For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್'ನಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

  |
  Weekend With Ramesh Season 4: ಮರೆಯಲಾರದ ಸಿನೆಮಾ ಕೊಟ್ಟವರು ಈ ವಾರದ ವೀಕೆಂಡ್‍ನಲ್ಲಿ

  ಕನ್ನಡ ಚಿತ್ರರಂಗಕ್ಕೆ ಮುತ್ತಿನಂಥ ಸಿನಿಮಾಗಳನ್ನು ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿ ಆಗಿದ್ದಾರೆ.

  ರಾಜೇಂದ್ರ ಸಿಂಗ್ ಬಾಬು ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ನಡೆದಿದೆ. ಇದರ ಫೋಟೋವನ್ನು ಅವರ ಪುತ್ರ ನಟ ಆದಿತ್ಯ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಪ್ರಸಾರದ ದಿನಾಂಕವನ್ನು ಇನ್ನು ಜೀ ವಾಹಿನಿ ಅಧಿಕೃತವಾಗಿ ತಿಳಿಸಿಲ್ಲ.

  Breaking News : ಅಂತ್ಯ ಆಗ್ತಿದೆ 'ವೀಕೆಂಡ್ ವಿತ್ ರಮೇಶ್ 4' Breaking News : ಅಂತ್ಯ ಆಗ್ತಿದೆ 'ವೀಕೆಂಡ್ ವಿತ್ ರಮೇಶ್ 4'

  ಈಗಾಗಲೇ, ಕನ್ನಡದ ಅನೇಕ ನಿರ್ದೇಶಕರು ಸಾಧಕರ ಸೀಟ್ ಮೇಲೆ ಕುಳಿತಿದ್ದು, ಈಗ ಮತ್ತೊಬ್ಬ ನಿರ್ದೇಶಕ ಆ ಸೀಟ್ ನಲ್ಲಿ ಜಾಗ ಪಡೆದಿದ್ದಾರೆ. ನಿರ್ದೇಶನದ ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾಗಿ ಕೂಡ ರಾಜೇಂದ್ರ ಸಿಂಗ್ ಬಾಬು ಕೆಲಸ ಮಾಡಿದ್ದರು.

  ರಾಜೇಂದ್ರ ಸಿಂಗ್ ಬಾಬು ಅವರ ಸಂಚಿಕೆಗೆ ಸಹೋದರಿ ವಿಜಯಲಕ್ಷ್ಮಿ ಸಿಂಗ್, ಅವರ ಪತಿ ನಟ ಜೈ ಜಗದೀಶ್ ಹಾಗೂ ಪುತ್ರಿಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ.

  ಬಂಧನ, ಮುತ್ತಿನ ಹಾರ, ಕುರಿಗಳು ಸಾರ್ ಕುರಿಗಳು, ಬಣ್ಣದ ಗೆಜ್ಜೆ, ಯುಗ ಪುರುಷ, ಕರ್ಣ, ಅಂತ, ಸಿಂಹದ ಮರಿ ಸೈನ್ಯ ಸೇರಿದಂತೆ ಸಾಕಷ್ಟು ಮರೆಯಲಾಗದ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ.

  English summary
  Kannada director Rajendra Singh Babu in Zee Kannada channels popular show Weekend With Ramesh 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X