ಅನು ಪ್ರಭಾಕರ್ ಬಗ್ಗೆ ಪತಿ ರಘುಗೆ ಮಾತ್ರ ಗೊತ್ತಿರುವ ಮೂರು ಸಂಗತಿಗಳಿವು...
ನಟಿ ಅನು ಪ್ರಭಾಕರ್ ಹಿಂದಿನ ಜನ್ಮದಲ್ಲಿ 'ದೋಬಿ' ಆಗಿದ್ದರಂತೆ.!
ನಟಿ ಅನು ಪ್ರಭಾಕರ್ ಮನೆಯಲ್ಲಿ 'ಪೂಜಾರಿ' ಅಂತೆ.!
ನಟಿ ಅನು ಪ್ರಭಾಕರ್ ಗೆ obsessive compulsive disorder ಸ್ವಲ್ಪ ಜಾಸ್ತಿ ಇದ್ಯಂತೆ.!
- ಇದು ಪತ್ನಿ ಅನು ಪ್ರಭಾಕರ್ ಬಗ್ಗೆ ಪತಿ ರಘು ಮುಖರ್ಜಿ ರವರಿಗೆ ಮಾತ್ರ ಗೊತ್ತಿರುವ ಮೂರು ಸಂಗತಿಗಳು.!

- ಹೀಗಂತ ಸ್ವತಃ ರಘು ಮುಖರ್ಜಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದರು.
ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'Rapid Fire' ರೌಂಡ್ ನಲ್ಲಿ, ''ಅನು ಪ್ರಭಾಕರ್ ಬಗ್ಗೆ ನಿಮಗೆ ಮಾತ್ರ ಗೊತ್ತಿರುವ, ಬೇರೆ ಯಾರಿಗೂ ಗೊತ್ತಿಲ್ಲದ ಮೂರು ಸಂಗತಿ ಹೇಳಿ'' ಎಂದು ರಘು ಮುಖರ್ಜಿ ರವರನ್ನ ಅಕುಲ್ ಬಾಲಾಜಿ ಕೇಳಿದರು.

ಅದಕ್ಕೆ ನಗುನಗುತ್ತಲೇ, ಮೇಲಿನ ಮೂರು ಸಂಗತಿಗಳನ್ನ ರಘು ಮುಖರ್ಜಿ ಹೇಳಿದರು.
ಅಂದ್ಹಾಗೆ, ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಟಿ ಅನು ಪ್ರಭಾಕರ್ ರವರನ್ನ ರಘು ಮುಖರ್ಜಿ ಕೈಹಿಡಿದರು.
More from Filmibeat
English summary
Raghu Mukherjee spoke about Wife Anu Prabhakar in Colors Super channel's popular show 'Super Talk time'.
anu prabhakar raghu mukherjee akul balaji colors channel tv reality show ಅನು ಪ್ರಭಾಕರ್ ರಘು ಮುಖರ್ಜಿ ಅಕುಲ್ ಬಾಲಾಜಿ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ


Click it and Unblock the Notifications











