Rajani Praveen: ಸಾಫ್ಟ್‌ವೇರ್ ಕೆಲಸ ಬಿಟ್ಟು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ನಟಿ ಕಿರುತೆರೆಯ ವಿಲನ್ ಆಗಿದ್ದೇಗೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡುವವರಿಗೆ ಸುಪ್ರೀತಾ ಖಂಡಿತಾ ಪರಿಚಯವಿರುತ್ತಾರೆ. ಆದರೆ ನಿಜ ಜೀವನದಲ್ಲಿ ಈ ಸುಪ್ರೀತಾ ಹೇಗಿದ್ದಾರೆ? ಏನು ಮಾಡುತ್ತಾರೆ ಮತ್ತು ಯಾರು? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾದರೆ ಅವರ ಪರಿಚಯವನ್ನು ಮಾಡಿಕೊಳ್ಳೋಣ ಬನ್ನಿ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಉತ್ತಮ ವೀಕ್ಷಕ ಪ್ರತಿಕ್ರಿಯೆಯನ್ನು ಪಡೆಯುವುದರೊಂದಿಗೆ ಉನ್ನತ ಟಿಆರ್‌ಪಿ ರೇಟಿಂಗನ್ನೂ ಹೊಂದಿದೆ. ಇದೀಗ 'ಲಕ್ಷ್ಮಿ ಬಾರಮ್ಮ' ಎನ್ನುವ ಹೊಸ ಅಧ್ಯಾಯವು ಕೂಡಾ ಶುರುವಾಗಿದ್ದು, ಇದರಲ್ಲಿ ವಿಲನ್ ಆಗಿ ಸುಪ್ರೀತಾ ಅಭಿನಯಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ರಜನಿ ಪ್ರವೀಣ್.

ಸ್ಟೈಲಿಶ್ ಲುಕ್ ಮೂಲಕ ಫೇಮಸ್ಸು
ತಮ್ಮ ಸ್ಟೈಲಿಶ್ ಲುಕ್‌ನಿಂದಲೇ ಬಹಳ ಜನಪ್ರಿಯತೆ ಪಡೆದಿರುವ ನಟಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಧಾರಾವಾಹಿಗಳಲ್ಲಿ ನಾಯಕ ನಾಯಕಿಗಿರುವಷ್ಟೇ ಪ್ರಾಮುಖ್ಯತೆ ವಿಲನ್‌ಗಳಿಗೂ ಇರುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ವಿಲನ್‌ಗಳಿಲ್ಲದೆ ಧಾರಾವಾಹಿಗೆ ಅರ್ಥವೇ ಇರುವುದಿಲ್ಲ.
ಕಿರುತೆರೆಯ ಸುಂದರ ವಿಲನ್
ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಸೀರಿಯಲ್‌ಗಳಲ್ಲೂ ಸ್ಟೈಲಿಶ್ ಆಗಿರುವ ವಿಲನ್‌ಗಳನ್ನು ನಾವು ನೋಡಬಹುದು. ವಿಲನ್‌ಗಳೇ ಮಾಡೆಲ್‌ಗಿಂತ ಸುಂದರವಾಗಿ ಗೋಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಅಂತಹ ವಿಲನ್‌ಗಳ ಪಟ್ಟಿಯಲ್ಲಿ ಒಬ್ಬರಾಗಿ ಕಾಣುತ್ತಾರೆ ರಜನಿ ಪ್ರವೀಣ್.

