twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ ನನ್ನ ತಂದೆ, ಪುನೀತ್ ನನ್ನ ಪಿಲ್ಲರ್: ಸಹೋದರರ ಬಗ್ಗೆ ಭಾವುಕರಾದ ರಾಘಣ್ಣ

    |

    ''ನನ್ನ ಆಯುಷ್ಯ ನೀನೇ ತಗೋ, ನನ್ನ ಪ್ರಾಣ ಬೇಕಾದರೂ ಕೊಡ್ತೀನಿ'' ಒಬ್ಬ ಅಣ್ಣ ಸಹೋದರನಿಗೆ ಈ ಮಾತನ್ನ ಹೇಳಿದಾಗ ಎಂತವರ ಮನಸ್ಸು ಕೂಡ ಕರಗಿಬಿಡುತ್ತೆ. ಅಂದ್ಹಾಗೆ, ಈ ಮಾತು ಹೇಳಿದ್ದು ಶಿವರಾಜ್ ಕುಮಾರ್. ಸಹೋದರ ರಾಘವೇಂದ್ರ ರಾಜ್ ಕುಮಾರ್ ಕುರಿತು ಮಾತನಾಡುವಾಗ ಈ ಮಾತು ಹೇಳಿದ್ರು.

    ರಾಘವೇಂದ್ರ ರಾಜ್ ಕುಮಾರ್ ಅಂದ್ರೆ ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಗೆ ಹೆಚ್ಚು ಪ್ರೀತಿ. ಅದರಲ್ಲೂ ರಾಘಣ್ಣ ಅವರ ಆರೋಗ್ಯದಲ್ಲಿ ಏರುಪೇರಾದ ಮೇಲಂತೂ ಮಗುವಿನಂತೆ ನೋಡಿದ್ದಾರೆ ಈ ಇಬ್ಬರು ಸಹೋದರರು. ಹೀಗಂತಾ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ.

    ರಾಘಣ್ಣನ ಜೀವನದಲ್ಲಿ ಎರಡನೇ ಸಲ ಸಿಡಿಲು: ಆ ಕರಾಳ ದಿನ ಏನಾಯ್ತು? ರಾಘಣ್ಣನ ಜೀವನದಲ್ಲಿ ಎರಡನೇ ಸಲ ಸಿಡಿಲು: ಆ ಕರಾಳ ದಿನ ಏನಾಯ್ತು?

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಮಾತನಾಡಿದ್ದನ್ನ ಕೇಳಿ ರಾಘಣ್ಣ ಭಾವುಕಾದರು. ಅವರಿಬ್ಬರ ತ್ಯಾಗಕ್ಕೆ ನಾನು ಚಿರಋಣಿ ಎಂದರು. ಅಷ್ಟಕ್ಕೂ, ಪುನೀತ್, ಶಿವಣ್ಣ ಹೇಳಿದ್ದೇನು? ರಾಘಣ್ಣನ ಭಾವುಕತೆಯ ಮಾತಲ್ಲಿ ಏನಿತ್ತು? ಪೂರ್ತಿ ತಿಳಿಯಲು ಮುಂದೆ ಓದಿ.....

    ನಿಮ್ಮ ಬಗ್ಗೆ ಮಾತನಾಡುವುದು ಹೆಮ್ಮೆ

    ನಿಮ್ಮ ಬಗ್ಗೆ ಮಾತನಾಡುವುದು ಹೆಮ್ಮೆ

    ''ನೀವು ಅಗಲೂ, ಈಗಲೂ ನನ್ನ ಶಕ್ತಿ. ನನ್ನ ಜೀವನದಲ್ಲಿ ಕೆಲವು ಒಳ್ಳೊಳ್ಳೆ ಸಿನಿಮಾಗಳನ್ನ ಮಾಡಿದ್ದೀನಿ ಅಂದ್ರೆ ಅದಕ್ಕೆ ಕಾರಣ ನೀವೆ. ಇದನ್ನ ಬಹಳ ಹೆಮ್ಮೆಯಿಂದ ಹೇಳಿಕೊಳ್ತೀನಿ. ನಿಮ್ಮನ್ನ ಯಾವಾಗಲೇ ನೋಡಿದ್ರೆ ನನಗೆ ಪಾಸಿಟೀವ್ ಎನರ್ಜಿ ಸಿಗುತ್ತೆ. ಒಳ್ಳೆ ಮಾತಾಡಬೇಕು, ಒಳ್ಳೆ ಕೆಲಸ ಮಾಡಬೇಕು ತುಂಬಾ ನೋಡಿ ಕಲಿತಿದ್ದೇನೆ. ನೀವು ನನ್ನ ಪಾಪು ಅಂತಿರಾ. ನನ್ನ ಮಗನೇ ಅಂತಿರಾ. ನಿಮ್ಮ ಬಗ್ಗೆ ಮಾತಾಡೋಕೆ ಹೆಮ್ಮೆ ಆಗುತ್ತೆ'' - ಪುನೀತ್ ರಾಜ್ ಕುಮಾರ್

    ನನ್ನ ಪ್ರಾಣ ಬೇಕಾದರೆ ತಗೋ

    ನನ್ನ ಪ್ರಾಣ ಬೇಕಾದರೆ ತಗೋ

    ''ಹದಿನಾಲ್ಕು ವರ್ಷದ ನಂತರ ನಾಲ್ಕೈದು ಸಿನಿಮಾಗಳನ್ನ ಮಾಡುತ್ತಿದ್ದಾನೆ. ನನ್ನ ಸಹೋದರ ಬಗ್ಗೆ ತುಂಬಾ ಖುಷಿ ಇದೆ. ರಾಘುನಾ ಯಾವಾಗಲೂ ಹೀಗೆ ಇಟ್ಟಿರು. ಬೇಕು ಅಂದ್ರೆ ನನ್ನ ಆಯುಷ್ಯ ಕೂಡ ಅವನಿಗೆ ಕೊಟ್ಬಿಡು ಎಂದು ಕೇಳಿಕೊಳ್ಳುತ್ತೇನೆ. ಯಾವಾಗ, ಹೇಗೆ, ಏನೇ ಆದರೂ ಬೇಕು ಅಂದ್ರೆ ನನ್ನ ಪ್ರಾಣನೂ ಕೊಟ್ಟುಬಿಡುತ್ತೇನೆ. ಭರವಸೆ ಕಳೆದುಕೊಳ್ಳಬೇಡ. ಹೀಗೆ ಇರು'' - ಶಿವರಾಜ್ ಕುಮಾರ್

    'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ? 'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ?

    'ಯಾವಾಗಲೂ ಅವನಿಗೆ ಯಾಕೆ' ಎಂದು ಅತ್ತ ಶಿವಣ್ಣ

    'ಯಾವಾಗಲೂ ಅವನಿಗೆ ಯಾಕೆ' ಎಂದು ಅತ್ತ ಶಿವಣ್ಣ

    ''ಶಿವಣ್ಣ ತುಂಬಾ ಸೆಂಟಿಮೆಂಟ್. ನನಗೆ ಹೃದಯಾಘಾತವಾದಾಗ ಆಸ್ಪತ್ರೆಗೆ ಬಂದು, ನಮ್ಮ ಗುರುದತ್ ಅವರನ್ನ ಅಪ್ಪಿಕೊಂಡು ಅಳುತ್ತಾರೆ. 'ಯಾಕೆ ಯಾವಗಲೂ ಅವನಿಗೆ ಬರುತ್ತೆ, ನಮಗ್ಯಾಕೆ ಬರಲ್ಲ' ಎಂದು ಕೇಳ್ತಾನೆ. ಪಾರ್ಶ್ವವಾಯು ಆದಾಗಲೂ ಆಸ್ಪತ್ರೆಗೆ ಬಂದು 'ಯಾಕೆ ಅವನೊಬ್ಬನೇ ಮಗ, ನಾವಿಲ್ಲ. ನಮಗ್ಯಾಕೆ ಏನೂ ಆಗಲ್ಲ. ಎಲ್ಲ ಅವನೊಬ್ಬನಿಗೆ ಅಂತ ಮತ್ತೆ ಅಳುತ್ತಾರೆ. ನನ್ನನ್ನು ಸಿಂಗಾಪೂರ್ ಕ್ಕೆ ಚಿಕಿತ್ಸಗೆಂದು ಕರೆದುಕೊಂಡು ಹೋಗ್ತಾನೆ'' - ರಾಘಣ್ಣ

