Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್‌ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
ಆಕ್ಟಿಂಗ್ ಅಂದ್ರೆ ಏನು ಅಂತ ನೋಡಬೇಕು ಅಂದ್ರೆ ಅದು ಆ ಕಾಲದ ನಟ - ನಟಿಯರನ್ನೇ ನೋಡಬೇಕು. ಕಲ್ಪನಾ, ಜಯಂತಿ, ಮಂಜುಳಾ, ಉಮಾಶ್ರೀ, ಸುಧಾರಾಣಿ, ಮಾಲಾಶ್ರೀ, ಶೃತಿ ಈ ಪೀಳಿಗೆಯ ನಟಿಯರನ್ನು ಯುವ ನಟ-ನಟಿಯರು ಫಾಲೋ ಮಾಡಬೇಕಾಗಿದೆ. ನವರಸಗಳು ಅಂತಾರಲ್ಲ ಅದನ್ನ ಅರೆದು ಕುಡಿದು ಬಿಟ್ಟಿದ್ದಾರೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ನಟಿ ರಜಿನಿ ಅವರ ಒಂದು ಪರ್ಫಾಮೆನ್ಸ್.
ಈಗಿನ ಪೀಳಿಗೆಯ ನಟಿಯರಿಗೆ ಒಂದೊಳ್ಳೆ ಪರ್ಫಾಮ್ ಮಾಡಿ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ಬರುವುದು ಕಲ್ಪನಾ. ಹಾಗಂತ ಕಲ್ಪನಾ ಅವರ ಆ ಒಂದು ಡೈಲಾಗ್‌ಗೆ ಎಲ್ಲ ರೀತಿಯ ಭಾವನೆಗಳನ್ನು ನೀಡುವುದು ಅಷ್ಟು ಸುಲಭವಲ್ಲ. ಎಷ್ಟೋ ಜನ ಕಲ್ಪನಾ ಅವರ ಆ ಒಂದು ಡೈಲಾಗ್‌ಗೆ ಪರ್ಫಾಮ್ ಮಾಡಿದಾಗಲೂ ಸೋತಿದ್ದಾರೆ. ಆದರೆ, ಇದೀಗ ನಟಿ ರಜಿನಿ ಮಾಡಿದ ಪರ್ಫಾಮ್ ಎಲ್ಲರ ಮನಗೆದ್ದಿದೆ.

ಸೂಪರ್ ಕ್ವೀನ್‌ನಲ್ಲಿ ರಜಿನಿ ಭಾಗಿ
ಜೀ ಕನ್ನಡದಲ್ಲಿ ವೀಕೆಂಡ್‌ಗೆ ಅಂತ ಹಲವು ಕಾರ್ಯಕ್ರಮಗಳು ಬರುತ್ತಿವೆ. ಅದರಲ್ಲಿ ಪ್ರತಿಭೆ ಅನಾವರಣ ಮಾಡುವ ಕಾರ್ಯಕ್ರಮವೇ ಜಾಸ್ತಿ. ಇತ್ತೀಚೆಗೆ ಸೂಪರ್ ಕ್ವೀನ್ ರಿಯಾಲಿಟಿ ಶೋ ಆರಂಭವಾಗಿದೆ. ಅದರಲ್ಲಿ ಧಾರಾವಾಹಿ ನಟಿಯರನ್ನು ಸೇರಿಸಿ, ಸಖತ್ ಮನರಂಜನೆ ನೀಡುತ್ತಿದೆ. ಡ್ಯಾನ್ಸ್, ಡ್ರಾಮಾ ಹೀಗೆ ನಾನಾ ರೀತಿಯ ಪ್ರತಿಭೆ ಅನಾವರಣವಾಗಿದೆ. ನಟಿಯರನ್ನು ಧಾರಾವಾಹಿಗಳಲ್ಲಿ ಬೇರೆ ಬೇರೆ ಪಾತ್ರದಲ್ಲಿ ನೋಡಿದ್ದೆ ಬೇರೆ. ಸೂಪರ್ ಕ್ವೀನ್ ವೇದಿಕೆ ಮೇಲೆ ನೋಡುತ್ತಿರುವ ರೀತಿಯೇ ಬೇರೆ. ಇದಕ್ಕೆ ನೋಡುಗರು ಫುಲ್ ಫಿದಾ ಆಗಿದ್ದಾರೆ.

