For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಗೆ ಕಾಲಿಟ್ಟ ಭಾರತದ ಮಹಿಳಾ ಕ್ರಿಕೆಟರ್ಸ್ ವೇದಾ, ರಾಜೇಶ್ವರಿ.!

  By Harshitha
  |

  ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ರನ್ನರ್ಸ್ ಅಪ್ ಆಗಿ ಭಾರತದ ಕೀರ್ತಿ ಪತಾಕೆಯನ್ನ ವಿಶ್ವದಾದ್ಯಂತ ಹಾರಿಸಿದ ವನಿತೆಯರ ತಂಡದಲ್ಲಿದ್ದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಯಾರಿಗ್ತಾನೆ ಗೊತ್ತಿಲ್ಲ ಹೇಳಿ..?

  ಮಿಡಲ್ ಆರ್ಡರ್ ಬ್ಯಾಟ್ಸ್ ವುಮನ್ ಆದರೂ ಕಡಿಮೆ ಬಾಲ್ ಗಳಲ್ಲಿ ಹಾಫ್ ಸೆಂಚುರಿ ಚಚ್ಚಿದ ವೇದಾ ಕೃಷ್ಣಮೂರ್ತಿ ಹಾಗೂ ಲೆಫ್ಟ್ ಆರ್ಮ್ ಸ್ಪಿನ್ ಗಳ ಮೂಲಕ ವಿಕೆಟ್ ಗಳನ್ನು ಕಬಳಿಸಿದ ರಾಜೇಶ್ವರಿ ಗಾಯಕ್ವಾಡ್ ಇದೀಗ ಭಾರತದ ಮೂಲೆಮೂಲೆಯಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ.

  ಈಗ ಇದೇ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದಾರೆ.! ಮುಂದೆ ಓದಿರಿ....

  ಸರ್ಪ್ರೈಸ್ ಆಯ್ತಾ..?

  ಸರ್ಪ್ರೈಸ್ ಆಯ್ತಾ..?

  ಏನು... ಚಿಕ್ಕಮಗಳೂರಿನ ವೇದಾ ಕೃಷ್ಣಮೂರ್ತಿ ಹಾಗೂ ಬಿಜಾಪುರದ ರಾಜೇಶ್ವರಿ ಗಾಯಕ್ವಾಡ್ ಕನ್ನಡ ಕಿರುತೆರೆಗೆ ಕಾಲಿಟ್ರಾ.? ಧಾರಾವಾಹಿಗಳಲ್ಲಿ ಇವರಿಬ್ಬರು ಏನಾದರೂ ನಟಿಸುತ್ತಿದ್ದಾರಾ.? ಎಂದು ತಲೆಗೆ ಹುಳ ಬಿಟ್ಟುಕೊಳ್ಳುವ ಮುನ್ನ ಪೂರ್ತಿ ಮ್ಯಾಟರ್ ಓದಿರಿ...

  ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಮಹಿಳಾ ಕ್ರಿಕೆಟರ್ಸ್

  ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಮಹಿಳಾ ಕ್ರಿಕೆಟರ್ಸ್

  ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಭಾಗವಹಿಸಿದ್ದಾರೆ.

  ಇಂದು ಚಿತ್ರೀಕರಣ ನಡೆಯುತ್ತಿದೆ

  ಇಂದು ಚಿತ್ರೀಕರಣ ನಡೆಯುತ್ತಿದೆ

  ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣ ಇಂದು ನಡೆಯುತ್ತಿದೆ.

  ಶೂಟಿಂಗ್ ಸ್ಪಾಟ್ ನಿಂದ ಅಕುಲ್ ಲೈವ್

  ಶೂಟಿಂಗ್ ಸ್ಪಾಟ್ ನಿಂದ ಅಕುಲ್ ಲೈವ್

  'ಸೂಪರ್ ಟಾಕ್ ಟೈಮ್' ಸೆಟ್ ನಿಂದಲೇ ಅಕುಲ್ ಬಾಲಾಜಿ ಫೇಸ್ ಬುಕ್ ಲೈವ್ ಮಾಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ರವರನ್ನೂ ತಮ್ಮ ಫೇಸ್ ಬುಕ್ ಲೈವ್ ವೇಳೆಯಲ್ಲಿ ಅಕುಲ್ ಮಾತನಾಡಿಸಿದರು.

  ಕಾರ್ಯಕ್ರಮ ಪ್ರಸಾರ ಯಾವಾಗ.?

  ಕಾರ್ಯಕ್ರಮ ಪ್ರಸಾರ ಯಾವಾಗ.?

  ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಪಾಲ್ಗೊಂಡಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಚಿತ್ರೀಕರಣ ಇಂದು ನಡೆಯುತ್ತಿದೆ. ಕಾರ್ಯಕ್ರಮ ಪ್ರಸಾರ ಯಾವಾಗ ಎಂಬ ಮಾಹಿತಿ ಲಭ್ಯವಾಗಿಲ್ಲ.

  English summary
  Cricketers Rajeshwari Gayakwad and Veda Krishnamurthy takes part in Colors Super Channel's popular show 'Super Talk Time'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X