twitter
    For Quick Alerts
    ALLOW NOTIFICATIONS  
    For Daily Alerts

    ರಿಮೇಕ್ ಸಿನಿಮಾಗಳ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಬೇಸರ

    |

    ಕನ್ನಡ ಚಿತ್ರರಂಗದಲ್ಲಿ ರಿಮೇಕ್ ಸಿನಿಮಾಗಳು ಆಗಾಗ ಬರುತ್ತಿರುತ್ತದೆ. ಬೇರೆ ಭಾಷೆಯ ಸಿನಿಮಾಗಳನ್ನು ಇಲ್ಲಿ ರಿಮೇಕ್ ಮಾಡುವ ಬಗ್ಗೆ ಕೆಲವು ನಿರ್ದೇಶಕರಿಗೆ ವಿರೋಧ ಇದೆ.

    ಇದೀಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ರಿಮೇಕ್ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅರ್ಥವಿಲ್ಲದ ಚಿತ್ರಗಳಲ್ಲಿ ಅರ್ಥವಿಲ್ಲದ ಹಾಗೆ ರಿಮೇಕ್ ಮಾಡುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ! ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!

    ''ಕನ್ನಡ ಚಿತ್ರಗಳು ಸೋಲಲು ಕಾರಣವೇ ನಮ್ಮ ತನ ಇರದೆ ಇರುವುದು. ಇಂದಿನ ಸಿನಿಮಾಗಳಲ್ಲಿ ನಮ್ಮ ಕಥೆ ಇಲ್ಲ, ನಮ್ಮ ತನ ಇಲ್ಲ, ನಮ್ಮ ಸಂಸ್ಕೃತಿ ಇಲ್ಲ, ನಮ್ಮ ಸಂಸ್ಕಾರ ಇಲ್ಲ. ನಮ್ಮ ಮಣ್ಣಿನ ವಾಸನೆ ಇಲ್ಲ. ಒಂದು ತಮಿಳು ಸಿನಿಮಾವನ್ನು ರಿಮೇಕ್ ಮಾಡಿ ಅಲ್ಲಿನ ಮೀಸೆ ಅಂಟಿಸಿಕೊಂಡು ಬರುತ್ತಾರೆ.'' ಎಂದು ರಿಮೇಕ್ ಚಿತ್ರಗಳ ಸ್ಥಿತಿಯನ್ನು ವಿವರಿಸಿದ್ದಾರೆ.

    rajendra singh babu spoke about remake movies in weekend with ramesh 4

    ''ನಾನು ಎಂದಿಗೂ ಪ್ರೇಕ್ಷಕರನ್ನು ಬೈಯುವುದಿಲ್ಲ. ಅವರು ಎಂದಿಗೂ ಸರಿ. ಇದನ್ನು ಇಡೀ ಪ್ರಪಂಚದಲ್ಲಿ ಎಲ್ಲರೂ ಹೇಳಿದ್ದಾರೆ. ಪ್ರೇಕ್ಷಕರೇ ಸುಪ್ರೀಂ ಕೋರ್ಟ್.'' ಎಂದು ಹೇಳುವ ಮೂಲಕ ಪ್ರೇಕ್ಷಕರ ತೀರ್ಪೇ ಅಂತಿಮ ಎಂದಿದ್ದಾರೆ.

    ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ

    ನಮ್ಮ ಕನ್ನಡದಲ್ಲಿಯೇ ಎಷ್ಟೊಂದು ಕತೆಗಳು ಇವೆ. ನಿರ್ದೇಶಕರು ಹೆಚ್ಚು ಪುಸ್ತಕಗಳನ್ನು ಓದಬೇಕು. ಆ ಕಥೆಗಳನ್ನು ಸಿನಿಮ್ಯಾಟಿಕ್ ಆಗಿ ಹೇಳುವುದು ಹೇಗೆ ಎನ್ನುವುದನ್ನು ಯೋಚನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

    English summary
    Kannada director Rajendra Singh Babu spoke about remake movies in Zee Kannada channels popular show Weekend With Ramesh 4.
    Wednesday, July 10, 2019, 15:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X