ಕಲ್ಪನಾ ಹಾಡಿಗೆ ನೃತ್ಯ
ಸೂಪರ್ ಕ್ವೀನ್ ಪ್ರೋಗ್ರಾಂನಲ್ಲಿ ರಜಿನಿ ಕೂಡ ಭಾಗವಹಿಸಿದ್ದಾರೆ. ವಾರ ವಾರಕ್ಕೂ ವಿಭಿನ್ನ ರೀತಿಯ ಪ್ರತಿಭೆ ಅನಾವರಣವಾಗುತ್ತಿರುತ್ತದೆ. ಈ ವಾರ ಒಂದು ಡ್ಯಾನ್ಸ್.. ಒಂದು ಪರ್ಫಾಮೆನ್ಸ್ ಇತ್ತು. ಅದರಲ್ಲಿ ರಜಿನಿ ಕಲ್ಪನಾ ಅವರ ಎರಡು ಕನಸು ಸಿನಿಮಾದ ತಮ್ನಮ್ ತಮ್ನಮ್ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. ಬಳಿಕ ಅವರದ್ದೇ ಡೈಲಾಗ್‌ಗೆ ನಟನೆ ಕೂಡ ಮಾಡಿದ್ದಾರೆ. ಡಾ. ರಾಜ್‍ಕುಮಾರ್ ಹಾಗೂ ಕಲ್ಪನಾ ಅವರ ಭಾವನಾತ್ಮಕ ಸನ್ನಿವೇಶಕ್ಕೆ ನಟನೆ ಮಾಡಿದ್ದಾರೆ.

ಎಲ್ಲರ ಹೊಗಳಿಕೆಗೆ ರಜಿನಿ ಕಣ್ಣೀರು..!
ಇನ್ನು ರಜಿನಿ ಅವರ ಕಲ್ಪನಾ ಪಾತ್ರಕ್ಕೆ ಒಂದು ಕ್ಷಣ ಎಲ್ಲರೂ ಮಂತ್ರಮುಗ್ಧರಾಗಿ ಬಿಟ್ಟರು. ಕಲ್ಪನಾ ಅವರ ಸ್ಮೈಲ್ ಅನ್ನೇ ಕದ್ದಿದ್ದೀರಾ ಎಂದಾಗ ರಜಿನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ರಚಿತಾ ರಾಮ್ ಮನಸ್ಪೂರ್ತಿಯಾಗಿ ಹೊಗಳಿದರು. "ಮೊದಲ ದಿನ ನಿಮ್ಮನ್ನ ಬರೀ ಡ್ಯಾನ್ಸರ್ ಆಗಿನೋಡಿದ್ದೆ. ಆಮೇಲೆ ಸಿಂಗರ್. ದಿನ ಕಳೆದಂತೆ ನೀವು ಎಷ್ಟು ಒಳ್ಳೆಯ ನಟಿ ಅನ್ಸಿದೆ" ಎಂದಾಗ ರಜಿನಿ ಕಣ್ಣೀರು ಹಾಕಿದ್ದಾರೆ.

ನಟಿ ರಜಿನಿಗೆ ಹೊಗಳಿಕೆಯ ಸುರಿಮಳೆ
ಇನ್ನು ಕಲ್ಪನಾ ಪಾತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ರಜಿನಿ ಅವರಿಗೆ ಸಾಕಷ್ಟು ಜನ ಕಮೆಂಟ್ ಹಾಕಿದ್ದಾರೆ. "ಕಲ್ಪನಾ ಪಾತ್ರ ಮಾಡಿದ ಎಪಿಸೋಡ್ ನೋಡಿದೆವು. ಎಂಥಾ ನಟನೆ.. ನಿಮಗೆ ಕೈ ಎತ್ತಿ ಮುಗಿಬೇಕು ಎನಿಸಿತು. ಆ ಪಾತ್ರ ನೀವೂ ಮಾಡಿಲ್ಲ. ನೀವೆ ಆ ಪಾತ್ರವಾಗಿದ್ದೀರಿ ಎಂದು ಹೊಗಳಿದ್ದಾರೆ.

ರಜಿನಿ ಫುಲ್ ಖುಷಿ
ಇನ್ನು ಕಲ್ಪನಾ ಪಾತ್ರಕ್ಕೆ ಎಲ್ಲರೂ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್ ಹಾಕುತ್ತಿದ್ದಾರೆ. ಇದಕ್ಕೆ ಎಲ್ಲರಿಗೂ ಮೆಸೇಜ್ ಮೂಲಕವೇ ಉತ್ತರ ಕೊಡುವುದಕ್ಕೆ ಆಗದ ಕಾರಣ, ನಟಿ ರಜಿನಿ ವಿಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.


Click it and Unblock the Notifications











