'ವೀಕೆಂಡ್ ವಿತ್ ರಮೇಶ್'ಗೆ ಕಾರ್ನಾಡರನ್ನು ಕರೆಸೋ ಪ್ಲಾನ್ ಫೇಲ್ ಆಯ್ತು

Recommended Video

Weekend With Ramesh Season 4: ಫೇಸ್‍ಬುಕ್‍ನಲ್ಲಿ ಬೇಸರ ತೋಡಿಕೊಂಡ ರಾಘವೇಂದ್ರ ಹುಣಸೂರು | FILMIBEAT KANNADA

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಅನೇಕ ವಿಭಾಗದ, ಅನೇಕ ಸಾಧಕರು ಬಂದು ಹೋಗಿದ್ದಾರೆ. ಅದೇ ರೀತಿ ಕನ್ನಡದ ಖ್ಯಾತ ಕವಿ, ಬರಹಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಕೂಡ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು.

ಕಾರ್ನಾಡರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರೆ ತರುವ ತಯಾರಿ ನಡೆದಿತ್ತು. ಆದರೆ, ಅವರು ಸಾಧಕರ ಸೀಟ್ ಮೇಲೆ ಕೂರುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರನ್ನು ನೋಡುವ ಕನಸು ಹಾಗೆಯೇ ಉಳಿದಿದೆ.

ಈ ವಿಷಯವನ್ನು ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾರ್ನಾಡರ ಒಂದು ವಿಡಿಯೋವನ್ನು ಶೇರ್ ಮಾಡಿ ''ನಾವು ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಸರ್. ನಿಮ್ಮನ್ನು ವೀಕೆಂಡ್ ವಿತ್ ರಮೇಶ್ ಕುರ್ಚಿ ಮೇಲೆ ಕೂರಿಸಬೇಕು ಎಂದು ತುಂಬ ದಿನದಿಂದ ಕಾಯುತ್ತಿದ್ದೆವು. ಆದರೆ, ಅದು ಫೇಲ್ ಆಯ್ತು.'' ಎಂದಿದ್ದಾರೆ.

raghavendra hunsur waited a lot to get girish karnad on wwr chair

ಕನ್ನಡ ಸಾಹಿತ್ಯ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಕಾರ್ನಾಡರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡುವುದು ಬಹಳ ಖುಷಿಯ ವಿಷಯ ಆಗಿತ್ತು. ಆದರೆ, ಅದು ಇನ್ನೆಂದು ಈಡೇರುವುದಿಲ್ಲ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಕಳೆದ ಸೋಮವಾರ ಬೆಳಗ್ಗೆ ವಿಧಿವಶರಾದರು. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದರು.

More from Filmibeat

English summary
Zee kannada business head Raghavendra Hunsur waited a lot to get girish karna on Weekend With Ramesh chair.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X