Rajani Raghavan: ಮೂಗುತಿ ತೊಟ್ಟು ಪೋಸ್ ಕೊಟ್ಟ 'ಕನ್ನಡತಿ'.. ದೃಷ್ಟಿ ತೆಗೆಸಿಕೊಳ್ಳಿ ಎಂದ ನೆಟ್ಟಿಗರು

By ಫಿಲ್ಮಿಬೀಟ್ ಡೆಸ್ಕ್

'ಕನ್ನಡತಿ' ಧಾರಾವಾಹಿ ಕನ್ನಡದ ಅದೆಷ್ಟೋ ವೀಕ್ಷಕರ ಫೇವರಿಟ್. ಅದರಲ್ಲೂ ಕನ್ನಡಿಗರಿಗಂತೂ ಈ ಧಾರಾವಾಹಿ ಇಂದಿಗೂ ಅಚ್ಚುಮೆಚ್ಚು. ಇದೇ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ರಂಜನಿ ರಾಘವನ್ ಕೂಡ ಅಷ್ಟೇ ಫೇಮಸ್.

ಭುಮಿ ಪಾತ್ರದಲ್ಲಿ ರಂಜನಿ ರಾಘವನ್ ಕಿರುತೆರೆ ವೀಕ್ಷಕರಿಗೆ ತೀರಾ ಹತ್ತಿರವಾಗಿಬಿಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ಇನ್ನೇನು ಮುಗಿಯುತ್ತೆ ಅನ್ನುವಾಗ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದೂ ಇದೆ. ಇದೇ ನಟಿಯೀಗ ಹೊಸ ಫೋಟೊಶೂಟ್ ಮಾಡಿಸಿದ್ದು ಅದು ವೈರಲ್ ಆಗಿದೆ.

ರಂಜನಿ ರಾಘವನ್ ಹೊಸ ಪೋಟೊಶೂಟ್‌ ಎಂದಿನಂತಿಲ್ಲ. ಈ ನಟಿ ಯುಗಾದಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಅಪ್ಪಟ ಕನ್ನಡತಿಯಂತೆಯೇ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ಮೂಗುತಿ ತೊಟ್ಟಿರೋದು ಈ ಫೋಟೊಶೂಟ್‌ನ ಹೈಲೈಟ್.

Rajani Raghavan Of Kannadati Serial Fame New Photoshoot with Nose Pin goes viral

ಯುಗಾದಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ರಂಜನಿ ರಾಘವನ್ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿದ್ದಾರೆ. ಹಸಿರು ಸೀರೆಯುಟ್ಟು, ಮೂಗುತಿ ತೊಟ್ಟು ಕೈಯಲ್ಲಿ ಪುಸ್ತಕ ಹಿಡಿದು, ಕಿರುನಗೆ ಬೀರಿದ ಫೋಟೊಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ರಂಜನಿ ರಾಘವನ್ ನೆರಿಗೆ ಸ್ಟೋರಿ ವಿನ್ಯಾಸದ ಸೀರೆ ಹಾಗೂ ಬ್ಲೌಸ್ ಧರಿಸಿದ್ದಾರೆ. ಶಶಾಂಕ್ ಶಿವಪುರಪು ಪರಿಕಲ್ಪನೆಯಲ್ಲಿ ಈ ಫೋಟೊಶೂಟ್ ನಡೆದಿದೆ. ಸ್ಟೈಲಿಂಗ್ ಪೂಜಾನಾಡಿಗ್ ಅವರದ್ದಾಗಿದ್ದರೆ, ಹೇರ್ ಸ್ಟೈಲ್ ಹಾಗೂ ಮೇಕಪ್ ಯಶಸ್ವಿನಿ ಮಾಡಿದ್ದಾರೆ. ಚಿತ್ರಪ್ರಿಯ ದರ್ಶನಿ ಫೋಟೊ ಕ್ಲಿಕ್ಕಿಸಿದ್ದಾರೆ.

ರಂಜನಿ ರಾಘವನ್ ಯುಗಾದಿ ಮೂಡಿನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡು "ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು. ಹೊಸ ವರ್ಷ ಹೊಸ ಹರುಷ ತರಲಿ" ಎಂದು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಟೊಗಳಿಗೆ ನೆಟ್ಟಿಗರು ಸಾಲು ಸಾಲು ಕಮೆಂಟ್‌ಗಳನ್ನು ಮಾಡಿದ್ದಾರೆ.

ನೆಟ್ಟಿಗರೊಬ್ಬರು "ಎಷ್ಟು ಹೊಗಳಲಿ ನಿಮ್ಮ ಅಂದದ ನಗೆಯ.., ಮುಖದಲ್ಲೇ ಕಾಣುವ ಆ ಮುಗ್ದ ಭಾವನೆಯ.., ಮೂಗಿಗಿಂತ ಭಾರವಾದ ಆ ಮೂಗುತಿಯ.., ಸಂಸ್ಕೃತಿಗೆ ತಕ್ಕ ಸೀರೆ ಉಟ್ಟ ನಾರಿಯ.. ನಿಮಗೆ ಯುಗಾದಿಯ ಶುಭಾಶಯ.." ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ ಮತ್ತೊಬ್ಬರು "ಎಷ್ಟು ಮುದ್ದಾಗಿ ಕಾಣುಸ್ತಿದ್ದೀರ ಅಂದ್ರೆ, ಯಪ್ಪಾ.. ನಿಮಗೆ ಈ ಇಳಕಲ್ ಸೀರೆ & ಮೂಗು ಬೊಟ್ಟು ಬಹಳ ಚೆನ್ನಾಗಿ ಒಪ್ಪುತ್ತೆ. ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.. ದೃಷ್ಠಿ ತೆಗೆಸಿಕೊಳ್ಳಿ" ಎಂದು ಕಮೆಂಟ್ ಮಾಡಿದ್ದಾರೆ.

Rajani Raghavan Of Kannadati Serial Fame New Photoshoot with Nose Pin goes viral

ರಂಜನಿ ರಾಘವನ್ ನಟನೆಯಷ್ಟೇ ಅಲ್ಲ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸದ್ಯ 'ಕನ್ನಡತಿ' ಮುಕ್ತಾಯಗೊಂಡ ಬಳಿಕ 'ಸತ್ಯಂ' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Rajani Raghavan Of Kannadati Serial Fame New Photoshoot with Nose Pin goes viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X