ಖ್ಯಾತ ನಟಿಯ ಬದುಕಿನಲ್ಲಿ ಮತ್ತೆ ಬಿರುಗಾಳಿ, ನಮ್ಮ ಸಂಸಾರ ಮುರಿದು ಬೀಳಲು ಆಕೆಯ ಅಕ್ರಮ ಸಂಬಂಧವೇ ಕಾರಣವೆಂದ ಪತಿ..!

ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.ಆದರೆ ಈಗೀಗ..

ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಇದಕ್ಕೆ ರಾಜಾ ಚೌಧರಿ ಮತ್ತು ಶ್ವೇತಾ ತಿವಾರಿಯ ಬದುಕು ಮತ್ತೊಂದು ಉದಾಹರಣೆ.

Raja Chaudhary Alleges Shweta Tiwari s Affair with Cezanne Khan During Kasautii Zindagii Kay

ಹೌದು, ರಾಜಾ ಚೌಧರಿ ಮತ್ತು ಶ್ವೇತಾ ತಿವಾರಿ ಹಿಂದಿ ಕಿರುತೆರೆಯ ಹೆಸರಾಂತ ತಾರೆಯರು. ಕಸೌತಿ ಜಿಂದಗಿ ಕೇ ಧಾರಾವಾಹಿಯನ್ನು ನೋಡಿದವರು ಶ್ವೇತಾ ತಿವಾರಿಯವರನ್ನು ಮರೆಯಲು ಸಾಧ್ಯ ಇಲ್ಲ.

43ರ ಹರೆಯದಲ್ಲಿಯೂ ಹದಿಹರೆಯದರ ಯುವತಿಯರನ್ನೂ ನಾಚಿಸುವಂತೆ ದೇಹಸಿರಿ ಹೊಂದಿರುವ ಶ್ವೇತಾ ತಿವಾರಿ, 1998ರಲ್ಲಿ ರಾಜಾ ಚೌಧರಿ ಜೊತೆಗೆ ಮದುವೆಯಾಗಿದ್ದರು.

ಆದರೆ ಈ ಸಂಬಂಧ 2007ರಲ್ಲಿ ಮುರಿದು ಬಿತ್ತು. ದಾಂಪತ್ಯ ಕಲಹ ಬೀದಿಗೆ ಬಿತ್ತು. ರಂಪ ರಾಮಾಯಣ ಆಯ್ತು. ಪೊಲೀಸರ ಪ್ರವೇಶವೂ ಆಯ್ತು. ಆ ನಂತರ 2012ರಲ್ಲಿ ರಾಜಾ ಚೌಧರಿ ಅವರಿಂದ ಶ್ವೇತಾ ತಿವಾರಿ ಅವರಿಗೆ ವಿಚ್ಛೇದನ ಕೂಡ ಸಿಕ್ತು.

ಅಲ್ಲಿಂದ ಇಲ್ಲಿಯವರೆಗೆ ತಮ್ಮ ತಮ್ಮ ಬದುಕನ್ನು ಇಬ್ಬರು ಬದುಕುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ಆದರೆ ಈಗ ರಾಜಾ ಚೌಧರಿ ದಿಗ್ಗನೆ ಎದ್ದು ಬಂದು ತಮ್ಮ ಮಾಜಿ ಶ್ವೇತಾ ತಿವಾರಿ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದಾರೆ. ನನ್ನ ಮಾಜಿ ಪತ್ನಿಗೆ ಅನೈತಿಕ ಸಂಬಂಧ ಇತ್ತು ಎಂದು ಹೇಳಿದ್ಧಾರೆ.

Raja Chaudhary Alleges Shweta Tiwari s Affair with Cezanne Khan During Kasautii Zindagii Kay

ಹೌದು, ಅಸಲಿಗೆ ರಾಜಾ ಚೌಧರಿಯನ್ನು ಮದುವೆಯಾದಾಗ ಶ್ವೇತಾ ತಿವಾರಿಗೆ ಕೇವಲ 19ರ ಪ್ರಾಯ. ಆಗಿನ್ನೂ ಶ್ವೇತಾ ಕಿರುತೆರೆಯಲ್ಲಿ ಸೈಕಲ್ ತುಳಿಯುತ್ತಿದ್ದರು. ಮದುವೆಯಾಗಿ ಎರಡು ವರ್ಷಗಳ ನಂತರ ಇಬ್ಬರಿಗೆ ಪಲಕ್ ಎಂಬ ಮಗಳು ಜನಿಸಿದಳು.

