»   » ಛೇ..'ಕಾಮಿಡಿ ಕಿಲಾಡಿಗಳು' ಮುಗ್ದೋಯ್ತಲ್ಲ ಅಂತ ಬೇಸರ ಪಡ್ತಿದ್ದೋರಿಗೆ ಹ್ಯಾಪಿ ನ್ಯೂಸ್.!

ಛೇ..'ಕಾಮಿಡಿ ಕಿಲಾಡಿಗಳು' ಮುಗ್ದೋಯ್ತಲ್ಲ ಅಂತ ಬೇಸರ ಪಡ್ತಿದ್ದೋರಿಗೆ ಹ್ಯಾಪಿ ನ್ಯೂಸ್.!

Posted By:
Subscribe to Filmibeat Kannada

ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆ ಆಯ್ತು ಅಂದ್ರೆ ಸಾಕು... ತಪ್ಪದೆ ಟಿವಿ ಮುಂದೆ ಹಾಜರ್ ಆಗಿ... ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಟ್ಯೂನ್ ಮಾಡ್ತಿದ್ದೋರಿಗೆ ಇನ್ಮುಂದೆ ಸ್ವಲ್ಪ ಬೋರ್ ಆಗಬಹುದು. ಯಾಕಂದ್ರೆ, 'ಕಾಮಿಡಿ ಕಿಲಾಡಿಗಳು' ಮುಗ್ದೋಯ್ತಲ್ವಾ.!

ಆದರೂ, ವೀಕ್ಷಕರಿಗೆ ಬೋರ್ ಆಗಬಾರದು ಅಂತ ಅದೇ ಸಮಯಕ್ಕೆ ಜೀ ಕನ್ನಡ ವಾಹಿನಿ ಹೊಸ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಆದ್ರೆ, ಕಾಮಿಡಿ ಕಿಲಾಡಿಗಳನ್ನ ಮಿಸ್ ಮಾಡಿಕೊಳ್ಳುತ್ತಿರುವವರನ್ನ ಸಂತೈಸಲು ಹೇಗೆ ಸಾಧ್ಯ.?['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

ಈ ಡೌಟ್ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಿಗೆ ಬಂದಿರುವುದರಿಂದಲೇ ಒಂದು ಹೊಸ ಕಾನ್ಸೆಪ್ಟ್ ಹುಟ್ಟಿಕೊಂಡಿದೆ. ಅದೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಓದಿರಿ....

ಮತ್ತೊಮ್ಮೆ ಬರ್ತಿದ್ದಾರೆ 'ಕಾಮಿಡಿ ಕಿಲಾಡಿಗಳು'

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳನ್ನ ನೀವು ಮಿಸ್ ಮಾಡಿಕೊಳ್ಳುವ ಹಾಗೇ ಇಲ್ಲ. ಯಾಕಂದ್ರೆ, ಅವರೆಲ್ಲ ಹೊಸ ಕಾರ್ಯಕ್ರಮವೊಂದರ ಮೂಲಕ ನಿಮ್ಮ ಮುಂದೆ ಮತ್ತೆ ಹಾಜರ್ ಆಗಲಿದ್ದಾರೆ.['ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!]

'ಡ್ರಾಮಾ ಜ್ಯೂನಿಯರ್ಸ್' ಪುಟಾಣಿಗಳು ಕೂಡ ಬರ್ತಿದ್ದಾರೆ.!

ಬರೀ 'ಕಾಮಿಡಿ ಕಿಲಾಡಿಗಳು' ಮಾತ್ರ ಅಲ್ಲ. ಅವರ ಜೊತೆಗೆ 'ಡ್ರಾಮಾ ಜ್ಯೂನಿಯರ್ಸ್' ಪುಟಾಣಿಗಳು ಕೂಡ ನಿಮ್ಮನ್ನ ರಂಜಿಸಲು ಬರುತ್ತಿದ್ದಾರೆ.

ಬರಲಿದೆ ಹೊಸ ಕಾರ್ಯಕ್ರಮ 'ಕಿಲಾಡಿ ಕುಟುಂಬ'!

'ಕಾಮಿಡಿ ಕಿಲಾಡಿಗಳು' ಹಾಗೂ 'ಡ್ರಾಮಾ ಜ್ಯೂನಿಯರ್ಸ್' ಪುಟಾಣಿಗಳು 'ಕಿಲಾಡಿ ಕುಟುಂಬ' ಎಂಬ ರಿಯಾಲಿಟಿ ಶೋನಲ್ಲಿ ಒಂದಾಗಲಿದ್ದಾರೆ.['ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ']

ಜಗ್ಗೇಶ್ ಸಾರಥಿ

ಅಂದ್ಹಾಗೆ, 'ಕಾಮಿಡಿ ಕಿಲಾಡಿಗಳು' ಮತ್ತು 'ಡ್ರಾಮಾ ಜ್ಯೂನಿಯರ್ಸ್' ಒಂದಾಗಲಿರುವ 'ಕಿಲಾಡಿ ಕುಟುಂಬ' ಕಾರ್ಯಕ್ರಮಕ್ಕೆ ಸಾರಥ್ಯ ವಹಿಸುತ್ತಿರುವವರು ನವರಸ ನಾಯಕ ಜಗ್ಗೇಶ್.['ಕಾಮಿಡಿ ಕಿಲಾಡಿ' ಲೋಕೇಶ್ ಬಗ್ಗೆ ನಿಮಗೆಲ್ಲಾ ಗೊತ್ತಿಲ್ಲದ ಸತ್ಯ ಸಂಗತಿ ಇಲ್ಲಿದೆ]

ಕಾರ್ಯಕ್ರಮ ಪ್ರಸಾರ ಯಾವಾಗ.?

ಅಂದ್ಹಾಗೆ, 'ಕಿಲಾಡಿ ಕುಟುಂಬ' ಕಾರ್ಯಕ್ರಮದ ಬಗ್ಗೆ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅನೌನ್ಸ್ ಮಾಡಿದ್ದಾರೆ. 'ಕಿಲಾಡಿ ಕುಟುಂಬ' ಕಾರ್ಯಕ್ರಮದ ರೂಪುರೇಷೆ ತಯಾರಾಗಿ, ಚಿತ್ರೀಕರಣಗೊಳ್ಳುವುದಕ್ಕೆ ಇನ್ನೂ ಸ್ವಲ್ಪ ಟೈಮ್ ಬೇಕು.

English summary
Zee Kannada Channel head Raghavendra Hunsur announced a new show called 'Khiladi Kutumba' with 'Drama Juniors' and 'Comedy Khiladigalu' Contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada