twitter
    For Quick Alerts
    ALLOW NOTIFICATIONS  
    For Daily Alerts

    'ವೀಕೆಂಡ್ ವಿತ್ ರಮೇಶ್'ಗೆ ದ್ರಾವಿಡ್ ಬರಬೇಕೆ?, ಹಾಗಾದ್ರೆ ಹೀಗೆ ಮಾಡಿ!

    |

    Recommended Video

    ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮ ಶುರು | Oneindia Kannada

    ಜೀ ಕನ್ನಡ ವಾಹಿನಿಯಲ್ಲಿ 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಶುರುವಾಗುತ್ತಿದೆ. ಇಂದು ಕಾರ್ಯಕ್ರಮದ ಬಗ್ಗೆ ಪ್ರೆಸ್ ಮೀಟ್ ಮಾಡಲಾಗಿದ್ದು, ಕೆಲ ವಿವರಗಳನ್ನು ಹಂಚಿಕೊಳ್ಳಲಾಗಿದೆ.

    ಈ ಕಾರ್ಯಕ್ರಮ ಹೈಲೈಟ್ ಅಂದರೆ ಅತಿಥಿಗಳು. ಪ್ರತಿ ಸೀಸನ್ ಶುರು ಆದಾಗಲೂ ಕೆಂಪು ಬಣ್ಣದ ಕುರ್ಚಿ ಮೇಲೆ ಕೂರುವ ಸಾಧಕರು ಯಾರು ಎನ್ನುವ ಕುತೂಹಲ ಇರುತ್ತದೆ. ಮತ್ತೊಂದು ಕಡೆ ವೀಕ್ಷಕರು ತಮ್ಮ ನೆಚ್ಚಿನ ಸಾಧಕರ ಹೆಸರನ್ನು ಸೂಚಿಸುತ್ತಾರೆ.

    'ವೀಕೆಂಡ್ ವಿತ್ ರಮೇಶ್'ನಲ್ಲಿ ಅಪ್ಪುಗೆ ಬಹಳ ಇಷ್ಟ ಆಗುವುದಿದು 'ವೀಕೆಂಡ್ ವಿತ್ ರಮೇಶ್'ನಲ್ಲಿ ಅಪ್ಪುಗೆ ಬಹಳ ಇಷ್ಟ ಆಗುವುದಿದು

    ಆ ರೀತಿ ಜನರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡಲು ಬಯಸಿದ ಸಾಧಕರಲ್ಲಿ ಪ್ರಮುಖರು ರಾಹುಲ್ ದ್ರಾವಿಡ್. ಭಾರತ ಕ್ರಿಕೆಟ್ ನ ದಂತ ಕತೆಯಾಗಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ದ್ರಾವಿಡ್ ರನ್ನು ಈ ಕಾರ್ಯಕ್ರಮದಲ್ಲಿ ನೋಡುವ ಆಸೆ ಪ್ರತಿ ಕನ್ನಡಿಗನಿಗೂ ಇದೆ.

    ಆದರೆ, ದ್ರಾವಿಡ್ ಈ ವರೆಗೆ ಕಾರ್ಯಕ್ರಮದಲ್ಲಿ ಬರಲು ಸಾಧ್ಯ ಆಗಿಲ್ಲ. ಈ ಬಗ್ಗೆ ಮಾತನಾಡಿರುವ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅದಕ್ಕೆ ವೀಕ್ಷಕರ ಸಹಕಾರ ಕೇಳಿದ್ದಾರೆ.......

    ಮೊದಲ ಸೀಸನ್ ನಿಂದ ಪ್ರಯತ್ನ

    ಮೊದಲ ಸೀಸನ್ ನಿಂದ ಪ್ರಯತ್ನ

    'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ರಾಹುಲ್ ದ್ರಾವಿಡ್ ರನ್ನು ಕರೆಸುವ ಪ್ರಯತ್ನ ಮೊದಲ ಸೀಸನ್ ನಿಂದ ನಡೆಯುತ್ತಿದೆಯಂತೆ. ಕಾರ್ಯಕ್ರಮ ಶುರು ಆದಾಗಿನಿಂದ ದ್ರಾವಿಡ್ ರನ್ನು ನೋಡುವ ಬಯಕೆ ವೀಕ್ಷಕರದ್ದಾಗಿದೆ. ಅದೇ ರೀತಿ ಜೀ ಕನ್ನಡ ವಾಹಿನಿ ಕೂಡ ಮೊದಲ ಸೀಸನ್ ನಿಂದಲೂ ದ್ರಾವಿಡ್ ರಿಗೆ ಪತ್ರ ಬರೆಯುತ್ತಿದೆಯಂತೆ.

