'ಗಾಳಿಪಟ' ಹಾರಿಸಿದ ಮುದ್ದಾದ ಜೋಡಿ ಈಗ ಮತ್ತೆ ಒಂದಾಯ್ತು.!
ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ 'ಗಾಳಿಪಟ' ಚಿತ್ರದಲ್ಲಿ ಗಣೇಶ್-ಡೈಸಿ, ದಿಗಂತ್-ನೀತು ಜೋಡಿಯಂತೆ ರಾಜೇಶ್ ಕೃಷ್ಣನ್ ಹಾಗೂ ಭಾವನಾ ಜೋಡಿ ಕೂಡ ಎಲ್ಲರಿಗೂ ಅಚ್ಚುಮೆಚ್ಚು.
'ಗಾಳಿಪಟ' ಸಿನಿಮಾದಲ್ಲಿ ಲವ್ ಫೇಲ್ಯೂರ್ ಆದ ಹುಡುಗನಾಗಿ ರಾಜೇಶ್ ಕೃಷ್ಣನ್ ಕಾಣಿಸಿಕೊಂಡಿದ್ದರೆ, ಹುಡುಗಾಟದ ಹುಡುಗಿಯಾಗಿ ಭಾವನಾ ಮಿಂಚಿದ್ದರು. ತೆರೆಮೇಲೆ ಸಿಕ್ಕಾಪಟ್ಟೆ ಮನರಂಜನೆ ನೀಡಿದ ಈ ಜೋಡಿ ಇದೀಗ ಮತ್ತೆ ಒಂದಾಗಿದ್ದಾರೆ.

ಹಾಗಂತ, ರಾಜೇಶ್ ಕೃಷ್ಣನ್ ಹಾಗೂ ಭಾವನಾ ಮತ್ತೆ ಒಟ್ಟಾಗಿ ಸಿನಿಮಾ ಮಾಡ್ತಿದ್ದಾರೆ ಅಂದುಕೊಳ್ಳಬೇಡಿ. ರಾಜೇಶ್ ಕೃಷ್ಣನ್ ಹಾಗೂ ಭಾವನಾ ಒಟ್ಟಾಗಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಅಷ್ಟೇ.
ಗಾಯಕ ರಾಜೇಶ್ ಕೃಷ್ಣನ್, ನಟಿ ಭಾವನಾ ಜೊತೆಗೆ ನಟಿ ರೇಖಾ ಕೂಡ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ. ಈ ಮೂವರೊಂದಿಗೆ ಅಕುಲ್ ಹೇಗೆಲ್ಲ ಹರಟೆ ಹೊಡೆಯುತ್ತಾರೆ ಅಂತ ತಿಳಿದುಕೊಳ್ಳಲು ಗುರುವಾರ-ಶುಕ್ರವಾರ ರಾತ್ರಿ 9 ಗಂಟೆವರೆಗೂ ನೀವು ಕಾಯಲೇಬೇಕು. ಯಾಕಂದ್ರೆ, ಕಾರ್ಯಕ್ರಮ ಪ್ರಸಾರ ಆಗಲೇ....
ಅಲ್ಲಿಯವರೆಗೂ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಪ್ರೋಮೋ ನೋಡ್ತಿರಿ...


Click it and Unblock the Notifications











