»   » 'ಇವರ' ಜೊತೆ ಆನ್ ಸ್ಕ್ರೀನ್ ಕಿಸ್ ಮಾಡುವ ಆಸೆ ರಾಗಿಣಿಗಿದೆ! ಯಾರದು?

'ಇವರ' ಜೊತೆ ಆನ್ ಸ್ಕ್ರೀನ್ ಕಿಸ್ ಮಾಡುವ ಆಸೆ ರಾಗಿಣಿಗಿದೆ! ಯಾರದು?

Posted By:
Subscribe to Filmibeat Kannada
ಸುದೀಪ್ ಗೆ ಚುಂಬಿಸೋ ಹುಚ್ಚು ಆಸೆ ಈ ಬೆಡಗಿಗೆ |Sudeep has impressed this lady way much| Filmibeat Kannada

ನಟಿ ರಾಗಿಣಿ ದ್ವಿವೇದಿಗೆ ಒಂದು ಬಯಕೆ ಇದೆ. ಕನ್ನಡದ ಸ್ಟಾರ್ ನಟರೊಬ್ಬರ ಜೊತೆಗೆ ಆನ್ ಸ್ಕ್ರೀನ್ ಕಿಸ್ ಮಾಡುವಾಸೆ ರಾಗಿಣಿಗೆ ಇದೆ. ಯಾರಪ್ಪ ಅದು 'ಸ್ಟಾರ್ ನಟ' ಅಂತ ಯೋಚನೆ ಮಾಡ್ತಿದ್ದೀರಾ.? ಅದು ಬೇರೆ ಯಾರೂ ಅಲ್ಲ, ಕಿಚ್ಚ ಸುದೀಪ್.!

ಹೌದು, ಕಿಚ್ಚ ಸುದೀಪ್ ಜೊತೆಗೆ ಆನ್ ಸ್ಕ್ರೀನ್ ಕಿಸ್ ಮಾಡುವ ಆಸೆ ಇದೆ ಮಿಸ್ ರಾಗಿಣಿಗೆ.! ಹಾಗಂತ ಸ್ವತಃ ರಾಗಿಣಿ ಹೇಳಿಕೊಂಡಿದ್ದಾರೆ. ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಕ್ಷಿತಾ ಹಾಗೂ ರಾಗಿಣಿ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಮೊದಲನೇ ಸೆಗ್ಮೆಂಟ್ (ಸತ್ಯ ಅಥವಾ ಧೈರ್ಯ) ನಲ್ಲಿ ಸತ್ಯವನ್ನ ಹೇಳಲು ರಾಗಿಣಿ ಆಯ್ಕೆ ಮಾಡಿಕೊಂಡರು.

Ragini Dwivedi is waiting to have a onscreen kiss with Kiccha Sudeep

ಸುದೀಪ್ ನನಗೆ ರೋಲ್ ಮಾಡೆಲ್ ಅಂದರು ಈ ನಟಿ. ಯಾರವರು ?

ಆಗ, ''ಆನ್ ಸ್ಕ್ರೀನ್ ಕಿಸ್ ನ ನೀವು ಯಾರ ಜೊತೆ ಮಾಡಬೇಕು ಅಂತ ಕಾಯ್ತಿದ್ದೀರಾ.?'' ಎಂದು ರಾಗಿಣಿಗೆ ಶಿವಣ್ಣ ಪ್ರಶ್ನಿಸಿದರು. ಅದಕ್ಕೆ, ''ಎಲ್ಲರ ಜೊತೆಗೂ ಆಸೆ ಇದೆ ನನಗೆ'' ಎಂದರು ರಾಗಿಣಿ ದ್ವಿವೇದಿ.

ಅದೇ ಪ್ರಶ್ನೆ, ಅದೇ ಉತ್ತರ, ಮತ್ತೆ ಸುದೀಪ್ ಹೆಸರು ತೆಗೆದ ರಾಗಿಣಿ

''ಒಬ್ಬರ ಹೆಸರು ಹೇಳಿ'' ಎಂದಾಗ ''ಸುದೀಪ್'' ಎಂದು ಉತ್ತರಿಸಿದರು ನಟಿ ರಾಗಿಣಿ ದ್ವಿವೇದಿ. ಇದೇ ಕಾರ್ಯಕ್ರಮದಲ್ಲಿ 'ಮದುವೆ ಆಗುವ' ಪ್ರಶ್ನೆಗೂ ಸುದೀಪ್ ಹೆಸರನ್ನೇ ರಾಗಿಣಿ ಆಯ್ಕೆ ಮಾಡಿಕೊಂಡರು.

ಅಂದ್ಹಾಗೆ, ರಾಗಿಣಿ ಹಾಗೂ ಸುದೀಪ್ ಈಗಾಗಲೇ 'ಕೆಂಪೇಗೌಡ' ಹಾಗೂ 'ವೀರಮದಕರಿ' ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

English summary
Kannada Actress Ragini Dwivedi is waiting to have a onscreen kiss with Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X