Rajini Praveen: ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಿರುವ ಈ ಕಿರುತೆರೆ ನಟಿ ಯಾರು? ಇವರ ಹಿನ್ನೆಲೆ ಏನು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಸೋದರತ್ತೆ ಸುಪ್ರೀತಾ ಆಗಿ ಅಭಿನಯಿಸುತ್ತಿರುವ ಮುದ್ದು ಮುಖದ ಬೆಡಗಿ ಹೆಸರು ರಜನಿ ಪ್ರವೀಣ್. ಅದ್ಭುತ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ರಜಿನಿ ಪ್ರವೀಣ್ ನಟನೆ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲೂ ಸಕತ್ ಆ್ಯಕ್ಟಿವ್.
ಧಾರಾವಾಹಿಯಲ್ಲಿ ಸ್ಟೈಲಿಶ್ ಲುಕ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ರಜಿನಿ ಪ್ರವೀಣ್ ಅವರು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟಿವ್ ಹೌದು. ಆಗಾಗ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ರಜನಿ ಪ್ರವೀಣ್ ಅವರು ಬಿಡುವು ಸಿಕ್ಕಾಗಲ್ಲೆಲ್ಲಾ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆ ಮೂಲಕ ನೆಟ್ಟಿಗರ ಮನ ಸೆಳೆಯುತ್ತಿರುತ್ತಾರೆ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಖಳನಾಯಕಿ ಸುಪ್ರೀತಾ ಆಗಿ ಅಭಿನಯಿಸುತ್ತಿರುವ ರಜನಿ ಅವರು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಅಭಿನಯಿಸಿದ್ದರೂ ಖಳನಾಯಕಿಯಾಗಿ ಅಬ್ವರಿಸಿದ್ದೇ ಹೆಚ್ಚು. 'ಹರಹರ ಮಹಾದೇವ', 'ಮಹಾದೇವಿ', 'ರಾಜಿ' ಧಾರಾವಾಹಿಗಳಲ್ಲಿ ವಿಲನ್ ಪಾತ್ರದ ಮೂಲಕ ಮೋಡಿ ಮಾಡಿದ್ದ ರಜನಿ ಪರಭಾಷೆಯ 'ಅಮ್ಮನ್' ಸೀರಿಯಲ್‌ನಲ್ಲೂ ಅಭಿನಯಿಸಿದ್ದಾರೆ.
ಇಂದು ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ರಜಿನಿ ಪ್ರವೀಣ್ ಎಂದಿಗೂ ನಟಿಯಾಗಬೇಕು ಎಂಬ ಕನಸು ಕಂಡವರಲ್ಲ. ಜೊತೆಗೆ ಮನೆಯಲ್ಲಿ ನಟನೆಗೆ ಪೂರಕವಾದ ವಾತವರಣವೂ ಇರಲಿಲ್ಲ. ಇನ್ನು ಮನಸಾರೆಯಾಗಿ ಈಕೆ ಇಷ್ಟಪಟ್ಟ ಕ್ಷೇತ್ರ ಐಟಿಯಾಗಿತ್ತು. ಆದರೆ ಅದು ಕೂಡಾ ಆಕೆಯ ಕೈ ಹಿಡಿಯಲಿಲ್ಲ. ಮುಂದೆ ಶಿಕ್ಷಕಿಯಾಗಿ ಬದಲಾದರು.

ರಂಗಭೂಮಿ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ನಟಿ ರಜಿನಿ ಪ್ರವೀಣ್, ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ಪಳಗಿದ ಬೆಡಗಿ. 'ಹರಹರ ಮಹಾದೇವ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇಂದು ನಟನೆಯ ಮೂಲಕ ಗುರುತಿಸಿಕೊಂಡಿರುವ ರಜನಿ ಅವರಿಗೆ ಪತಿಯ ಪ್ರೋತ್ಸಾಹದಿಂದಲೇ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.
ನಟನೆಯ ಹೊರತಾಗಿ ರಜನಿ ಅವರನ್ನು ಫಿಟ್ನೆಸ್ ಫ್ರೀಕ್ ಅಂದು ಕರೆದರೂ ತಪ್ಪಾಗಲಾರದು. ಹೌದು, ಪ್ರೆಗ್ನೆನ್ಸಿ ಸಮಯದಲ್ಲಿ ಬರೋಬ್ಬರಿ 120 ಕೆಜಿಗಳಷ್ಟು ತೂಕ ಜಾಸ್ತಿ ಮಾಡಿಕೊಂಡಿದ್ದ ಈಕೆ ಮುಂದೆ ಪರಿಶ್ರಮ ಹಾಕಿ ವರ್ಕೌಟ್ ಮಾಡಿಕೊಂಡು ತೂಕ ಇಳಿಸಿಕೊಂಡಿದ್ದು ಈಕೆಯ ಸಾಧನೆಗೊಂದು ಉದಾಹರಣೆಯೂ ಹೌದು. ಒಟ್ಟಿನಲ್ಲಿ ತಮ್ಮ ಸೌಂದರ್ಯ, ಸ್ಟೈಲಿಶ್ ಲುಕ್ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಈ ಬೆಡಗಿಗೆ ಹತ್ತು ವರ್ಷದ ಮಗನಿದ್ದಾನೆ ಎನ್ನುವ ಸತ್ಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ.


Click it and Unblock the Notifications











