twitter
    For Quick Alerts
    ALLOW NOTIFICATIONS  
    For Daily Alerts

    25 ಲಕ್ಷದ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ ರಾಘವೇಂದ್ರ: ಯಾವುದು ಆ ಪ್ರಶ್ನೆ?

    |

    ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯಲ್ಲಿ ಇದುವರೆಗೂ ಯಾರು ಕೂಡ 25 ಲಕ್ಷ ಗೆದ್ದಿಲ್ಲ. ಆದರೆ ನಾಲ್ಕೈದು ಜನ 25 ಲಕ್ಷದ ಪ್ರಶ್ನೆಯನ್ನ ಎದುರಿಸಿದ್ದಾರೆ. ಕಳೆದ ವಾರವಷ್ಟೆ ಅನುರಾಧ ಅವರು 25 ಲಕ್ಷದ ಪ್ರಶ್ನೆ ಎದುರಿಸಿ ತಪ್ಪು ಉತ್ತರ ನೀಡಿದ್ದರು.

    ಹಾಗಾಗಿ ದೊಡ್ಡ ಮೊತ್ತ ಕಳೆದುಕೊಳ್ಳಬೇಕಾಯಿತು. ಈ ವಾರ ರಾಘವೇಂದ್ರ ಅವರು ಕೂಡ 25 ಲಕ್ಷ ಪ್ರಶ್ನೆಯನ್ನ ಎದುರಿಸಿದರು. 12.5 ಲಕ್ಷದ ವರೆಗೂ ಉತ್ತಮ ಆಟ ಆಡಿದ್ದ ರಾಘವೇಂದ್ರ ಅವರು ಮುಖ್ಯವಾದ ಹಂತದಲ್ಲಿ ಕ್ವಿಟ್ ಮಾಡಿ ಗಳಿಸಿದ ಹಣವನ್ನ ತಮ್ಮಲ್ಲೇ ಉಳಿಸಿಕೊಂಡರು.

    ಕೂದಲೆಳೆಯ ಅಂತರದಲ್ಲಿ 25 ಲಕ್ಷ ಕಳೆದುಕೊಂಡ ಕೋಟ್ಯಧಿಪತಿ ಸ್ಪರ್ಧಿ ಅನುರಾಧಕೂದಲೆಳೆಯ ಅಂತರದಲ್ಲಿ 25 ಲಕ್ಷ ಕಳೆದುಕೊಂಡ ಕೋಟ್ಯಧಿಪತಿ ಸ್ಪರ್ಧಿ ಅನುರಾಧ

    ಅಷ್ಟಕ್ಕೂ, ರಾಘವೇಂದ್ರ ಅವರು ಎದುರಿಸಿ 25 ಲಕ್ಷದ ಪ್ರಶ್ನೆ ಏನಾಗಿತ್ತು? ಯಾವ ವಿಷಯದ ಬಗ್ಗೆ ಕಾಲುಕೋಟಿಯ ಪ್ರಶ್ನೆ ಕೇಳಲಾಗಿತ್ತು.? ಮುಂದ ಓದಿ...

    25 ಲಕ್ಷದ ಪ್ರಶ್ನೆ ಯಾವುದು?

    25 ಲಕ್ಷದ ಪ್ರಶ್ನೆ ಯಾವುದು?

    ಜವಹರಲಾಲ ನೆಹರು ಅವರನ್ನು ಹೊರತು ಪಡಿಸಿ, ನೆಹರು-ಗಾಂಧಿ ಕುಟುಂಬದ ಈ ವ್ಯಕ್ತಿಗಳಲ್ಲಿ ಯಾರ ಸಹಿಯನ್ನು ಭಾರತ ಸಂವಿಧಾನದ ಮೂಲ ಪ್ರತಿಯ ಮೇಲೆ ಕಾಣಬಹುದು?

    A ಕೃಷ್ಣಾ ಹಥಿಸಿಂಗ್

    B ಇಂದಿರಾ ಗಾಂಧಿ

    C ಮೋತಿಲಾಲ ನೆಹರು

    D ಫಿರೋಜ್ ‍ಷಾ ಗಾಂಧಿ

    ಕೋಟ್ಯಧಿಪತಿಯಲ್ಲಿ 25 ಲಕ್ಷ ಗೆಲ್ಲುವ ಅವಕಾಶ ಕಳೆದುಕೊಂಡ ವೈಭವ್ಕೋಟ್ಯಧಿಪತಿಯಲ್ಲಿ 25 ಲಕ್ಷ ಗೆಲ್ಲುವ ಅವಕಾಶ ಕಳೆದುಕೊಂಡ ವೈಭವ್

