twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕಿಡ್ನ್ಯಾಪ್ ದಿನ ಏನಾಯ್ತು ಎಂದು ಮಕ್ಕಳಿಗೂ ಹೇಳಿಲ್ವಂತೆ ಪಾರ್ವತಮ್ಮ.! ಯಾಕೆ?

    |

    Recommended Video

    Weekend With Ramesh Season 4: ಅಣ್ಣಾವ್ರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್ | FILMIBEAT KANNADA

    ಅದು 2000, ಜುಲೈ 30. ಕರ್ನಾಟಕದ ಕಣ್ಮಣಿ, ಕನ್ನಡಿಗರ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ ಅವರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ ದಿನ. ಹುಟ್ಟೂರು ಗಾಜನೂರಿನಲ್ಲಿ ಪಾರ್ವತಮ್ಮ ಜೊತೆಯಲ್ಲಿದ್ದ ರಾಜ್ ಕುಮಾರ್ ಅವರನ್ನ ವೀರಪ್ಪನ್ ಮತ್ತು ಸಹಚರರು ಕಿಡ್ನ್ಯಾಪ್ ಮಾಡಿದ್ದರು.

    ಈ ಘಟನೆ ಹೊರಜಗತ್ತಿಗೆ ತಿಳಿಯುತ್ತಿದ್ದಂತೆ ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಅಭಿಮಾನಿಗಳು ತೀವ್ರ ಆಕ್ರೋಶಕ್ಕೆ ಒಳಗಾಗಿ ಪ್ರತಿಭಟನೆ, ಗಲಾಟೆ ಮಾಡಲು ಶುರು ಮಾಡಿದರು. ಮತ್ತೊಂದೆಡೆ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಅಣ್ಣಾವ್ರನ್ನ ಬಿಡಿಸಲು ಪ್ರಯತ್ನ ಮಾಡುತ್ತಿದೆ.

    ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ

    ಆದ್ರೆ, ಇದ್ಯಾವುದಕ್ಕೂ ವೀರಪ್ಪನ್ ಬಗ್ಗಲಿಲ್ಲ. ಕೊನೆಗೆ 108 ದಿನಗಳ ನಂತರ ರಾಜ್ ಕುಮಾರ್ ಅವರನ್ನ ಗೌರವಪೂರ್ವಕವಾಗಿ ಬಿಡುಗಡೆಗೊಳಿಸಿದ. ಈ ಘಟನೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಿತು. ಅಂದ್ಹಾಗೆ, ರಾಜ್ ಕಿಡ್ನ್ಯಾಪ್ ಆಗಿದ್ದ ದಿನ ಅಲ್ಲಿ ಏನು ನಡೆಯಿತು, ಪಾರ್ವತಮ್ಮ ಅವರು ರಾಘಣ್ಣನಿಗೆ ಫೋನ್ ಮಾಡಿ ಏನು ಹೇಳಿದರು ಎಂಬ ಸತ್ಯಾಂಶ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿದೆ. ಮುಂದೆ ಓದಿ.....

    ಅಂದು ಫೋನ್ ಬರುತ್ತೆ

    ಅಂದು ಫೋನ್ ಬರುತ್ತೆ

    ರಾಘಣ್ಣ ಆ ದಿನ ಸ್ನೇಹಿತರ ಮನೆಯಲ್ಲಿದ್ದರು. ಆ ಸಮಯದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಫೋನ್ ಮಾಡಿದರು. ಸಾಮಾನ್ಯವಾಗಿ ಗಾಜನೂರಿನಲ್ಲಿ ಫೋನ್ ಗೆ ನೆಟ್ ವರ್ಕ್ ಸಿಗಲ್ಲ. ಅಂದು ಫೋನ್ ಬಂದಿದ್ದು ನೋಡಿ ಸ್ವಲ್ಪ ಚಿಂತೆ ಆಯಿತಂತೆ. ಆದರೂ ಅಚ್ಚರಿಯಿಂದ ಫೋನ್ ರಿಸೀವ್ ಮಾಡಿದ ರಾಘಣ್ಣಗೆ ಶಾಕ್ ಆಗಿತ್ತಂತೆ.

    ವೀರಪ್ಪನ್ ನಿಂದ ರಾಜ್ ಅಪಹರಣ ಆಗಿದ್ದು ಹೀಗೆ...

