Amruthavarshini: 12 ವರ್ಷದ ಬಳಿಕ ಅತ್ತೆ ಸೊಸೆಯಂದಿರ ಭೇಟಿ; 'ಅಮೃತವರ್ಷಿಣಿ'ಯ ಸುಂದರ ಸಮಯ!

By ಎಸ್ ಸುಮಂತ್

ಕೆಲವೊಂದು ಧಾರಾವಾಹಿಗಳು ಹಿಸ್ಟರಿಯನ್ನೇ ಕ್ರಿಯೇಟ್ ಮಾಡಿಬಿಡುತ್ತವೆ. ಅದೆಷ್ಟೇ ವರ್ಷಗಳಾದರೂ ಆ ಧಾರಾವಾಹಿಯ ನೆನಪಾಗಲಿ, ಅದರೊಳಗಿನ ಪಾತ್ರವಾಗಲಿ ನೆನಪಿನಾಳದಿಂದ ದೂರ ಸರಿಯುವುದಿಲ್ಲ. 10-15 ವರ್ಷಗಳ ಹಿಂದೆ ಬರುತ್ತಿದ್ದ ಎಲ್ಲಾ ಧಾರಾವಾಹಿಗಳಿಗೆ ಈಗಲೂ ಡಿಮ್ಯಾಂಡ್ ಇದೆ. ರೀ ಟೆಲಿಕಾಸ್ಟ್ ಆದರೂ ಆ ಧಾರಾವಾಹಿಯನ್ನು ನೋಡುವವರಿದ್ದಾರೆ. ಅಷ್ಟು ಅದ್ಭುತವಾಗಿ ಕೌಟುಂಬಿಕ ಕಥೆಯನ್ನು ಎಣೆದಿದ್ದರು. ಅದರಲ್ಲಿ 'ಅಮೃತವರ್ಷಿಣಿ' ಕೂಡ ಒಂದು.

ಏನು ತಿಳಿಯದ ಅಮೃತ, ಶ್ರೀಮಂತರ ಮನೆಗೆ ಸೊಸೆಯಾಗಿ ಬರುತ್ತಾಳೆ. ಅತ್ತೆ ತಪ್ಪು ಯಾರೇ ಮಾಡಿದರೂ ತಪ್ಪು ಎನ್ನುತ್ತಾ, ಸರಿ ದಾರಿಯಲ್ಲಿ ನಡೆದವರನ್ನು ಸಪೋರ್ಟ್ ಮಾಡುತ್ತಾರೆ. ಆದರೆ ಅಮೃತಾ ಕಂಡರೆ ಗಂಡ ವಿಜಯ್‌ಗೂ ಇಷ್ಟವಿರುವುದಿಲ್ಲ. ಇನ್ನು ಸ್ವಂತ ಅಕ್ಕನನ್ನು ಹೊರಗೆ ಹಾಕಲು ವರ್ಷಿಣಿ ಇನ್ನಿಲ್ಲದ ಐಡಿಯಾಗಳನ್ನೇ ಮಾಡುತ್ತಿರುತ್ತಾಳೆ. ಅಮೃತಾ ತನ್ನ ಒಳ್ಳೆಯ ತನದಿಂದಾನೇ ಎಲ್ಲವನ್ನು ಗೆಲ್ಲುತ್ತಾಳೆ. ಇದು ಅಮೃತವರ್ಷಿಣಿಯ ಅದ್ಭುತ ಕಥೆಯಾಗಿದೆ.

Rajini shares glimpse of reunion with Amruthavarshini serial co-stars

ರಜಿನಿ-ಸ್ವಾತಿ ಭೇಟಿಯಾದ ಸ್ಪೆಷಲ್ ವ್ಯಕ್ತಿ

ರಜಿನಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು, ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡುತ್ತಾ ಆಶ್ಚರ್ಯವನ್ನುಂಟು ಮಾಡುತ್ತಾ ಇರುತ್ತಾರೆ. ಅದರಲ್ಲೂ ಫಿಟ್ನೆಸ್ ಫ್ರೀಕ್ ಆಗಿದ್ದಾರೆ. ಇದೀಗ ಹಿರಿಯ ನಟಿ ಹೇಮಾ ಚೌಧರಿಯನ್ನು ಭೇಟಿ ಮಾಡಿದ್ದಾರೆ. ಆ ಫೋಟೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅತ್ತೆ ಜೊತೆಗೆ ಅದೇ ಬಾಂಧವ್ಯ

