ಸದ್ದಿಲ್ಲದೇ ಮದುವೆಯಾಗಿ ಶಾಕ್ ನೀಡಿದ ಬಿಗ್ ಬಾಸ್ ಸ್ಫರ್ಧಿ ; ಹುಡುಗಿ ಯಾರೆನ್ನುವುದೇ ನಿಗೂಢ
ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೇ ಹಿರಿಯರು ಹೇಳಿರುವುದು, ಮದುವೆ ಅನ್ನುವುದು ಒಂದೆರಡು ದಿನದ ಆಟವಲ್ಲ, ಇದು ಜೀವನ ಪೂರ್ತಿಯಾಗಿ ಸಂಗಾತಿ ಜತೆಗೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.
ಈ ಸಂದರ್ಭವನ್ನು ಅನೇಕರು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿಯೂ ಸೆಲೆಬ್ರಿಟಿಗಳ ಮದುವೆ ಅಂದರೆ ಕಣ್ಣು ಕುಕ್ಕುವಂತೆ ಇರುತ್ತೆ. ಅದ್ದೂರಿತನ ತುಂಬಿರುತ್ತೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಅಲ್ಲೊಬ್ಬರು ಇಲ್ಲೊಬ್ಬರು ಸರಳ ಮದುವೆಯಾಗುತ್ತಾರೆ. ಇನ್ನು ಕೆಲವರು ಯಾವ ಸುಳಿವನ್ನು ನೀಡದೇ ಸದ್ದಿಲ್ಲದೇ ಸಪ್ತಪದಿಯನ್ನು ತುಳಿಯುತ್ತಾರೆ. ರಜತ್ ದಲಾಲ್ ಇದಕ್ಕೆ ಸದ್ಯದ ತಾಜಾ ಉದಾಹರಣೆ.

ಹೌದು, ರಜತ್ ದಲಾಲ್.. ಭಾರತದ ಪ್ರಸಿದ್ಧ ಪವರ್‌ಲಿಫ್ಟರ್. ಇಷ್ಟೇ ಅಲ್ಲ ಫಿಟ್ನೆಸ್ ಇನ್ಫ್ಲುಯೆನ್ಸರ್ ಕೂಡ ಹೌದು. ಸೋಶಿಯಲ್ ಮೀಡಿಯಾ ಮೂಲಕ ಎಲ್ಲರನ್ನು ಸೆಳೆಯುವ ಇವರಿಗೆ ಸದ್ಯ 5,495,404 ಜನ ಹಿಂಬಾಲಕರಿದ್ದಾರೆ.
ಮೂಲತಃ ಹರಿಯಾಣದ ಫರಿದಾಬಾದ್‌ನವರಾದ ರಜತ್ ದಲಾಲ್, ಕೇವಲ ತಮ್ಮ ಫಿಟ್ನೆಸ್ ಮೂಲಕ ಅಥವಾ ಫಿಟ್ನೆಸ್ ವಿಡಿಯೋ ಮೂಲಕ ಜನ ಮನ ಗೆದ್ದಿಲ್ಲ. ಗಮನ ಸೆಳೆದಿಲ್ಲ. ಬದಲಿಗೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪದಕಗಳನ್ನು ಇವರು ಗೆದ್ದಿದ್ದಾರೆ.
ಇಷ್ಟೇ ಅಲ್ಲ ''ಬ್ಯಾಟಲ್‌ಗ್ರೌಂಡ್'' ಎಂಬ ಕಾರ್ಯಕ್ರಮದಲ್ಲಿ ಮೆಂಟರ್ ಆಗಿ ಕಾಣಿಸಿಕೊಂಡಿದ್ದ ರಜತ್ ದಲಾಲ್, ಹಿಂದಿಯ ''ಬಿಗ್ ಬಾಸ್ ಸೀಸನ್ 18''ರಲ್ಲಿ ಕೂಡ ಭಾಗವಹಿಸಿದ್ದರು. ನೂರು ದಿನಕ್ಕೂ ಅಧಿಕ ದಿನ ಮನೆಯಲ್ಲಿದ್ದರು. ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
ಸದ್ಯ ರಜತ್ ದಲಾಲ್ ತೀರಾ ಇತ್ತೀಚೆಗೆ ಅಂತ್ಯಗೊಂಡ ಅಂತರಾಷ್ಟ್ರೀಯ ಮಾದರಿಯ ಇಂಡಿಯನ್ ರಿಯಾಲಿಟಿ ಶೋ ''ದಿ 50''ಯಲ್ಲಿ ಭಾಗವಹಿಸಿದ್ದರು. ಇಲ್ಲಿಯೂ ಕೂಡ ಕೊನೆಯ ಹಂತದವರೆಗೆ ಬಂದಿದ್ದರು.

