನ್‌ಗಳಿಗೂ ನಟ ರಾಘವೇಂದ್ರ ಹಲವು ಬಾರಿ ಹೆಣ್ಣು ಮಕ್ಕಳ ವೇಷದಲ್ಲೇ ಬರುತ್ತಾರೆ.

ವಿಶೇಷವೆಂದರೆ ನಟ ರಾಘವೇಂದ್ರ ಅವರ ಈ ರೀತಿಯ ಪಾತ್ರ ಆಯ್ಕೆಗೆ ಅವರ ಮನೆಯವರ ಸಂಪೂರ್ಣ ಸಹಕಾರವಿದೆಯಂತೆ. ರಾಘವೇಂದ್ರ ಅವರಿಗೆ ಇಂತಹ ಪಾತ್ರಗಳಿಗೆ ಅವರ ತಾಯಿಯೇ ಬ್ಲೌಸ್ ಹೋಲಿಸಿ ಕೊಡುತ್ತಾರಂತೆ. ಪಾತ್ರ ಯಾವುದಾದರೂ ಅಭಿನಯದ ಮೂಲಕ ಗೆಲುವು ಸಾಧ್ಯ ಎಂಬುದಕ್ಕೆ ನಟ ರಾಘವೇಂದ್ರ ಅವರೇ ಸಾಕ್ಷಿ.

ಹಸಿರು ಅಂಚಿನ ಗುಲಾಬಿ ಬಣ್ಣದ ಸೀರೆ ಉಟ್ಟ ನಟ ರಾಘವೇಂದ್ರ, ಕಡು ಹಸಿರು ಬಣ್ಣದ ಡಿಸೈನರ್ ಬ್ಲೌಸ್‌ಗೆ ತಾಳಿಸರ ಕಾಸಿನ ಸರ ಉಂಗುರ, ಕಣ್ಣಿಗೆ ಕಾಡಿಗೆ ತುಟಿಗೆ ಲಿಪ್‌ಸ್ಟಿಕ್ ಹೀಗೆ ನಾನಾ ರೀತಿಯ ಜ್ಯುವೆಲರಿ ಜೊತೆಗೆ ಒಳ್ಳೆಯ ಮೇಕಪ್ ಮಾಡಿ ಗಂಗಮ್ಮನ ಪಾತ್ರದಲ್ಲಿ ಮಿಂಚಿದ್ದಾರೆ.

ಮಜಾ ಭಾರತ ರಿಯಾಲಿಟಿ ಶೋ ಮೂಲಕ ಕನ್ನಡ ಜನತೆಗೆ ಪರಿಚಯವಾದ ಇವರು 'ಗಿಚ್ಚಿ ಗಿಲಿ ಗಿಲಿ', 'ಮಜಾ ಟಾಕೀಸ್' ಹೀಗೆ ಹಲವು ರಿಯಾಲಿಟಿ ಶೋ ಅವಾರ್ಡ್ ಫಂಕ್ಷನ್ ಹಾಗೂ ಧಾರಾವಾಹಿಗಳಲ್ಲಿ ಹೆಣ್ಣಿನ ಪಾತ್ರದಲ್ಲಿಯೇ ಮಿಂಚಿದ್ದಾರೆ.

ಇಷ್ಟಲ್ಲದೇ ನಟ ರಾಘವೇಂದ್ರ ಅವರು ಈ ಮೊದಲು 'ಗಿಚ್ಚಿ ಗಿಲಿ ಗಿಲಿ'ಯಲ್ಲಿ ರಾಗಿಣಿ ಪಾತ್ರದ ಮೂಲಕ ಬಹಳಷ್ಟು ಫೇಮಸ್ ಆದರು. ಇವರಿಗೆ ರಾಗಿಣಿ ಎಂದೇ ಹೆಚ್ಚಿನ ಜನ ಗುರುತಿಸುವಂತಾಗಿತ್ತು. ಇತ್ತೀಚೆಗಷ್ಟೇ ಒಂದು ಕುಕಿಂಗ್ ಶೋನಲ್ಲಿ ಕಾಣಿಸಿಕೊಂಡ ಇವರು ಇನ್‌ಸ್ಟಾಗ್ರಾಂ ಕ್ವೀನ್ ರೇಷ್ಮಾ ಆಂಟಿ ಅವರೊಂದಿಗೆ ಫುಲ್ ಕಾಮಿಡಿ ಮಾಡಿ ವೈರಲ್ ಆಗಿದ್ದರು. ಜೊತೆಗೆ ಶ್ರೀದೇವಿ ಮಹಾತ್ಮೆ ಧಾರಾವಾಹಿಯಲ್ಲಿ ನಾರದಮುನಿ ಪಾತ್ರವನ್ನು ನಿಭಾಯಿಸುವ ಮೂಲಕ ಜನಮನ್ನಣೆ ಗಳಿಸಿದ್ದರು.

More from Filmibeat

English summary
Raghavendra Aliyaas Ragini entry into the Maja Talkies as Gattigitti Gangamma
Read more about: actor comedy show maja talkies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X