India
  For Quick Alerts
  ALLOW NOTIFICATIONS  
  For Daily Alerts

  ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದಲ್ಲಿ 'ವಿಜಯದಶಮಿ' ಧಾರಾವಾಹಿ: ಯಾವ ಸಿನಿಮಾಗೂ ಕಮ್ಮಿಯಿಲ್ಲ!

  By ಎಸ್ ಸುಮಂತ್
  |

  ದೊಡ್ಮನೆ ಕಡೆಯಿಂದ ಬೆಳ್ಳಿತೆರೆ, ಕಿರುತೆರೆಗೆ ಏನಾದರೊಂದು ಕಾಣಿಕೆ ಆಗಾಗ ಸಿಗುತ್ತಲೆ ಇರುತ್ತದೆ. ವಜ್ರೇಶ್ವರಿ, ಪೂರ್ಣೀಮಾ ಎಂಟರ್ ಪ್ರೈಸಸ್ ನಿಂದ ಸಾಕಷ್ಟು ಸಿನಿಮಾಗಳು ರೆಡಿಯಾಗಿವೆ. ಆ ಮೂಲಕ ಭರವಸೆಯ ನಟ-ನಟಿಯರನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ಹೊರ ತಂದಿದ್ದಾರೆ. ಅವರು ಹಾಕಿಕೊಟ್ಟ ನೆರಳಲ್ಲಿಯೇ ಮಕ್ಕಳು ಕೂಡ ಚಿತ್ರರಂಗಕ್ಕೆ ಹೊಸ ಹೊಸ ಸಿನಿಮಾ, ಧಾರಾವಾಹಿಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.

  ಈಗಾಗಲೇ ಪಿಆರ್‌ಕೆ ಪ್ರೊಡಕ್ಷನ್ ವತಿಯಿಂದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಿನಿಮಾ, ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಇನ್ನು ಶಿವಣ್ಣನ ಚಿಕ್ಕ ಮಗಳು ನಿವೇದಿತಾ ಕೂಡ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಆ ಸರದಿ ರಾಘವೇಂದ್ರ ರಾಜ್‍ಕುಮಾರ್ ಅವರದ್ದು. ಅವರ ನಿರ್ಮಾಣ ಸಂಸ್ಥೆಯಿಂದ ಹೊಸದೊಂದು ಧಾರಾವಾಹಿ ಹೊರ ಬಂದಿದೆ. ಅದು ಅತೀ ಶೀಘ್ರದಲ್ಲಿಯೇ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  ಸರಸುಗೆ ಮೂರು ಕಂಡೀಷನ್ ಹಾಕಿದ ವಾಗ್ದೇವಿ!ಸರಸುಗೆ ಮೂರು ಕಂಡೀಷನ್ ಹಾಕಿದ ವಾಗ್ದೇವಿ!

  ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದ ರಾಘಣ್ಣ

  ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದ ರಾಘಣ್ಣ

  ಸಿರಿ‌ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಹೊಸ ಹೊಸ ಧಾರಾವಾಹಿಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ಕೂಡ ಹೊಸ ಧಾರಾವಾಹಿ ನಿರ್ಮಿಸಿದ್ದು ಸಿರಿ ಕನ್ನಡದಲ್ಲಿಯೇ ಪ್ರಸಾರವಾಗಲಿದೆ. ಆ ಧಾರಾವಾಹಿಗೆ ವಿಜಯ ದಶಮಿ ಎಂದು ಹೆಸರಿಡಲಾಗಿದೆ. ಒಂದಷ್ಟು ಹೊಸ ಮುಖಗಳ ಪರಿಚಯವೂ ಈ ಧಾರಾವಾಹಿ ಮೂಲಕ ಆಗಿದೆ. ಹೇಳಿ ಕೇಳಿ ದೊಡ್ಮನೆ ನಿರ್ಮಿಸುವ ಸಿನಿಮಾ, ಧಾರಾವಾಹಿಯಲ್ಲಿ ಪ್ರತಿಭಾವಂತ, ಹೊಸ ಕಲಾವಿದರಿಗೆ ಅವಕಾಶ ಸಿಗುವುದು ಹೆಚ್ಚು. ಹೀಗಾಗಿ ಈ ಧಾರಾವಾಹಿಯಲ್ಲೂ ಹೊಸಬರನ್ನು ಕಾಣಬಹುದು. ಅತಿ ಶೀಘ್ರದಲ್ಲಿಯೇ ಧಾರಾವಾಹಿ ಎಲ್ಲರ ಎದುರು ಬರಲಿದೆ.

