'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ?

Recommended Video

Weekend With Ramesh Season 4: ರಾಘಣ್ಣನಿಗೆ ದೊಡ್ಡ ಬ್ರೇಕ್ ತಂದುಕೊಟ್ಟ ಸಿನೆಮಾ ನಂಜುಂಡಿ ಕಲ್ಯಾಣ

ವರ ನಟ ಡಾ. ರಾಜ್ ಕುಮಾರ್ ಅವರ ಮೂರನೆ ಮಗ ರಾಘವೇಂದ್ರ ರಾಜ್ ಕುಮಾರ್. 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ರಾಘವೇಂದ್ರ ರಾಜ್ ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಆದ್ರೆ ರಾಘಣ್ಣ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ತಂದು ಕೊಟ್ಟಂತ ಸಿನಿಮಾ 'ನಂಜುಂಡಿ ಕಲ್ಯಾಣ'.

1989ರಲ್ಲಿ ತೆರೆಗೆ ಬಂದ 'ನಂಜುಂಡಿ ಕಲ್ಯಾಣ' ಸೂಪರ್ ಹಿಟ್ ಸಿನಿಮಾ ಆಗಿತ್ತು. ಮಾಲಾಶ್ರೀ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೆಮಿಸ್ಟ್ರಿಗೆ ಚಿತ್ರಪ್ರಿಯರು ಫಿದಾ ಆಗಿದ್ದರು. ರಾಘಣ್ಣ ಮತ್ತು ಮಾಲಾಶ್ರಿ ಅವರ ಅದ್ಭುತ ಅಭಿನಯ, ಸಂಗೀತ, ಎಂ ಎಸ್ ರಾಜಶೇಖರ್ ನಿರ್ದೇಶಕನಕ್ಕೆ ಸಿನಿಪ್ರಿಯರು ಮನಸೋತಿದ್ದರು.

ಚಿತ್ರಪ್ರಿಯರು ಹಾಡಿ ಹೊಗಳುವ, ರಾಘವೇಂದ್ರ ರಾಜ್ ಕುಮಾರ್ ಸಿನಿ ಪಯಣದಲ್ಲಿ ದೊಡ್ಡ ಮೈಲಿಗಲ್ಲಾಗಿರುವ 'ನಂಜುಂಡಿ ಕಲ್ಯಾಣ' ಸಿನಿಮಾ ಅಂದ್ರೆ ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ಅವರಿಗೆ ಇಷ್ಟವಿಲ್ಲ. ಆ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಕೋಪ ಅಂತೆ. ಮುಂದೆ ಓದಿ..

ನಂಜುಂಡಿ ಕಲ್ಯಾಣ ಸಿನಿಮಾ ಅಂದ್ರೆ ಇಷ್ಟವಿಲ್ಲ

ನಂಜುಂಡಿ ಕಲ್ಯಾಣ ಸಿನಿಮಾ ಅಂದ್ರೆ ಇಷ್ಟವಿಲ್ಲ

ಬ್ಲಾಕ್ ಬಸ್ಟರ್ 'ನಂಜುಂಡಿ ಕಲ್ಯಾಣ' ಸಿನಿಮಾ ಅಂದ್ರೆ ಮಂಗಳಮ್ಮ ಅವರಿಗೆ ಇಷ್ಟವಿಲ್ಲ. ಕಾರಣ ಆಗಷ್ಟೆ ರಾಘವೇಂದ್ರ ರಾಜ್ ಕುಮಾರ್ ಜೊತೆ ಕಲ್ಯಾಣ ಆಗಿದ್ದ ಮಂಗಳ ಅವರಿಗೆ, ಸಿನಿಮಾದಲ್ಲಿ ರಾಗಣ್ಣ ಅವರು ಮಾಲಾಶ್ರೀ ಜೊತೆ ಕಲ್ಯಾಣ ಆಗಿದ್ದು ನೋಡಿ ಸಹಿಸಿಕೊಳ್ಳೊಕೆ ಆಗಿರಲಿಲ್ಲವಂತೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರಂತೆ. ಚಿತ್ರದಲ್ಲಿ ಹೆಚ್ಚು ತಬ್ಬಿಕೊಳ್ಳುವ ದೃಶ್ಯಗಳು ಮತ್ತು ಲವ್ ಸೀನ್ ಗಳು ಇದ್ದ ಕಾರಣ ಮಂಗಳ ಅವರಿಗೆ ಈ ಸಿನಿಮಾ ಅಂದ್ರೆ ಆಗಲ್ಲವಂತೆ.

ರಾಘಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಮಂಗಳ

ರಾಘಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಮಂಗಳ

'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಹೆಚ್ಚು ಲವ್ ಸೀನ್ ಮತ್ತು ತಬ್ಬಿಕೊಳ್ಳುವ ದೃಶ್ಯಗಳಿವೆ. ಆಗತಾನೆ ಮದುವೆಯಾಗಿದ್ದ ಮಂಗಳ ಅವರಿಗೆ ಸಿನಿಮಾ ಬಗ್ಗೆ ಹೆಚ್ಚಾಗಿ ಗೊತ್ತಿರದ ಕಾರಣ ರಾಘಣ್ಣನ ಪಾತ್ರ ನೋಡಿ ಸಖತ್ ಕೋಪ ಮಾಡಿಕೊಂಡಿದ್ದರಂತೆ. ಸಿನಿಮಾ ನೋಡಿ ಮನೆಗೆ ಬಂದಮೇಲೆ ಮಂಗಳ ಅವರು ರಾಘಣ್ಣ ಅವರನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದರಂತೆ. ಲವ್ ಸೀನ್ ಗಳನ್ನು ಮಾಡಬಾರದು ಎಂದು ಜಗಳ ಆಡಿದ್ದಾರಂತೆ.

ಅಣ್ಣನ ಮದುವೆಯಲ್ಲಿ ಪರಿಚಯವಾದ ಮಂಗಳ

ಅಣ್ಣನ ಮದುವೆಯಲ್ಲಿ ಪರಿಚಯವಾದ ಮಂಗಳ

ರಾಘವೇಂದ್ರ ರಾಜ್ ಕುಮಾರ್ ಮಂಗಳ ಅವರನ್ನು ಮೊದಲು ನೋಡಿದ್ದು ಶಿವರಾಜ್ ಕುಮಾರ್ ಅವರ ಮದುವೆಯಲ್ಲಿಂತೆ. ಶಿವಣ್ಣ ಮತ್ತು ಗೀತಾ ಅವರ ಮದುವೆಯಲ್ಲಿ ಮಂಗಳ ಅವರನ್ನು ನೋಡಿದ ರಾಘಣ್ಣ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿದೆ. ಆಗಲೆ ಮದುವೆಯಾದರೆ ಮಂಗಳ ಅವರನ್ನೆ ಮದುವೆಯಾಗಬೇಕೆಂದು ನಿರ್ಧರಿಸಿದ್ದರಂತೆ ರಾಘವೇಂದ್ರ ರಾಜ್ ಕುಮಾರ್.

ಶಿವಣ್ಣನ ಪತ್ನಿ ಅವರ ಚಿಕ್ಕಮ್ಮನ ಮಗಳು ಮಂಗಳ

ಶಿವಣ್ಣನ ಪತ್ನಿ ಅವರ ಚಿಕ್ಕಮ್ಮನ ಮಗಳು ಮಂಗಳ

ಶಿವರಾಜ್ ಕುಮಾರ್ ಪತ್ನಿ ಗೀತಾ ಮತ್ತು ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ಇಬ್ಬರು ಸೋದರ ಸಂಬಂಧಿಕರು. ಗೀತಾ ಅವರ ತಾಯಿ ಮತ್ತು ಮಂಗಳ ಅವರ ತಾಯಿ ಇಬ್ಬರು ಅಕ್ಕ ತಂಗಿ. ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳು ಗೀತಾಕ್ಕ ಮತ್ತು ಮಂಗಳಮ್ಮ. ಅಕ್ಕನ ಮದುವೆಯಲ್ಲಿ ರಾಘಣ್ಣ ಅವರನ್ನು ನೋಡಿ ಪ್ರೀತಿಸಲು ಶುರುಮಾಡಿದ್ದರು ಮಂಗಳ. ಆ ನಂತರ ಮನೆಯವರ ಒಪ್ಪಿಗೆ ಮೇರಿಗೆ ರಾಘಣ್ಣ ಅವರ ಕೈ ಹಿಡಿದಿದ್ದಾರೆ.

More from Filmibeat

English summary
Kannada actor raghavendra raj kumar wife mangala spoke about nanjundi kalyana movie in weekend with ramesh 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X