twitter
    For Quick Alerts
    ALLOW NOTIFICATIONS  
    For Daily Alerts

    ರಾಘಣ್ಣ ಆ ಅವಕಾಶ ಒಪ್ಪಿಕೊಂಡಿದ್ದರೇ ಅವರ ಜೀವನವೇ ಬದಲಾಗ್ತಿತ್ತು.!

    |

    Recommended Video

    Weekend With Ramesh Season 4:ರಾಘಣ್ಣನಿಗೆ ಬಂದಿತ್ತೊಂದು ಆಫರ್, ಏನದು ಗೊತ್ತಾ? Filmibeat Kannada

    ರಾಘವೇಂದ್ರ ರಾಜ್ ಕುಮಾರ್ ಡಾಕ್ಟರ್ ಆಗಬೇಕು ಎಂಬ ಆಸೆ ಅಣ್ಣಾವ್ರಿತ್ತು. ನಾನು ಓದಲ್ಲ ಆಕ್ಟರ್ ಆಗ್ತೀನಿ ಅಂತ ರಾಘಣ್ಣ ನಿರ್ಧರಿಸಿದರು. ಅಂದುಕೊಂಡಂತೆ ಆಕ್ಟರ್ ಆದರು ಆಮೇಲೆ ನಿರ್ಮಾಪಕ, ವಿತರಕ ಸಿನಿಮಾ ರಂಗದಲ್ಲಿ ದೊಡ್ಡ ಉದ್ಯಮಿ ಆದರು.

    ಈ ಮಧ್ಯೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಒಂದು ಅವಕಾಶ ಬಂದಿತ್ತಂತೆ. ಈ ಆಫರ್ ಒಪ್ಪಿಕೊಂಡಿದ್ದರೇ ಡಾ ರಾಜ್ ಕುಮಾರ್ ಅವರ ಮಗನ ಜೀವನ ಬೇರೆಯದ್ದೇ ರೀತಿಯಲ್ಲಿ ರೂಪುಗೊಳ್ಳುತ್ತಿತ್ತು ಎಂಬುದು ಸದ್ಯದ ಸರ್ಪ್ರೈಸ್.

    ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.! ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.!

    ಹೌದು, ಇಷ್ಟು ದಿನ ಯಾರಿಗೂ ಗೊತ್ತಿಲ್ಲದೇ ಇದ್ದ ಘಟನೆಯೊಂದನ್ನ ರಾಘಣ್ಣ ಆಪ್ತ ಕುಮಾರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಅಷ್ಟಕ್ಕೂ, ಕುಮಾರ್ ಹೇಳಿದ ಸತ್ಯವೇನು? ರಾಘಣ್ಣನಿಗೆ ಬಂದಿದ್ದ ಆ ಆಫರ್ ಏನು? ಮುಂದೆ ಓದಿ.....

    ರಾಷ್ಟ್ರೀಯ ಪಕ್ಷದಿಂದ ಆಫರ್

    ರಾಷ್ಟ್ರೀಯ ಪಕ್ಷದಿಂದ ಆಫರ್

    ರಾಷ್ಟ್ರೀಯ ಪಕ್ಷವೊಂದು ರಾಘವೇಂದ್ರ ರಾಜ್ ಕುಮಾರ್ ಅವರನ್ನ ರಾಜಕೀಯಕ್ಕೆ ಕರೆತರಲು ಪ್ರಯತ್ನ ಮಾಡಿತ್ತಂತೆ. ಈ ಕುರಿತು ಸ್ವತಃ ರಾಘಣ್ಣಗೆ ಎಂಎಲ್ಎ ಟಿಕೆಟ್ ನೀಡುವುದಾಗಿ ಆಫರ್ ಕೂಡ ಮಾಡಿತ್ತಂತೆ. ಆ ಪಾರ್ಟಿ ಯಾವುದು ಎಂದು ಬಹಿರಂಗಪಡಿಸಿಲ್ಲ.

