ಸಿಕ್ಸ್ ಪ್ಯಾಕ್ ಮಾಡೇ ಮಾಡ್ತಾರಂತೆ ರಾಘವೇಂದ್ರ ರಾಜ್ ಕುಮಾರ್!
ನಟ ಶಿವರಾಜ್ ಕುಮಾರ್ ತಮ್ಮ 50ನೇ ವಯಸ್ಸಿನಲ್ಲಿ ಸಿಕ್ಸ್ ಪ್ಯಾಕ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಅವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ಸಹ ಸಿಕ್ಸ್ ಪ್ಯಾಕ್ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಜೀವನದ ಮುಂದಿನ ದೊಡ್ಡ ಆಸೆಯನ್ನು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ''ನಾನು ಮತ್ತೆ ಸಿನಿಮಾಗೆ ಬಂದಿದ್ದೇನೆ. ನನ್ನ ಕೆರೆಯರ್ ನಲ್ಲಿ ನಾನು ಸಿಕ್ಸ್ ಪ್ಯಾಕ್ ಮಾಡಿ ತೋರಿಸುತ್ತೇನೆ.'' ಎಂದು ರಾಘಣ್ಣ ಹೇಳಿದ್ದಾರೆ.
ಅನಾರೋಗ್ಯ ಕಾರಣದಿಂದ ಸಿನಿಮಾದಿಂದ ದೂರ ಇದ್ದ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಚಿತ್ರರಂಗಕ್ಕೆ ವಾಪಸ್ ಬಂದಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಸೆಡ್ಡು ಹೊಡೆದು ಮತ್ತೆ ಮೇಕಪ್ ಹಾಕಿ ಕ್ಯಾಮರಾ ಮುಂದೆ ಬಂದಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಅವರ 'ಅಮ್ಮನ ಮನೆ' ಹಾಗೂ 'ತ್ರಯಂಬಕ' ಸಿನಿಮಾ ಇತ್ತೀಚಿಗೆ ಬಿಡುಗಡೆಯಾಗಿತ್ತು. 'ಆಡಿಸಿದಾತ' ಅವರ 25ನೇ ಸಿನಿಮಾವಾಗಿದೆ.
More from Filmibeat
English summary
Kannada actor Raghavendra rajkumar wants to get six pack.
weekend with ramesh 4 raghavendra rajkumar ramesh aravind ವೀಕೆಂಡ್ ವಿತ್ ರಮೇಶ್ 4 ರಾಘವೇಂದ್ರ ರಾಜ್ ಕುಮಾರ್ ರಮೇಶ್ ಅರವಿಂದ್


Click it and Unblock the Notifications