    ಒಂದು ತಿಂಗಳು ನನ್ನ ಸೇವೆ

    ಒಂದು ತಿಂಗಳು ನನ್ನ ಸೇವೆ

    ''ಮಗು ತರ ಒಂದು ತಿಂಗಳು ನೋಡಿಕೊಳ್ಳುತ್ತಾನೆ. ಮಾರುಕಟ್ಟೆಗೆ ಕರೆದುಕೊಂಡು ಹೋಗ್ತಾನೆ. ತರಕಾರಿ ತರುತ್ತಾನೆ. ಅವರ ಹೆಂಡತಿ ಕೈಯಿಂದು ಅಡುಗೆ ಮಾಡಿಸುತ್ತಾನೆ. ಸುಮಾರು ಒಂದು ತಿಂಗಳು ನನ್ನನ್ನು ನೋಡಿಕೊಳ್ಳುತ್ತಾನೆ. ಇವತ್ತು ಸುಮ್ಮನೆ ನಾನು ಬಂದು ಇಲ್ಲಿ ಕೂತಿಲ್ಲ. ಇದೆಲ್ಲ ಅವರು ಹಾಕಿರುವ ಭಿಕ್ಷೆ'' - ರಾಘಣ್ಣ

    ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.! ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.!

    ಶಿವಣ್ಣರಲ್ಲಿ ಅಪ್ಪಾಜಿ ಕಂಡೆ

    ಶಿವಣ್ಣರಲ್ಲಿ ಅಪ್ಪಾಜಿ ಕಂಡೆ

    ''ನನ್ನ ಪ್ರಾಣ ತಗೋ ಅಂತಾರೆ. ಹೇಗೆ ತಗೊಳ್ಳೋಕೆ ಆಗುತ್ತೆ. ಶಿವಣ್ಣ ಅವರಲ್ಲಿ ನಾನು ತಂದೆ ನೋಡಿದ್ದೇನೆ. ಏನು ಕಳೆದುಕೊಂಡಿದ್ದನ್ನೋ ಅದನ್ನ ಶಿವಣ್ಣ ನೀಡಿದ್ದಾರೆ. ನನಗೆ ಹಾಗೆ ಆಗಿದ್ದಕ್ಕೆ ಅದೆಲ್ಲ ಸಿಕ್ಕಿದ್ದು, ಇಲ್ಲ ಅಂದಿದ್ದರೇ ಯಾವ ಆರೈಕೆಯೂ ಸಿಗುತ್ತಿರಲಿಲ್ಲ. ಅಪ್ಪಾಜಿ ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ'' - ರಾಘಣ್ಣ

    ''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ

    ಪುನೀತ್ ನನ್ನ ಪಿಲ್ಲರ್

    ಪುನೀತ್ ನನ್ನ ಪಿಲ್ಲರ್

    ''ಪುನೀತ್ ನನ್ನ ಪಿಲ್ಲರ್ ಅಂತಾನೆ. ನಿಜವಾಗಲೂ ಅವನು ಪಿಲ್ಲರ್. ನಾನು ಇರೋ ಮನೆ ಕಟ್ಟಿಸಿರೋದು ಪುನೀತ್. ಸಂಸಾರ ನಿಭಾಯಿಸುತ್ತಿರುವುದು ಆತ. ಪುನೀತ್ ನನಗೆ ಮಗನೇ. ನಾನು ಬರುವುದಕ್ಕೆ ಮುಂಚೆ ವಜ್ರೇಶ್ವರಿ ಕಂಬೈನ್ಸ್ ನಿರ್ವಹಿಸುತ್ತಿದ್ದು ಅವರು. ಆಮೇಲೆ ನಾನು ಬಂದಿದ್ದು'' ಎಂದು ಭಾವುಕರಾದರು.

    English summary
    Dr rajkumar second son raghavendra rajkumar was participate in Weekend with ramesh 4. Raghavendra rajkumar emotional talk about his brothers.
    Thursday, May 2, 2019, 14:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X