  ಸೆಲೆಬ್ರೆಟಿಗಳಿಂದ ರಾಘಣ್ಣನ ಧಾರಾವಾಹಿಗೆ ಶುಭ ಹಾರೈಕೆ

  ಸೆಲೆಬ್ರೆಟಿಗಳಿಂದ ರಾಘಣ್ಣನ ಧಾರಾವಾಹಿಗೆ ಶುಭ ಹಾರೈಕೆ

  'ವಿಜಯ ದಶಮಿ' ಧಾರಾವಾಹಿ ಅತಿ ಶೀರ್ಘದಲ್ಲಿಯೇ ಪ್ರಸಾರವಾಗಲಿದ್ದು, ಮಂಗಳಾ ರಾಘವೇಂದ್ರ ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಧಾರಾವಾಹಿಯ ಪ್ರೋಮೊ ಲಾಂಚ್ ಆಗಿದ್ದು, ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಸಾಥ್ ನೀಡಿದ್ದಾರೆ. ಪ್ರಿಯಾಂಕಾ ಉಪೇಂದ್ರ, ನೆನಪಿರಲಿ ಪ್ರೇಮ್, ರಿಷಭ್ ಶೆಟ್ಟಿ ಹಾಗೂ ಅಭಿಷೇಕ್ ಅಂಬರೀಶ್ ಪ್ರೋಮೊ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧಾರಾವಾಹಿಗೆ ಶುಭ ಹಾರೈಸಿದ್ದಾರೆ.

  ವಿಜಯದಶಮಿ ಬಗ್ಗೆ ರಿಷಬ್ ಮೆಚ್ಚುಗೆ

  ವಿಜಯದಶಮಿ ಬಗ್ಗೆ ರಿಷಬ್ ಮೆಚ್ಚುಗೆ

  ವಿಜಯದಶಮಿ ಎಂದರೆ ಎಲ್ಲರಿಗೂ ಗೊತ್ತಿರಲೇಬೇಕು. ಶತ್ರುಗಳ ಸಂಹಾರವನ್ನು ದೇವತೆ ಮಾಡುವಂತೆ ಈ ಧಾರಾವಾಹಿಯಲ್ಲೂ ಅಂತ ಸಂಹಾರ ಇದ್ದೆ ಇದೆ. ಸಾಗರದ ನಡುವೆ ಹಡಗುಗಳ ಓಟ, ದೇವಸ್ಥಾನ, ಪೂಜೆ ಹೀಗೆ ಎಲ್ಲವೂ ಅನಾವರಣವಾಗಿದೆ. ಅಷ್ಟೇ ಅಲ್ಲ ಸಿಕ್ಕಾಪಟ್ಟೆ ರಿಚ್ ಆಗಿ ಬಂದಿದೆ. ರಿಷಬ್ ಶೆಟ್ಟಿ ಕೂಡ ಧಾರಾವಾಹಿಯ ಪ್ರೋಮೋ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ. ನೋಡಿದ ಕೂಡಲೇ ಯಾವುದೋ ಥ್ರಿಲ್ಲರ್ ಸಿನಿಮಾ ಎಂದುಕೊಂಡೆ ಎಂದಿದ್ದಾರೆ. ಧಾರಾವಾಹಿಯ ಪ್ರೋಮೊ ನೋಡಿದರೆ ಗೊತ್ತಾಗುತ್ತಿದೆ ಯಾವ ಸಿನಿಮಾದ ರೆಂಜಿಗೂ ಕಡಿಮೆ ಇಲ್ಲ ಎಂಬುದು.

  'ರಾಧಾ ಕಲ್ಯಾಣ' ನಟಿ ಕೃತಿಕಾ ರೀ-ಎಂಟ್ರಿ

  'ವಿಜಯದಶಮಿ' ಧಾರಾವಾಹಿ ಹೊಸಬರು, ಹಳಬರ ಸಮಾಗಮ. ಹಿರಿಯ ನಟಿಯರ ಜೊತೆಗೆ ಕಿರಿಯ ನಟಿಯರು, ಹೊಸ ನಟಿಯರು ಸೇರ್ಪಡೆಯಾಗಿದ್ದರೆ, ಇನ್ನು ಹಲವು ನಟಿಯರು ಈ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅದರಲ್ಲಿ ಕೃತಿಕಾ ಒಬ್ಬರು. ಜೀ ಕನ್ನಡದಲ್ಲಿ ಮೂಡಿ ಬರುತ್ತಿದ್ದ 'ರಾಧಾ ಕಲ್ಯಾಣ' ಮೂಲಕ ಎಲ್ಲರ ಮನೆ ಮಾತಾಗಿದ್ದರು ಕೃತಿಕಾ. ಬಳಿಕ ಸಿನಿಮಾ ಶುರುವಾದ ಮೇಲೆ ಎಲ್ಲಿಯೂ ಕಾಣಿಸಿರಲಿಲ್ಲ. ಇದೀಗ ರಾಘಣ್ಣ ನಿರ್ಮಿಸುತ್ತಿರುವ 'ವಿಜಯದಶಮಿ' ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

  English summary
  Raghavendra Rajkumar Producing Vijayadashami Serial For Sirikannnada Promo launch. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X