    ಎಲ್.ಎಲ್.ಸಿ ಮಾಡ್ತೀವಿ

    ಎಲ್.ಎಲ್.ಸಿ ಮಾಡ್ತೀವಿ

    ಎಂಎಲ್ಎ ಆಗಿಲ್ಲ ಅಂದ್ರೆ ಅವರನ್ನ ಎಂಎಲ್ ಸಿ ಮಾಡುವುದಾಗಿ ಸಹ ಆ ಪಾರ್ಟಿ ಹೇಳಿತ್ತಂತೆ. ಆದ್ರೆ, ರಾಘವೇಂದ್ರ ರಾಜ್ ಕುಮಾರ್ ಈ ಅವಕಾಶವನ್ನ ಒಪ್ಪಿಕೊಳ್ಳಲಿಲ್ಲ, ತಿರಸ್ಕರಿಸಿದರಂತೆ. ಒಂದು ವೇಳೆ ಈ ಆಫರ್ ಗೆ ಜೈ ಎಂದಿದ್ದರೇ ರಾಘಣ್ಣ ಸಿನಿಮಾ ಕಲಾವಿದ ಅನ್ನೋದಕ್ಕಿಂತ ರಾಜಕಾರಣಿ ಎಂದು ಗುರುತಿಸಿಕೊಳ್ಳುತ್ತಿದ್ದರು.

    ರಾಘಣ್ಣನ ಮೊದಲ ಸಿನಿಮಾ ಸೋಲು, ಅಂದು ರಾಜ್ ಹೇಳಿದ್ದೇನು? ರಾಘಣ್ಣನ ಮೊದಲ ಸಿನಿಮಾ ಸೋಲು, ಅಂದು ರಾಜ್ ಹೇಳಿದ್ದೇನು?

    ರಾಜ್ ಬೇಡ ಎಂದಿದ್ದರು

    ರಾಜ್ ಬೇಡ ಎಂದಿದ್ದರು

    ಅಂದು ಡಾ ರಾಜ್ ಕುಮಾರ್ ಅವರನ್ನ ಕೂಡ ರಾಜಕೀಯಕ್ಕೆ ಕರೆತರುವ ಪ್ರಯತ್ನ ಸಾಗಿತ್ತು. ಬಟ್, ಅಣ್ಣಾವು ಯಾವುದೇ ಕಾರಣಕ್ಕೆ ರಾಜಕೀಯಕ್ಕೆ ಬರಲ್ಲ ಎಂದಿದ್ದರು. ಅವರ ಮಗನಾದ ನಾನು ಹಾಗೆ ಇರಬೇಕು ಅಲ್ವಾ ಎಂದು ಆ ಅವಕಾಶವನ್ನ ತಿರಸ್ಕರಿಸಿದ್ದನ್ನ ಸಮರ್ಥಿಸಿಕೊಂಡರು.

    ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು? ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು?

    ರಾಜಕೀಯಕ್ಕೂ ಅಣ್ಣಾವ್ರ ಕುಟುಂಬಕ್ಕೆ ಅಷ್ಟಕಷ್ಟೇ.!

    ರಾಜಕೀಯಕ್ಕೂ ಅಣ್ಣಾವ್ರ ಕುಟುಂಬಕ್ಕೆ ಅಷ್ಟಕಷ್ಟೇ.!

    ಡಾ ರಾಜ್ ಕುಮಾರ್ ಕುಟುಂಬ ಮತ್ತು ರಾಜಕೀಯಕ್ಕೂ ಬಹಳ ದೂರದ ಸಂಬಂಧ. ತಾವಾಗಲಿ ತಮ್ಮ ಮಕ್ಕಳಾಗಲಿ ರಾಜಕೀಯ ಪ್ರವೇಶ ಮಾಡಿಲ್ಲ. ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಅದನ್ನ ಬಿಟ್ಟರೇ ಮತ್ಯಾವ ರಾಜಕೀಯ ಬೆಳವಣಿಗೆಯಲ್ಲೂ ರಾಜ್ ಕುಟುಂಬ ಭಾಗವಹಿಸಿಲ್ಲ.

    English summary
    Dr rajkumar second son raghavendra rajkumar was participate in Weekend with ramesh 4. He rejected MLA seat offer from national political party.
    Tuesday, April 30, 2019, 8:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X