ನೆಗೆಟಿವ್ ಪಾತ್ರದ ಮೂಲಕ ಮೋಡಿ
'ಹರ ಹರ ಮಹಾದೇವ', 'ಮಹಾದೇವಿ', 'ರಾಜಿ' ಜೊತೆಗೆ ಪರಭಾಷೆಯ 'ಅಮ್ಮನ್' ಸೇರಿದಂತೆ ಒಟ್ಟು 7 ಧಾರಾವಾಹಿಗಳಲ್ಲಿ ನಟಿಸಿರುವ ರಜನಿ ಪ್ರವೀಣ್ ಬಹುತೇಕ ಸೀರಿಯಲ್‌ಳಲ್ಲೂ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಕಸ್ಮಿಕವಾಗಿ ನಟನೆಗೆ ಬಂದ ಬೆಡಗಿ
ಅಂದ ಹಾಗೇ ರಜನಿ ಪ್ರವೀಣ್ ಅವರು ನಟನೆಯನ್ನು ಆಸಕ್ತಿಯಿಂದ ಅಪ್ಪಿ ಒಪ್ಪಿಕೊಂಡವರಲ್ಲ. ಮನೆಯ ವಾತಾವರಣವೂ ನಟನೆಗೆ ಅಷ್ಟೇನೂ ಪ್ರಾಶಸ್ತ್ಯ ನೀಡಿರಲಿಲ್ಲ. ಅಲ್ಲದೆ ಇವರ ಕನಸಿನ ಉದ್ಯಮ ಐಟಿ ಕ್ಷೇತ್ರವಾಗಿತ್ತು. ಆದರೆ ಐಟಿ ಉದ್ಯಮ ಇವರ ಕೈಹಿಡಿಯಲಿಲ್ಲ. ಕೊನೆಗೆ ಟೀಚರ್ ಆಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ರಜನಿ ಪ್ರವೀಣ್. ಇದೆಲ್ಲದರ ನಂತರ ಈಗಂತೂ ಕಿರುತೆರೆಯಲ್ಲಿ ವಿಲನ್ ಆಗಿ ಸಖತ್ ಸದ್ದು ಮಾಡುತ್ತಿದ್ದಾರೆ.
ರಂಗನಾಯಕಿಯಲ್ಲೂ ಖಳನಾಯಕಿ
ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಸುಪ್ರೀತಾ ಇದಕ್ಕೂ ಮೊದಲು 'ರಂಗನಾಯಕಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಭಿನಯಿಸಿದ್ದರು. ತಮ್ಮ ಅಭಿನಯದಿಂದ ಎಲ್ಲರ ಮನವನ್ನು ಗೆದ್ದಿದ್ದ ನಟಿ ಅಲ್ಲೂ ನಾಯಕಿಗೆ ತೊಂದರೆಯನ್ನುಂಟುಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮೊದಲ ಧಾರಾವಾಹಿ 'ಹರಹರ ಮಹಾದೇವ'
ರಜನಿ ಪ್ರವೀಣ್ ಅವರು ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ಕಲಿತವರು. ರಂಗಭೂಮಿಯ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ಇವರ ಮೊದಲ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ'. ನಂತರ ಹಲವಾರು ಅವಕಾಶಗಳನ್ನು ಪಡೆದುಕೊಂಡಿರುವ ನಟಿ ಇಂದು ಕನ್ನಡ ಸೀರಿಯಲ್ ನ ಬೇಡಿಕೆಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.
ನಟಿಯಾಗಲು ಪತಿಯ ಪ್ರೋತ್ಸಾಹ ಕಾರಣ
ಇವರಿಗೆ ನಟನಾ ರಂಗ ಪ್ರವೇಶಿಸಲು ತುಂಬ ಪ್ರೋತ್ಸಾಹವನ್ನು ನೀಡಿದ್ದು ಪತಿ ಎಂದು ಇಂದಿಗೂ ಸಂತೋಷದಿಂದ ಹೇಳಿಕೊಳ್ಳುತ್ತಾರೆ. ಇವರ ದಾಂಪತ್ಯ ಜೀವನಕ್ಕೆ 12 ವರ್ಷ ಪೂರ್ತಿಯಾಗಿದ್ದು, 10 ವರ್ಷದ ಮಗನಿದ್ದಾನೆ. ಫಿಟ್ ನೆಸ್ ಫ್ರೀಕ್ ಆಗಿರುವ ರಜನಿ ಪ್ರೆಗ್ನೆನ್ಸಿ ಅವಧಿಯಲ್ಲಿ 120ಕೆಜಿ ತನಕ ಏರಿದ್ದನ್ನು ನೆನಪಿಸಿಕೊಳ್ಳುತ್ತಾರೆ. ನಂತರ ಸತತ ವರ್ಕೌಟ್ ನಿಂದ ಈಗ ಮತ್ತೆ ಸ್ಲಿಮ್ ಆಗಿರುವ ನಟಿ ಮಾಡೆಲ್‌ನಂತೆ ಮಿಂಚುತ್ತಿದ್ದಾರೆ. ನಿಯಮಿತವಾದ ವರ್ಕೌಟ್ ಮತ್ತು ಆರೋಗ್ಯಕರ ಡಯಟ್ ಇವರ ಫಿಟ್ ನೆಸ್ ಸೀಕ್ರೆಟ್. ವಿಲನ್ ಪಾತ್ರವನ್ನು ತುಂಬ ಸುಂದರವಾಗಿ ನಿಭಾಯಿಸುತ್ತಿರುವ ರಜನಿಯವರಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ.


Click it and Unblock the Notifications