12 ವರ್ಷಗಳ ಹಿಂದೆ ಅಮೃತವರ್ಷಿಣಿ ಎಂಬ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿತ್ತು. ಅದರಲ್ಲಿ ಶ್ರೀಮಂತಿಕೆಯ ಕುಟುಂಬಕ್ಕೆ ಮಧ್ಯಮವರ್ಗದ ಅಮೃತ ಹಾಗೂ ವರ್ಷಿಣಿ ಸೊಸೆಯಾಗಿ ಹೋಗಿದ್ದರು. ಅತ್ತೆಯಾಗಿ ಹೇಮಾ ಚೌಧರಿ ಕಾಣಿಸಿಕೊಂಡಿದ್ದರು‌. ಹಲವು ಸಿನಿಮಾ, ಸೀರಿಯಲ್‌ ಗಳಲ್ಲಿ ಹೇಮಾ ಚೌಧರಿಯ ಗತ್ತು ಆ ಕಾಲಕ್ಕೆ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಂದಿನ ಸೊಸೆಯಂದಿರಾದ ರಜಿನಿ ಹಾಗೂ ಸ್ವಾತಿ ಇಬ್ಬರು ತಮ್ಮ ಪ್ರೀತಿಯ ಅತ್ತೆಯನ್ನು ಭೇಟಿ ಮಾಡಿದ್ದಾರೆ.

Rajini shares glimpse of reunion with Amruthavarshini serial co-stars

ಅಮೃತ-ವರ್ಷಿಣಿಯದ್ದು ಒಳ್ಳೆ ಬಾಂಧವ್ಯ

ಇನ್ನು ಅಮೃತ ವರ್ಷಿಣಿ ಧಾರಾವಾಹಿಯಲ್ಲಿ ಅಮೃತಾ ತುಂಬಾ ಮುಗ್ಧಳು. ಆದರೆ ವರ್ಷಾ ಕೆಡುಕು ಸ್ವಭಾವದವಳು. ಅದು ಧಾರಾವಾಹಿಯಲ್ಲಿ ಮಾತ್ರ. ಆದರೆ ರಿಯಲ್ ಲೈಫ್‌ನಲ್ಲಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿಯಲ್ಲಿಯೇ ಇದ್ದಾರೆ. ಆಗಾಗ ಇಬ್ಬರು ಭೇಟಿ ಮಾಡುತ್ತಾ ಇರುತ್ತಾರೆ. ಅದರಲ್ಲೂ ರಜಿನಿ ತುಂಬಾನೇ ಎಂಟರ್ಟೈನಿಂಗ್ ಆಗಿ ಇರುತ್ತಾರೆ. ಈಗ ತಂಗಿ ವರ್ಷಿಣಿ ಅಲಿಯಾಸ್ ಸ್ವಾತಿ ಜೊತೆಗೆ ಪೋಸ್ ಕೊಟ್ಟಿರೋದು ಕೂಡ ನಗು ತರಿಸುವಂತೆ ಇದೆ. ಹನ್ನೆರಡು ವರ್ಷದಿಂದ ಒಂದೊಳ್ಳೆ ಬಾಂಡಿಂಗ್ ಮೆಂಟೈನ್ ಮಾಡಿದ್ದಾರೆ.

ಕಮೆಂಟ್ ಮೂಲಕ ಫ್ಯಾನ್ಸ್ ಹೊಗಳಿಕೆ

ಬದುಕಿನ ಭಾವ ಲಹರಿ ಅಮೃತವರ್ಷಿಣಿ ಈ ಟೈಟಲ್ ಟ್ರ್ಯಾಕ್ ಕೇಳೋಕೆ ಇಂಪು. ಇದೇ ಟ್ರ್ಯಾಕ್ ಹಾಕಿ ಫೋಟೋ ಹಂಚಿಕೊಂಡಿದ್ದಾರೆ ರಜಿನಿ. ಫೋಟೋಗಳನ್ನು ನೋಡೊದ ಕೂಡಲೇ ಕಮೆಂಟ್ ಗಳ ಸುರಿಮಳೆಯೇ ಸುರಿದಿದೆ. ಅಮೃತಾ-ಶಕುಂತಲಾ ದೇವಿ- ವರ್ಷಿಣಿ ಎಂದು ಅತ್ತೆ ಸೊಸೆಯಂದಿರ ಹೆಸರನ್ನು ನೆನಪಿಸಿಕೊಂಡಿದ್ದಾರೆ. ಇನ್ನು ಈ ಫೋಟೋ ಮೂಲಕ ಬಹಳ ವರ್ಷಗಳ ನಂತರ ಹೇಮಾ ಚೌಧರಿ ನೋಡಿ ಖುಷಿಯಾಗಿದ್ದಾರೆ. ಆ ಗತ್ತಿನ ಹೇಮಾ ಚೌಧರಿ ಈಗ ಸ್ವಲ್ಪ ಸೊರಗಿದ್ದಾರೆ. ಎಲ್ಲರೂ ಫೋಟೋಗೆ ಕಮೆಂಟ್, ಲೈಕ್ ಮಾಡ್ತಾ ಇದ್ದಾರೆ.

More from Filmibeat

English summary
Star Suvarna serial Amruthavarshini Written Update on social media. Here is the details about Amruta Varshini Shakuntala Devi in ​​a one frame;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X