For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ ಶೋಗೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ?

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ರಾಜ್ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ಬಿಟ್ಟಿದ್ದಾರೆ. ಕಾಣಿಸಿಕೊಂಡರೂ ಮುಖ ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ಕಾಣಿಸಿಕೊಳ್ಳುತ್ತಾರೆ, ಇಂತಿಪ್ಪ ಕುಂದ್ರಾ ಬಿಗ್‌ಬಾಸ್‌ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

  ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್ ರಿಯಾಲಿಟಿ ಶೋಗೆ ರಾಜ್ ಕುಂದ್ರಾ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಹಿಂದಿ ಬಿಗ್‌ಬಾಸ್ 16 ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ರಾಜ್‌ ಕುಂದ್ರಾ ಈ ಬಾರಿ ವಿಶೇಷ ಹಾಗೂ ಪ್ರಮುಖ ಸ್ಪರ್ಧಿ ಆಗುವ ಸಾಧ್ಯತೆ ಇದೆ.

  ಬಿಗ್‌ಬಾಸ್ ಆಯೋಜಕರು ಈಗಾಗಲೇ ರಾಜ್ ಕುಂದ್ರಾ ಜೊತೆಗೆ ಈ ವಿಷಯವಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಕೆಲ ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಕುಂದ್ರಾಗೆ ಶಿಲ್ಪಾ ಶೆಟ್ಟಿಯ ಬೆಂಬಲವೂ ಇದ್ದು, ಕುಂದ್ರಾ ಸಹ ಈ 'ಸ್ಯಾಟಲೈಟ್ ಸ್ಟ್ರೀಮ್' ಸಾಹಸಕ್ಕೆ ಕೈ ಹಾಕುವ ಮನಸ್ಥಿತಿಯಲ್ಲಿಯೇ ಇದ್ದಾರೆ ಎಂದು ವರದಿಯಾಗಿದೆ.

  ರಾಜ್ ಕುಂದ್ರಾ ಬಿಗ್‌ಬಾಸ್ ಮನೆ ಪ್ರವೇಶಿಸಿದರೆ ಒಂದೇ ಕುಟುಂಬದ ಮೂವರು ಬಿಗ್‌ಬಾಸ್ ಮನೆ ಪ್ರವೇಶಿಸಿದಂತಾಗುತ್ತದೆ. ಶಿಲ್ಪಾ ಶೆಟ್ಟಿ ಕೆಲ ಕಾಲ ಬಿಗ್‌ಬಾಸ್ ಹೋಸ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಿಗ್‌ಬಾಸ್ ಒಟಿಟಿ ಹಾಗೂ ಬಿಗ್‌ಬಾಸ್ ಟಿವಿ ಎರಡರಲ್ಲೂ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಈಗ ರಾಜ್ ಬಿ ಶೆಟ್ಟಿ ಸ್ಪರ್ಧಿಯಾಗಿ ಭಾಗಿಯಾಗುವ ಸಂಭವ ಇದೆ.

  ರಾಜ್ ಕುಂದ್ರಾ ಕಳೆದ ವರ್ಷ ಬಹುವಾಗಿ ಸುದ್ದಿಯಲ್ಲಿದ್ದರು. ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಅವರನ್ನು ಮುಂಬೈ ಪೊಲೀಸರು ಕಳೆದ ವರ್ಷ ಜುಲೈ 19 ರಂದು ಬಂಧಿಸಿದ್ದರು. ರಾಜ್ ಕುಂದ್ರಾ ಒಡೆತನದ ಸಂಸ್ಥೆಯು ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್ ಮೂಲಕ ಪಾರ್ನ್‌ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು.

  ಹಾಟ್‌ಶಾಟ್ಸ್ ಅಪ್ಲಿಕೇಶನ್ ಅನ್ನು ರಾಜ್ ಕುಂದ್ರ ಯುಕೆ ಮೂಲದ ಕೆನ್‌ರಿನ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿದ್ದರು. ಅಸಲಿಗೆ ಈ ಸಂಸ್ಥೆ ರಾಜ್ ಕುಂದ್ರಾರ ಹತ್ತಿರದ ಸಂಬಂಧಿಯ ಸಂಸ್ಥೆಯೇ ಆಗಿದ್ದು, ಭಾರತದಲ್ಲಿ ಪೋರ್ನ್ ವಿಡಿಯೋ ನಿರ್ಮಿಸಿ ಅದನ್ನು ಯುಕೆಗೆ ಕಳಿಸಿ ಅಲ್ಲಿಂದ ಹಾಟ್‌ಶಾಟ್ಸ್‌ಗೆ ಅಪ್‌ಲೋಡ್ ಮಾಡಲಾಗುತ್ತಿತ್ತು.

  ರಾಜ್ ಕುಂದ್ರಾ ಮಾತ್ರವೇ ಅಲ್ಲದೆ ಈ ಪ್ರಕರಣದಲ್ಲಿ ಇನ್ನೂ ಹಲವರ ಬಂಧನ ಆಗಿತ್ತು. ರಾಜ್ ಕುಂದ್ರಾ ಬಂಧನದ ಬಳಿಕ ಅವರ ವಿರುದ್ಧ ಪೂನಂ ಪಾಂಡೆ,ಶೆರ್ಲಿನ್ ಚೋಪ್ರಾ ಹಾಗೂ ಮತ್ತೊಬ್ಬ ಮಾಡೆಲ್‌ ಲೈಂಗಿಕ ದೌರ್ಜನ್ಯ ಆರೋಪವನ್ನು ಹೊರಿಸಿದರು. ಪ್ರಸ್ತುತ ಜಾಮೀನಿನ ಮೇಲೆ ರಾಜ್ ಕುಂದ್ರಾ ಹೊರಗಿದ್ದಾರೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

  English summary
  Shilpa Shetty's husband Raj Kundra may participate in Hindi Bigg Boss season 16. Kundra came to news last year when he arrested by Mumbai police in indecent video case.
  Tuesday, September 6, 2022, 8:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X