    ಕ್ವಿಟ್ ಮಾಡಿದ ರಾಘವೇಂದ್ರ

    ಕ್ವಿಟ್ ಮಾಡಿದ ರಾಘವೇಂದ್ರ

    ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಗೊತ್ತಿಲ್ಲದ ರಾಘವೇಂದ್ರ ಅವರು ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿದರು. ಅದಕ್ಕೂ ಮುಂಚೆ ಇಂದಿರಾ ಗಾಂಧಿ ಮತ್ತು ಮೋತಿಲಾಲ ನೆಹರು ಇಬ್ಬರಲ್ಲಿ ಒಬ್ಬರು ಇರಬಹುದು ಎಂದು ಊಹಿಸಿದ್ದರು. ಮೋತಿಲಾಲ ನೆಹರು ಸರಿ ಉತ್ತರ ಇರಬಹುದು ಎಂದು ಗೆಸ್ ಮಾಡುತ್ತಿದ್ದರು.

    ಕೋಟ್ಯಧಿಪತಿಯ ಈ ಆವೃತ್ತಿಯಲ್ಲಿ ಯಾರೂ ಮಾಡದ ದಾಖಲೆ ಮಾಡ್ತಾರಾ ಅನುರಾಧಾ ?ಕೋಟ್ಯಧಿಪತಿಯ ಈ ಆವೃತ್ತಿಯಲ್ಲಿ ಯಾರೂ ಮಾಡದ ದಾಖಲೆ ಮಾಡ್ತಾರಾ ಅನುರಾಧಾ ?

    ಹಾಗಿದ್ರೆ ಸರಿ ಉತ್ತರ ಯಾವುದು?

    ಹಾಗಿದ್ರೆ ಸರಿ ಉತ್ತರ ಯಾವುದು?

    ಸ್ಪಷ್ಟ ಉತ್ತರ ಗೊತ್ತಿಲ್ಲದೇ ಆಟವನ್ನ ಕ್ವಿಟ್ ಮಾಡಿದರು. ಆಟಮುಗಿದ ಮೇಲೆ ಯಾವುದು ಲಾಕ್ ಮಾಡುತ್ತಿದ್ರಿ ಎಂದು ಕೇಳಿದ್ದಕ್ಕೆ ಮೋತಿಲಾಲ ನೆಹರು ಎಂದು ರಾಘವೇಂದ್ರ ಉತ್ತರಿಸಿದ್ದರು. ಆದರೆ ಅದು ತಪ್ಪು ಉತ್ತರ ಆಗಿತ್ತು. ಸರಿಯಾದ ಉತ್ತರ ಫಿರೋಜ್ ಷಾ ಗಾಂಧಿ ಆಗಿತ್ತು.

    25 ಲಕ್ಷದ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ದೇವಮ್ಮ 'ಕೋಟ್ಯಧಿಪತಿ' ಆಟ ಕ್ವಿಟ್ ಮಾಡಿದ್ದೇಕೆ?25 ಲಕ್ಷದ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ದೇವಮ್ಮ 'ಕೋಟ್ಯಧಿಪತಿ' ಆಟ ಕ್ವಿಟ್ ಮಾಡಿದ್ದೇಕೆ?

    12.5 ಲಕ್ಷದ ಪ್ರಶ್ನೆ ಯಾವುದಾಗಿತ್ತು?

    12.5 ಲಕ್ಷದ ಪ್ರಶ್ನೆ ಯಾವುದಾಗಿತ್ತು?

    ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡರ ಜೊತೆಯಲ್ಲಿಯೂ ತನ್ನ ಸಮುದ್ರತೀರ ಹಂಚಿಕೊಳ್ಳುವ ಕೇಂದ್ರಾಡಳಿತ ಪ್ರದೇಶ ಯಾವುದು?

    A ಪುದುಚೇರಿ

    B ದಿಮನ್ ಮತ್ತು ದಿಯು

    C ಅಂಡಮಾನ್ ಮತ್ತು ನಿಕೋಬಾರ್

    D ಲಕ್ಷದ್ವೀಪ

    ಫೋನ್ ಎ ಫ್ರೆಂಡ್ ಲೈಫ್ ಲೈನ್ ಬಳಸಿದ ರಾಘವೇಂದ್ರ ಅವರು A ಪುದುಚೇರಿ ಎಂದು ಉತ್ತರಿಸಿದರು.

    English summary
    Kannadada kotyadhipathi 4: Raghavendra did not answered 25 lakh question. here is the 13th question of 25 lakh.
    Monday, September 23, 2019, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X