For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸುವರ್ಣದಿಂದ ಜೀ ಕನ್ನಡಕ್ಕೆ ಜಿಗಿದ ಅಮೃತವರ್ಷಿಣಿ ರಜಿನಿ

  By Pavithra
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಾಕಷ್ಟು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ಮುಖ್ಯಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ರಜಿನಿ ಸದ್ಯ ಸ್ಟಾರ್ ಸುವರ್ಣದಿಂದ ಕಾಣೆಯಾಗಿದ್ದಾರೆ. ಕಾರಣ ಏನಪ್ಪಾ ಅಂದರೆ, ಅಮೃತಾವರ್ಷಿಣಿ ಸೀರಿಯಲ್ ಗೆ ತೆರೆ ಎಳೆದಾಗಿದೆ.

  ಇದೇ ಕಾರಣದಿಂದ ರಜಿನಿ ಸ್ಟಾರ್ ಸುವರ್ಣವಾಹಿನಿಯಿಂದ ಕಾಣೆಯಾಗಿದ್ದಾರೆ. ಅಲ್ಲಿ ಕಾಣೆಯಾದ ರಜಿನಿ ಜೀವಾಹಿನಿಯಲ್ಲಿ ಪ್ರತ್ಯಕ್ಷ ಆಗಿದ್ದಾರಂತೆ. ಸಾಕಷ್ಟು ವರ್ಷಗಳಿಂದ ತಮ್ಮ ಅಭಿನಯದ ಮೂಲಕವೇ ಸ್ಟಾರ್ ಸುವರ್ಣ ಚಾನೆಲ್ ನ ವೀಕ್ಷಕರನ್ನ ನಗಿಸುತ್ತಾ, ಅಳಿಸುತ್ತಾ ಇದ್ದ ರಜಿನಿ ಇನ್ನು ಮುಂದೆ ಜೀ ವಾಹಿನಿಯ ವೀಕ್ಷಕರನ್ನ ರಂಜಿಸಲಿದ್ದಾರೆ.

  'ಸರಿಗಮಪ' ಕ್ವಾರ್ಟರ್ ಫೈನಲ್ ಹಂತ ತಲುಪುವವರು ಯಾರು?'ಸರಿಗಮಪ' ಕ್ವಾರ್ಟರ್ ಫೈನಲ್ ಹಂತ ತಲುಪುವವರು ಯಾರು?

  ಹೌದು ರಜಿನಿ ಇನ್ನು ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಾರೆ. ಹಾಗಾದರೆ ರಜಿನಿ ಅಭಿನಯ ಮಾಡುತ್ತಿರುವ ಹೊಸ ಧಾರಾವಾಹಿ ಯಾವುದು? ಹೇಗಿರಲಿದೆ ಆ ಸೀರಿಯಲ್. ಪ್ರಸಾರ ಯಾವಾಗ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಅಮೃತವರ್ಷಿಣಿ ರಜಿನಿ ಜೀ ಕನ್ನಡದಲ್ಲಿ

  ಅಮೃತವರ್ಷಿಣಿ ರಜಿನಿ ಜೀ ಕನ್ನಡದಲ್ಲಿ

  ಅಮೃತವರ್ಷಿಣಿ ಸೀರಿಯಲ್ ಮೂಲಕ ಜನಮನ ಗೆದ್ದಿದ್ದ ನಟಿ ರಜಿನಿ ಇನ್ನು ಮುಂದೆ ಜೀ ಕನ್ನಡದಲ್ಲಿ ಪ್ರಸಾರ ಆಗುವ ಧಾರಾವಾಹಿಯಲ್ಲಿ ಬರಲಿದ್ದಾರೆ. ಹೊಸ ಸೀರಿಯಲ್ ನಲ್ಲಿ ರಜಿನಿ ಅಭಿನಯ ಮಾಡುತ್ತಿದ್ದಾರೆ.

  ಬೆಚ್ಚಿ ಬೀಳಸಲಿರುವ ರಜಿನಿ

  ಬೆಚ್ಚಿ ಬೀಳಸಲಿರುವ ರಜಿನಿ

  ಅಮೃತವರ್ಷಿಣಿ ಧಾರಾವಾಹಿಯ ಮೂಲಕ ವೀಕ್ಷಕರ ಕಣ್ಣಲ್ಲಿ ನೀರು ತರಿಸಿದ್ದ ರಜಿನಿ ಈ ಸಲ ನೋಡಗರನ್ನ ಬೆಚ್ಚಿಬೀಳಿಸಲಿದ್ದಾರೆ. ಕಾರಣ ಏನಪ್ಪಾ ಅಂದರೆ ರಜಿನಿ ದೆವ್ವದ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ.

  ಆತ್ಮಬಂಧನದಲ್ಲಿ ರಜಿನಿ

  ಆತ್ಮಬಂಧನದಲ್ಲಿ ರಜಿನಿ

  ಆತ್ಮಬಂಧನ ,ಹೆತ್ತವಳ ವಿರುದ್ಧವೇ ತಿರುಗಿ ಬಿದ್ದ ಮುಗ್ದ ಆತ್ಮದ ಸೇಡಿನ ಕಥೆ. ಜೀ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಹೊಸ ಧಾರಾವಾಹಿ ಶೀಘ್ರದಲ್ಲೇ ಆರಂಭವಾಗಲಿದೆ.

  ರಜಿನಿ ಹಾಗೂ ಗೀತಾಂಜಲಿ ನಟಿ

  ರಜಿನಿ ಹಾಗೂ ಗೀತಾಂಜಲಿ ನಟಿ

  ರಜಿನಿ ಮಾತ್ರವಲ್ಲದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಗೀತಾಂಜಲಿ ಧಾರಾವಾಹಿಯ ಬಾಲನಟಿ ಕೂಡ ಸ್ಟಾರ್ ಸುವರ್ಣಯಿಂದ ಜೀ ಕನ್ನಡಕ್ಕೆ ಜಿಗಿದಿದ್ದಾರೆ. ರಜಿನಿ ಮಗಳ ಪಾತ್ರದಲ್ಲಿ ಈ ಪುಟ್ಟ ಪೋರಿ ಅಭಿನಯ ಮಾಡುತ್ತಿದ್ದಾರೆ.

  English summary
  Kannada actress Rajini starred New serial Atmabandan will soon be broadcast on the zee Kannada Channel , Earlier, Rajini acted in the Suvarna TV serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X