ಇಂಥಾ ರಜತ್ ದಲಾಲ್ ಸದ್ಯ ಸದ್ದು ಗದ್ದಲ ಇಲ್ಲದೇ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಹಿಂಬಾಲಕರನ್ನು.. ತಮ್ಮ ಅಭಿಮಾನಿಗಳನ್ನು.. ಕಿರುತೆರೆಯ ತಮ್ಮ ಹಿತೈಶಿಗಳನ್ನು ಅಚ್ಚರಿಗೆ ದೂಡಿದ್ದಾರೆ. ವಿಶೇಷ ಅಂದರೆ ರಜತ್ ದಲಾಲ್ ಮದುವೆಯಾದ ಹುಡುಗಿ ಯಾರು..? ಎನ್ನುವ ಪ್ರಶ್ನೆಗೆ ಯಾರಲ್ಲಿಯೂ ಉತ್ತರ ಇಲ್ಲ. ರಜತ್ ದಲಾಲ್ ಕೂಡ ತಾವು ಮದುವೆಯಾದ ಹುಡುಗಿಯ ಹೆಸರು, ಕುಲ, ಗೋತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ.
ಬದಲಿಗೆ ಕೇವಲ ಮದುವೆಯ ನಾಲ್ಕು ಫೋಟೊ ಹಂಚಿಕೊಂಡು ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ ರಜತ್ ದಲಾಲ್. ಈ ಹಿನ್ನೆಲೆ ಹಲವರು ಸದ್ಯ ತಲೆ ಕೆಡಿಸಿಕೊಂಡಿದ್ದು 30 ವರ್ಷದ ಸುರಸುಂದರಾಂಗ ರಜತ್ ದಲಾಲ್‌ನ ಮದುವೆಯಾದ ಚೆಲುವೆ ಯಾರು..? ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿದ್ದಾರೆ.
ಅಂದ್ಹಾಗೇ ''ಬಿಗ್ ಬಾಸ್'' 18ರಲ್ಲಿ ರಜತ್ ದಲಾಲ್ ಜೊತೆ ಮತ್ತೊಬ್ಬ ಸ್ಫರ್ಧಿ ಭಾಗವಹಿಸಿದ್ದರು. ಅವರ ಹೆಸರು ಚಾಹತ್ ಪಾಂಡೆ. ''ಪವಿತ್ರ ಬಂಧನ್'' ಎಂಬ ಪ್ರಖ್ಯಾತ ಧಾರಾವಾಹಿಯ ಮೂಲಕ ಖ್ಯಾತಿಯನ್ನು ಗಳಿಸಿದವರು ಇವರು. ಇವರ ಜೊತೆ ರಜತ್ ದಲಾಲ್ ಅವರಿಗೆ ಸಂಬಂಧ ಇದೆ, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ತುಂಬಾನೇ ಸದ್ದು ಮಾಡಿತ್ತು.
ಇದರಿಂದ ಕೆರಳಿದ್ದ ಚಾಹತ್ ಪಾಂಡೆ ಅವರ ತಾಯಿ ನನ್ನ ಮಗಳಿಗೆ ಯಾವ ಬಾಯ್‌ಫ್ರೆಂಡ್ ಕೂಡ ಇಲ್ಲ. ಹಾಗೊಂದು ವೇಳೆ ಇದ್ದಿದ್ದೇ ಆದಲ್ಲಿ ಅವನ ಫೋಟೊ ಮತ್ತು ಹೆಸರನ್ನು ಬಹಿರಂಗಗೊಳಿಸಿ, ನೀವು ಹೀಗೆ ಮಾಡಿದರೆ ನಾನೇ ನಿಮಗೆ 21 ಲಕ್ಷ ಬಹುಮಾನವನ್ನು ಕೊಡುವುದಾಗಿ ''ಬಿಗ್ ಬಾಸ್'' ಮನೆಯಲ್ಲಿಯೇ ಸಲ್ಮಾನ್ ಖಾನ್ ಮತ್ತು ''ಬಿಗ್ ಬಾಸ್'' ಆಯೋಜಕರಿಗೆ ಓಪನ್ ಚಾಲೆಂಜ್ ಕೂಡ ಹಾಕಿದ್ದರು.
ಈ ಹೈಡ್ರಾಮಾ ನೋಡಿದ್ದ ಹಲವರು ರಜತ್ ಮತ್ತು ಚಾಹತ್ ನಿಜಕ್ಕೂ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ, ಮದುವೆಯಾಗ್ತಾರೆ ಎಂದು ಅಂದುಕೊಂಡಿದ್ದರು. ಯಾಕೆಂದರೆ ನಮ್ಮ ನಡುವೆ ನೀವು ಅಂದುಕೊಂಡ ಸಂಬಂಧವೇನು ಇಲ್ಲ ಎಂದು ಹೇಳುತ್ತಲೇ ಇಲ್ಲಿ ಮದುವೆಯಾದ ಉದಾಹರಣೆಗಳು ಹಲವು ಇವೆ. ರಜತ್ ಮತ್ತು ಚಾಹತ್ ಈ ಸಾಲಿಗೆ ಸೇರುವ ನಿರೀಕ್ಷೆ ಇತ್ತು.
ಆದರೆ ಈಗ ನೋಡಿದರೆ ರಜತ್ ದಲಾಲ್ ಸದ್ದಿಲ್ಲದೇ ಮದುವೆಯಾಗುವ ಮೂಲಕ ಹಲವರಿಗೆ ಶಾಕ್ ನೀಡಿದ್ದಾರೆ. ಈ ಹಿನ್ನೆಲೆ ಹಲವರು ರಜತ್ ಕೈ ಹಿಡಿದ ಹುಡುಗಿಯ ಜಾತಕ ಹುಡುಕುವ ಕೆಲಸದಲ್ಲಿ ಕಾರ್ಯ ಪ್ರವೃತ್ತರಾಗಿದ್ಧಾರೆ.


Click it and Unblock the Notifications











