25 ಲಕ್ಷದ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ ರಾಘವೇಂದ್ರ: ಯಾವುದು ಆ ಪ್ರಶ್ನೆ?

ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯಲ್ಲಿ ಇದುವರೆಗೂ ಯಾರು ಕೂಡ 25 ಲಕ್ಷ ಗೆದ್ದಿಲ್ಲ. ಆದರೆ ನಾಲ್ಕೈದು ಜನ 25 ಲಕ್ಷದ ಪ್ರಶ್ನೆಯನ್ನ ಎದುರಿಸಿದ್ದಾರೆ. ಕಳೆದ ವಾರವಷ್ಟೆ ಅನುರಾಧ ಅವರು 25 ಲಕ್ಷದ ಪ್ರಶ್ನೆ ಎದುರಿಸಿ ತಪ್ಪು ಉತ್ತರ ನೀಡಿದ್ದರು.

ಹಾಗಾಗಿ ದೊಡ್ಡ ಮೊತ್ತ ಕಳೆದುಕೊಳ್ಳಬೇಕಾಯಿತು. ಈ ವಾರ ರಾಘವೇಂದ್ರ ಅವರು ಕೂಡ 25 ಲಕ್ಷ ಪ್ರಶ್ನೆಯನ್ನ ಎದುರಿಸಿದರು. 12.5 ಲಕ್ಷದ ವರೆಗೂ ಉತ್ತಮ ಆಟ ಆಡಿದ್ದ ರಾಘವೇಂದ್ರ ಅವರು ಮುಖ್ಯವಾದ ಹಂತದಲ್ಲಿ ಕ್ವಿಟ್ ಮಾಡಿ ಗಳಿಸಿದ ಹಣವನ್ನ ತಮ್ಮಲ್ಲೇ ಉಳಿಸಿಕೊಂಡರು.

ಅಷ್ಟಕ್ಕೂ, ರಾಘವೇಂದ್ರ ಅವರು ಎದುರಿಸಿ 25 ಲಕ್ಷದ ಪ್ರಶ್ನೆ ಏನಾಗಿತ್ತು? ಯಾವ ವಿಷಯದ ಬಗ್ಗೆ ಕಾಲುಕೋಟಿಯ ಪ್ರಶ್ನೆ ಕೇಳಲಾಗಿತ್ತು.? ಮುಂದ ಓದಿ...

25 ಲಕ್ಷದ ಪ್ರಶ್ನೆ ಯಾವುದು?

25 ಲಕ್ಷದ ಪ್ರಶ್ನೆ ಯಾವುದು?

ಜವಹರಲಾಲ ನೆಹರು ಅವರನ್ನು ಹೊರತು ಪಡಿಸಿ, ನೆಹರು-ಗಾಂಧಿ ಕುಟುಂಬದ ಈ ವ್ಯಕ್ತಿಗಳಲ್ಲಿ ಯಾರ ಸಹಿಯನ್ನು ಭಾರತ ಸಂವಿಧಾನದ ಮೂಲ ಪ್ರತಿಯ ಮೇಲೆ ಕಾಣಬಹುದು?

A ಕೃಷ್ಣಾ ಹಥಿಸಿಂಗ್

B ಇಂದಿರಾ ಗಾಂಧಿ

C ಮೋತಿಲಾಲ ನೆಹರು

D ಫಿರೋಜ್ ‍ಷಾ ಗಾಂಧಿ

ಕ್ವಿಟ್ ಮಾಡಿದ ರಾಘವೇಂದ್ರ

ಕ್ವಿಟ್ ಮಾಡಿದ ರಾಘವೇಂದ್ರ

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಗೊತ್ತಿಲ್ಲದ ರಾಘವೇಂದ್ರ ಅವರು ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿದರು. ಅದಕ್ಕೂ ಮುಂಚೆ ಇಂದಿರಾ ಗಾಂಧಿ ಮತ್ತು ಮೋತಿಲಾಲ ನೆಹರು ಇಬ್ಬರಲ್ಲಿ ಒಬ್ಬರು ಇರಬಹುದು ಎಂದು ಊಹಿಸಿದ್ದರು. ಮೋತಿಲಾಲ ನೆಹರು ಸರಿ ಉತ್ತರ ಇರಬಹುದು ಎಂದು ಗೆಸ್ ಮಾಡುತ್ತಿದ್ದರು.

ಹಾಗಿದ್ರೆ ಸರಿ ಉತ್ತರ ಯಾವುದು?

ಹಾಗಿದ್ರೆ ಸರಿ ಉತ್ತರ ಯಾವುದು?

ಸ್ಪಷ್ಟ ಉತ್ತರ ಗೊತ್ತಿಲ್ಲದೇ ಆಟವನ್ನ ಕ್ವಿಟ್ ಮಾಡಿದರು. ಆಟಮುಗಿದ ಮೇಲೆ ಯಾವುದು ಲಾಕ್ ಮಾಡುತ್ತಿದ್ರಿ ಎಂದು ಕೇಳಿದ್ದಕ್ಕೆ ಮೋತಿಲಾಲ ನೆಹರು ಎಂದು ರಾಘವೇಂದ್ರ ಉತ್ತರಿಸಿದ್ದರು. ಆದರೆ ಅದು ತಪ್ಪು ಉತ್ತರ ಆಗಿತ್ತು. ಸರಿಯಾದ ಉತ್ತರ ಫಿರೋಜ್ ಷಾ ಗಾಂಧಿ ಆಗಿತ್ತು.

12.5 ಲಕ್ಷದ ಪ್ರಶ್ನೆ ಯಾವುದಾಗಿತ್ತು?

12.5 ಲಕ್ಷದ ಪ್ರಶ್ನೆ ಯಾವುದಾಗಿತ್ತು?

ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡರ ಜೊತೆಯಲ್ಲಿಯೂ ತನ್ನ ಸಮುದ್ರತೀರ ಹಂಚಿಕೊಳ್ಳುವ ಕೇಂದ್ರಾಡಳಿತ ಪ್ರದೇಶ ಯಾವುದು?

A ಪುದುಚೇರಿ

B ದಿಮನ್ ಮತ್ತು ದಿಯು

C ಅಂಡಮಾನ್ ಮತ್ತು ನಿಕೋಬಾರ್

D ಲಕ್ಷದ್ವೀಪ

ಫೋನ್ ಎ ಫ್ರೆಂಡ್ ಲೈಫ್ ಲೈನ್ ಬಳಸಿದ ರಾಘವೇಂದ್ರ ಅವರು A ಪುದುಚೇರಿ ಎಂದು ಉತ್ತರಿಸಿದರು.

More from Filmibeat

English summary
Kannadada kotyadhipathi 4: Raghavendra did not answered 25 lakh question. here is the 13th question of 25 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X