    ಕಾರಣಾಂತರಗಳಿಂದ ಆದು ಸಾಧ್ಯ ಆಗುತಿಲ್ಲ

    ಕಾರಣಾಂತರಗಳಿಂದ ಆದು ಸಾಧ್ಯ ಆಗುತಿಲ್ಲ

    ಈ ಬಗ್ಗೆ ಇಂದಿನ ಪ್ರೆಸ್ ಮೀಟ್ ನಲ್ಲಿ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿದರು. ''ದ್ರಾವಿಡ್ ಅವರು ಕೆಲವು ಕಾರಣಗಳಿಂದ ಬರಲು ಆಗುತ್ತಿಲ್ಲ. ವೀರೆಂದ್ರ ಹೆಗ್ಡೆ ರವರಿಗೆ ಸಹ ಮೊದಲ ಸೀಸನ್ ನಿಂದ ಪ್ರಯತ್ನ ಮಾಡುತ್ತಿದ್ದೆವು. ಆ ಸಮಯ ಈಗ ಕೂಡಿ ಬಂದಿದೆ'' ಎಂದರು.

    ಅತ್ತ ರಮೇಶ್, ಇತ್ತ ಪುನೀತ್ : ಪೈಪೋಟಿ ಜೊತೆ ಮನರಂಜನೆ ಅತ್ತ ರಮೇಶ್, ಇತ್ತ ಪುನೀತ್ : ಪೈಪೋಟಿ ಜೊತೆ ಮನರಂಜನೆ

    ದ್ರಾವಿಡ್ ಬೇಕು ಅಂದರೆ ಹೀಗೆ ಮಾಡಿ

    ದ್ರಾವಿಡ್ ಬೇಕು ಅಂದರೆ ಹೀಗೆ ಮಾಡಿ

    'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ದ್ರಾವಿಡ್ ಬರಬೇಕು ಅಂದರೆ ಏನು ಮಾಡಬೇಕು ಎನ್ನುವುದನ್ನು ಸಹ ರಾಘವೇಂದ್ರ ಹುಣಸೂರು ತಿಳಿಸಿದರು. ''ಪತ್ರದ ಮೂಲಕ ಪ್ರಯತ್ನ ಮಾಡಿದ್ದು ಆಗಿದೆ. ಈಗ ಟ್ವಿಟ್ಟರ್ ನ ಮೂಲಕ ಪ್ರಯತ್ನ ಮಾಡೋಣ ಎಂದಿರುವ ಅವರು ಒಂದು ಹ್ಯಾಗ್ ಟ್ಯಾಗ್ ಬಳಸಿ ದ್ರಾವಿಡ್ ಅವರಿಗೆ ತಲುಪಿಸೋಣ ಎಂಬ ಸಲಹೆ ನೀಡಿದರು.

    #WWRDravid ಎಂಬ ಹ್ಯಾಶ್ ಟ್ಯಾಗ್

    #WWRDravid ಎಂಬ ಹ್ಯಾಶ್ ಟ್ಯಾಗ್

    ರಾಹುಲ್ ದ್ರಾವಿಡ್ ಅವರ ಜೊತೆಗೆ ಪತ್ರದ ಚಳುವಳಿ ಮೂಲಕ ಪ್ರಯತ್ನ ಮಾಡಿದ್ದೇವೆ. ಈಗ #WWRDravid ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರ್ ಚಳುವಳಿ ಮಾಡಬೇಕಿದೆ. ಈ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿ, ಅದು ರಾಹುಲ್ ದ್ರಾವಿಡ್ ಅವರಿಗೆ ತಲುಪಿಸಿ ಎಂದು ರಾಘವೇಂದ್ರ ಹುಣಸೂರು ವೀಕ್ಷಕರ ಸಹಾಯವನ್ನು ಕೇಳಿದರು.

    ವೀಕೆಂಡ್ ವಿತ್ ರಮೇಶ್-4 ಮೊದಲ ಅತಿಥಿಯ ಹೆಸರು ಬಹಿರಂಗ.! ವೀಕೆಂಡ್ ವಿತ್ ರಮೇಶ್-4 ಮೊದಲ ಅತಿಥಿಯ ಹೆಸರು ಬಹಿರಂಗ.!

    ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್

    ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್

    ದ್ರಾವಿಡ್ ಮಾತ್ರವಲ್ಲದೆ ಭಾರತ ಕ್ರಿಕೆಟ್ ತಂಡದ ಇತರ ಶ್ರೇಷ್ಠ ಆಟಗಾರರಾದ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಸಹ ಕರೆ ತರುವ ಪ್ರಯತ್ನ ನಡೆದಿದೆಯಂತೆ. ''ಅವರ ಬಗ್ಗೆ ರಿಸರ್ಚ್ ಶುರು ಮಾಡಿದ್ದೇವೆ. ಅವರು ಕಾರ್ಯಕ್ರಮಕ್ಕೆ ಬಂದರೆ ಒಂದು ಅದ್ಬುತ ಶೋ ನೀಡುವ ಭರವಸೆಯನ್ನು ನೀಡುತ್ತೇವೆ.'' ಎಂದು ಈ ಮೂಲಕ ರಾಘವೇಂದ್ರ ಹುಣಸೂರು ತಿಳಿಸಿದರು.

    English summary
    Zee Kannada channel business head Raghavendra Hunsur want viewer support to take Rahul Dravid in 'Weekend With Ramesh' show.
    Monday, April 15, 2019, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X