ಇಲ್ಲಿಂದ ಶ್ವೇತಾ ತಿವಾರಿ ಬದುಕು ಬದಲಾಯ್ತು. ಕಸೌತಿ ಜಿಂದಗಿ ಕೇ ಧಾರಾವಾಹಿಯಲ್ಲಿ ಅವಕಾಶ ಸಿಕ್ತು. ಹಣ ಮತ್ತು ಕೀರ್ತಿ ಎರಡು ಶ್ವೇತಾ ತಿವಾರಿಯ ಪಾಲಾಯ್ತು. ಇದೇ ಧಾರಾವಾಹಿಯಲ್ಲಿ ಶ್ವೇತಾ ತಿವಾರಿ ಎದುರು ನಾಯಕನಾಗಿ ಅನುರಾಗ್ ಬಸು ಪಾತ್ರದಲ್ಲಿ ಅಭಿನಯಿಸುತ್ತಿದ್ದ ಸೆಜಾನ್ ಖಾನ್ ಜೊತೆ ತನ್ನ ಮಾಜಿ ಪತ್ನಿಯ ಸಂಬಂಧ ಇತ್ತು ಎಂದು ರಾಜಾ ಚೌಧರಿ ಸದ್ಯ ಹೇಳಿದ್ದಾರೆ.

Raja Chaudhary Alleges Shweta Tiwari s Affair with Cezanne Khan During Kasautii Zindagii Kay

ಈ ಕುರಿತು ''ಹಿಂದಿ ರಶ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಜಾ ಚೌಧರಿ ನಾವು ದೂರವಾಗಿದ್ದು 2012ರಲ್ಲಿಯಾದರು ಕೂಡ ನಮ್ಮ ಸಂಬಂಧ 2003ರಲ್ಲಿಯೇ ಮುರಿದು ಬೀಳಬೇಕಿತ್ತು ಎಂದು ಹೇಳಿದ್ದಾರೆ.

ಕಾರಿನಲ್ಲಿ ಕೆಲ ಪ್ರಮುಖ ದಾಖಲೆಗಳಿದ್ದವು ಹೀಗಾಗಿ ನಾನು ಆ ದಾಖಲೆಗಳನ್ನು ನೀಡಲು ಶ್ವೇತಾ ಅಭಿನಯಿಸುತ್ತಿದ್ದ ಧಾರಾವಾಹಿಯ ಸೆಟ್‌ಗೆ ಹೋಗಿದ್ದೇ ಆದರೆ ಬೆಳಗ್ಗೆಯೇ ಮನೆಯಿಂದ ಹೋಗಿದ್ದ ಅವಳು ಇನ್ನೂ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಂದಿರಲಿಲ್ಲ ಎಂದಿರುವ ರಾಜಾ ಚೌಧರಿ ನನ್ನ ಕಣ್ಣೆದುರು ಆಕೆ ಸೆಜಾನ್ ಜೊತೆ ಶ್ವೇತಾ ಅವನ ಕಾರಿನಲ್ಲಿ ಬಂದಳು ಎಂದು ಹೇಳಿದ್ದಾರೆ.

ಸೆಜಾನ್ ಜೊತೆಗಿನ ಸಂಬಂಧದ ಕುರಿತು ನಾನು ಅವಳನ್ನು ಕೇಳಲು ಹೋಗಲಿಲ್ಲ ನನ್ನ ಮಗಳು ಪಲಕ್‌ಗಾಗಿ ಎಲ್ಲವನ್ನು ನಾನು ಸಹಿಸಿಕೊಂಡಿದ್ದೇ ಎಂದಿರುವ ರಾಜಾ ಚೌಧರಿ ಈ ಕುರಿತು ನಾನು ಕೇಳಲು ಮುಂದಾದಾಗೆಲ್ಲ ಅವಳು ನನ್ನನ್ನು ಕುಡುಕ ಎಂದು ಹಂಗಿಸುತ್ತಿದ್ದಳು ಎಂದು ಹೇಳಿದ್ದಾರೆ. ಈ ಮೂಲಕ ವಿಷಯವನ್ನು ಡೈವರ್ಟ್‌ ಮಾಡುತ್ತಿದ್ದಳು ಎಂದು ಕೂಡ ಹೇಳಿದ್ದಾರೆ. ಮಾಜಿ ಪತಿ ರಾಜಾ ಚೌಧರಿಯ ಈ ಆರೋಪಕ್ಕೆ ಶ್ವೇತಾ ತಿವಾರಿ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

More from Filmibeat

English summary
Raja Chaudhary alleges Shweta Tiwari had an affair with Cezanne Khan during Kasautii Zindagii Kay. Get the shocking details of this past controversy.
Read more about: divorce affair ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X