    ಅಪ್ಪಾಜಿನ ಕಿಡ್ಯ್ನಾಪ್ ಮಾಡಿದ್ರು ಕಂದಾ

    ಅಪ್ಪಾಜಿನ ಕಿಡ್ಯ್ನಾಪ್ ಮಾಡಿದ್ರು ಕಂದಾ

    ''ನಮ್ಮ ತಾಯಿಗೆ ನನ್ನ ಬಗ್ಗೆ ಯೋಚನೆ, ಪಕ್ಕದಲ್ಲಿ ಯಾರಾದ್ರೂ ಇದ್ದಾರಾ ಅಂತ ಮೊದಲು ಕೇಳ್ತಾರೆ. ಹುಂ ಸ್ನೇಹಿತರು ಇದ್ದಾರೆ ಏನಮ್ಮಾ ಅಂದ್ರೆ, 'ಏನೂ ಇಲ್ಲ ಕಂದಾ ಅಪ್ಪಾಜಿನ ಕಿಡ್ನ್ಯಾಪ್ ಮಾಡಿದ್ದಾರೆ ಅಂತ ಹೇಳಿದ್ರು. ಏನಮ್ಮಾ ಹೇಳ್ತಿದ್ದಿಯಾ ಅಂದ್ರೆ ಪಕ್ಕದಲ್ಲಿ ಇದ್ದಾರೆ ಅಲ್ವಾ, ನೀನು ಸಮಾಧಾನವಾಗಿ ಇರು. ಮನೆಯಲ್ಲಿ ಯಾರಿಗೂ ಹೇಳಬೇಡ. ನಾನು ಬಂದು ಹೇಳ್ತಿನಿ'' ಅಂತ ನನಗೆ ಗೈಡ್ ಮಾಡಿದ್ರು.

    ಡಾ ರಾಜ್ ಅಪಹರಣ: ಮತ್ತುಲಕ್ಷ್ಮಿ ವೀರಪ್ಪನ್ ಖುಲಾಸೆ

    ಅಮ್ಮ ಹೇಗೆ ತಡೆದುಕೊಂಡು ಇದ್ದಾರೆ

    ಅಮ್ಮ ಹೇಗೆ ತಡೆದುಕೊಂಡು ಇದ್ದಾರೆ

    ''ನನಗೆ ಅದು ಮರೆತು ಹೋಯಿತು. ಅದನ್ನ ಕಣ್ಣಲ್ಲಿ ನೋಡಿ ಅಮ್ಮ ಹೇಗೆ ತಡೆದುಕೊಂಡಿದ್ದಾರೆ ಅನ್ನೋದು ಚಿಂತೆ ಆಯಿತು. ಅವತ್ತು ಮಳೆಯಲ್ಲೇ ಅಮ್ಮ ಬರ್ತಾರೆ. 48 ಗಂಟೆ ಅಮ್ಮ ನಿದ್ದೆ ಮಾಡಲ್ಲ. ನಾವು ಎಲ್ಲ ಕಡೆ ಸುತ್ತಾಡ್ತೀವಿ. ಮದ್ರಾಸ್ ಹೋಗ್ತೀವಿ, ಬರ್ತೀವಿ, ಪ್ರೆಸ್ ಮೀಟ್ ಮಾಡ್ತೀವಿ''

    ಹನ್ನೆರಡು ವರ್ಷಗಳ ಹಿಂದೆ: ಈ ದಿನ ಕರಾಳ ದಿನಹನ್ನೆರಡು ವರ್ಷಗಳ ಹಿಂದೆ: ಈ ದಿನ ಕರಾಳ ದಿನ

    ಆ ಘಟನೆ ಯಾರಿಗೂ ಹೇಳೇ ಇಲ್ಲ

    ಆ ಘಟನೆ ಯಾರಿಗೂ ಹೇಳೇ ಇಲ್ಲ

    'ಕೊನೆಗೂ ಆ ದಿನ ಅಲ್ಲಿ ಏನಾಯ್ತು ಎನ್ನುವುದನ್ನ ಅಮ್ಮ ನಮ್ಮ ಬಳಿ ಹೇಳೇ ಇಲ್ಲ. ಅದು ನನ್ನ ನೋವು ನಾನು ಖುಷಿ ಮಾತ್ರ ಹಂಚಿಕೊಳ್ಳಬೇಕು, ಆ ನೋವು ನನ್ನದು ಅಂತ ಹೇಳ್ತಿದ್ರು' ಎಂದು ರಾಘಣ್ಣ ನೆನಪು ಮೆಲುಕು ಹಾಕಿದರು.

    English summary
    Dr rajkumar second son raghavendra rajkumar was participate in Weekend with ramesh 4. He shared about the incident of dr rajkumar kidnap.
    Wednesday, May 1, 2019, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X