twitter
    For Quick Alerts
    ALLOW NOTIFICATIONS  
    For Daily Alerts

    ಸಾಯುವ ಮುನ್ನ ವಿಡಿಯೋ ಮಾಡಿ ಆಸ್ಪತ್ರೆಯ ಅವ್ಯವಸ್ಥೆ ಬಿಚ್ಚಿಟ್ಟ ನಟ

    |

    ನಟ ರಾಹುಲ್ ವೊಹ್ರಾಗೆ ಕೋವಿಡ್‌ನಿಂದ ನಿಧನ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಸಾಯುವ ಮುನ್ನ ಆಸ್ಪತ್ರೆಯಿಂದಲೇ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ಕೋವಿಡ್‌ ಸೋಂಕಿತರಾಗಿದ್ದ ರಾಹುಲ್ ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹಾಗಾಗಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

    ಉತ್ತಮ ಚಿಕಿತ್ಸೆ ಸಿಕ್ಕಿದ್ರೆ ನಾನು ಬದುಕುಳಿಯುತ್ತಿದ್ದೆ: ಸಾವಿಗೂ ಮುನ್ನ ನಟ ರಾಹುಲ್ ಪೋಸ್ಟ್ ವೈರಲ್ಉತ್ತಮ ಚಿಕಿತ್ಸೆ ಸಿಕ್ಕಿದ್ರೆ ನಾನು ಬದುಕುಳಿಯುತ್ತಿದ್ದೆ: ಸಾವಿಗೂ ಮುನ್ನ ನಟ ರಾಹುಲ್ ಪೋಸ್ಟ್ ವೈರಲ್

    ಆಸ್ಪತ್ರೆ ಬೆಡ್ ಮೇಲೆ ಮಲಗಿ ವಿಡಿಯೋ ಮಾಡಿರುವ ರಾಹುಲ್, 'ಇಲ್ಲಿ ನಮಗೆ ಆಮ್ಲಜನಕದ ಮಾಸ್ಕ್ ಹಾಕಿದ್ದಾರೆ ಆದರೆ ಇದರಿಂದ ಆಮ್ಲಜನಕ ಬರುತ್ತಲೇ ಇಲ್ಲ. ಎಷ್ಟು ಎಳೆದರೂ ಗಾಳಿ ಬರುತ್ತಿಲ್ಲ. ಇಲ್ಲಿನವರನ್ನು ಕೇಳಿದರೆ ಸಿಲಿಂಡರ್‌ಗೆ ನೀರು ತುಂಬಿಸುತ್ತಾರೆ. ಆಗ ಎಳೆದರೆ ನೀರು ಮಾತ್ರ ಬರುತ್ತದೆ' ಎಂದು ರಾಹುಲ್ ಆಸ್ಪತ್ರೆಯ ಕರಾಳ ವ್ಯವಸ್ಥೆಯನ್ನು ಬಿಚ್ಚಿಟ್ಟಿದ್ದರು.

    Rahul Vohra Dies Of Medical Negligence: Wife Jyoti

    'ನರ್ಸ್‌ಗಳನ್ನು, ವೈದ್ಯರನ್ನು ಕೇಳಿದರೆ ಯಾರೂ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ರೋಗಿಗಳ ಮೇಲೆ ರೇಗಿ ಹೊರಟುಹೋಗುತ್ತಾರೆ. ನಮಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಅವರು ಏದುಸಿರು ಬಿಟ್ಟುಕೊಂಡೇ ವಿಡಿಯೋದಲ್ಲಿ ಮಾತನಾಡಿದ್ದರು.

    ರಾಹುಲ್ ಅವರು ಕೊರೊನಾದಿಂದಾಗಿ ನಿಧನ ಹೊಂದಿದ್ದು ಈ ವಿಷಯವನ್ನು ರಾಹುಲ್ ಪತ್ನಿ ಜ್ಯೋತಿ ತಿವಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    'ನನ್ನ ರಾಹುಲ್ ಹೋಗಿಬಿಟ್ಟ ಎಂಬುದು ಎಲ್ಲರಿಗೂ ಗೊತ್ತು, ಆದರೆ ಹೇಗೆ ಹೋದ ಎಂಬುದು ಯಾರಿಗೂ ಗೊತ್ತಿಲ್ಲ. ಆಸ್ಪತ್ರೆಯವರು ಸೂಕ್ತರೀತಿಯಲ್ಲಿ ಟ್ರೀಟ್‌ಮೆಂಟ್ ನೀಡಲಿಲ್ಲ. ನನ್ನ ರಾಹುಲ್‌ಗೆ ನ್ಯಾಯ ಸಿಗಲೇಬೇಕು. ಮತ್ತೊಬ್ಬ ರಾಹುಲ್ ಹೀಗೆ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಬಲಿ ಆಗಬಾರದು' ಎಂದಿದ್ದಾರೆ ಜ್ಯೂತಿ.

    ಶನಿವಾರವಷ್ಟೆ ರಾಹುಲ್ ಅವರು ಆಸ್ಪತ್ರೆಯ ಆಮ್ಲಜನಕ ನಳಿಕೆಯಲ್ಲಿ ಗಾಳಿ ಬರುತ್ತಿಲ್ಲವೆಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಅದಾದ ಒಂದು ದಿನಕ್ಕೆ ರಾಹುಲ್ ಅಸುನೀಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೆ ರಾಹುಲ್ ಆಸ್ಪತ್ರೆಗೆ ದಾಖಲಾಗಿದ್ದರು.

    ಮೇ 8 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ರಾಹುಲ್, 'ನನಗೆ ಒಳ್ಳೆಯ ಟ್ರೀಟ್‌ಮೆಂಟ್ ಸಿಕ್ಕಿದ್ದರೆ ನಾನು ಬದುಕುತ್ತಿದ್ದೆ. ನನಗೆ ಈಗ ಭರವಸೆ ಹೋಗಿಬಿಟ್ಟಿದೆ' ಎಂದಿದ್ದರು. ಆ ಪೋಸ್ಟ್ ಅನ್ನು ಪ್ರಧಾನಿ ಮೋದಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಗಳಿಗೆ ಟ್ಯಾಗ್ ಮಾಡಿದ್ದರು.

    English summary
    Late actor Rahul Vohra shared a video before died of COVID. He said in Delhi Rajeev Gandhi hospital they are giving worst treatment.
    Monday, May 10, 2021, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X