BBK12: ಅಶ್ವಿನಿ ಗೌಡ ಹಾಗೂ ರಘು ನಡುವೆ ವಾಗ್ಯುದ್ಧ; ಯಾವನೋ ನೀನು ಎಂದು ಕೆಂಡಾಮಂಡಲ
ಬಿಗ್‌ಬಾಸ್ 12 ಮನೆಯಲ್ಲಿ ನಿಧಾನವಾಗಿ ಸ್ಪರ್ಧಿಗಳ ನಡುವೆ ಟಾಕ್ ವಾರ್ ಜೋರಾಗುತ್ತಿದೆ. ಇಷ್ಟು ದಿನ ದೊಡ್ಡಮಟ್ಟದಲ್ಲಿ ಕಿರಿಕ್ ಆಗುತ್ತಿರಲಿಲ್ಲ. ದಿನ ಕಳೆದಂತೆ ಒಬ್ಬರ ಮೇಲೆ ಒಬ್ಬರು ವಾದ ಮಾಡುತ್ತಾ ಕಿತ್ತಾಡುತ್ತಿದ್ದಾರೆ. ಇದೀಗ ರಘು ಹಾಗೂ ಅಶ್ವಿನಿ ಗೌಡ ನಡುವೆ ಭಾರೀ ವಾಕ್ಸಮರ ನಡೆದಿದೆ.
ಕಳೆದ ವಾರ ಅಶ್ವಿನಿ ಗೌಡ 'ಉತ್ತಮ' ಎಂದು ರಘು ಗೌಡ ಸರ್ಟಿಫಿಕೇಟ್ ಕೊಟ್ಟಿದ್ದರು. ಆಕೆ ಇತ್ತೀಚೆಗೆ ಬದಲಾಗುತ್ತಿದ್ದಾರೆ ಎಂದು ಉತ್ತಮವಾಗಿ ಆಡುತ್ತಿದ್ದಾರೆ ಎಂದಿದ್ದರು. 2ನೇ ಬಾರಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ರಘು ಮನೆ ಮಂದಿ ಕೈಯಲ್ಲಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಮನೆ ಕ್ಲೀನ್ ಮಾಡಲು ಅಶ್ವಿನಿ ಅವರನ್ನು ಕರೆದಿದ್ದು ಅದಕ್ಕೆ ಆಕೆ ತಗಾದೆ ತೆಗೆದಿದ್ದಾರೆ. ಇದೇ ಈಗ ಇಬ್ಬರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಬೆನ್ನು ನೋವು 10 ನಿಮಿಷ ಸಮಯ ಬೇಕು ಎಂದು ಅಶ್ವಿನಿ ಹೇಳಿದ್ದು 10 ನಿಮಿಷಕ್ಕೆ ಬೆನ್ನು ನೋವು ಹೋಗುತ್ತಾ ಎಂದು ರಘು ಕೇಳಿದ್ದಾರೆ. ಕೆಲಸ ಮಾಡೋಕ್ಕಾಗಲ್ಲ, ಸುಮ್ನೆ ಮಾತನಾಡ್ತಾರೆ ಎಂದು ರಘು ವ್ಯಂಗ್ಯವಾಡಿರುವುದು ಅಶ್ವಿನಿ ಆಕ್ರೋಶಕ್ಕೆ ಕಾರಣವಾಗಿದೆ. ಮಾಡ್ಬೇಡ ಹೋಗು ಎಂದು ರಘು ಹೇಳಿದ್ದಕ್ಕೆ ಅಶ್ವಿನಿ ಕೆಂಡಾಮಂಡಲವಾಗಿದ್ದಾರೆ.
ತಮ್ಮ ಕಡೆ ಕೈ ಬೊಟ್ಟು ಮಾಡಿ ಮಾತನಾಡಿದ್ದಕ್ಕೆ ರಘು ಕೂಡ ಗರಂ ಆಗಿದ್ದಾರೆ. ಅಶ್ವಿನಿ ಗೌಡರನ್ನು ಸೂರಜ್ ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೂ ಮಾತಿಗೆ ಮಾತು ಬೆಳೆದಿದೆ. ಯಾವನೋ ನೀನು, ಬಿಗ್‌ಬಾಸ್‌ನ ಕರೆಸಿ ಮಾತಾಡ್ತೀನಿ ಎಂದು ಅಶ್ವಿನಿ ಕಿರುಚಾಡಿದ್ದಾರೆ. ಬಾಗಿಲು ತೆಗೀರಿ ನಾನು ಹೋಗಬೇಕು ಎಂದು ಅಶ್ವಿನಿ ಭಾವುಕರಾಗಿದ್ದಾರೆ. ಅದಕ್ಕೆ ಸಂಬಂಧಿಸಿ ಪ್ರೋಮೊ ವೈರಲ್ ಆಗ್ತಿದೆ.
ಅಶ್ವಿನಿ ಮೊದಲ ದಿನದಿಂದಲೂ ಅಗ್ರೆಸಿವ್ ಆಗಿ ಆಟ ಆಡುತ್ತಿದ್ದಾರೆ. ತಮ್ಮ ವಿರುದ್ದ ಮಾತನಾಡುವವರಿಗೆ ಅಲ್ಲೇ ತಿರುಗೇಟು ಕೊಡುತ್ತಾರೆ. ಆಕೆಯ ಆಕ್ರೋಶ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಅಶ್ವಿನಿ ಮಾತ್ರ ಯಾರಿಗೂ ಮರ್ಯಾದೆ ಕೊಟ್ಟು ಮಾತಾಡಲ್ಲ, ಆಕೆ ಮಾತ್ರ ಎಲ್ಲರೂ ನನಗೆ ಮರ್ಯಾದೆ ಕೊಡಬೇಕು ಎಂದು ಬಯಸುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ರಘು ವೈಲ್ಡ್‌ಕಾರ್ಡ್ ಎಂಟ್ರಿ ಪಡೆದು ಮನೆಯೊಳಗೆ ಹೋಗಿದ್ದಾರೆ. ತಮ್ಮ ಖಡಕ್ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ಗಿಲ್ಲಿ ಹಾಗೂ ರಘು ಇಬ್ಬರೂ ಟಾಮ್ ಅಂಡ್ ಜೆರ್ರಿ ರೀತಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











