ಛೇ.. ಅದೃಷ್ಟ ಕೈಕೊಡ್ತು.. ಪತಿ ಅರುಣ್ ಸೋಲಿನ ಬಗ್ಗೆ ನಟಿ ರಜಿನಿ ಹೇಳಿದ್ದೇನು?

ಕಿರುತೆರೆ ನಟಿ ರಜಿನಿ ಹಾಗೂ ಜಿಮ್ ಕೋಚ್ ಅರುಣ್ ವೆಂಕಟೇಶ್ ಇತ್ತೀಚೆಗೆ ಹಸೆಮಣೆ ಏರಿದ್ದರು. 7 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಹೊಸ ಬಾಳಿಗೆ ಕಾಲಿಟ್ಟಿದ್ದರು. ದೇಹದಾರ್ಢ್ಯ ಪಟು ಆಗಿರುವ ಅರುಣ್ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಮದುವೆ ಬೆನ್ನಲ್ಲೇ ಅರುಣ್ ಸ್ಪರ್ಧೆವೊಂದರಲ್ಲಿ ಸೋತಿದ್ದಾರೆ. ಈ ಬಗ್ಗೆ ನಟಿ ರಜಿನಿ ವೀಡಿಯೋ ಮಾಡಿ ಮಾತನಾಡಿದ್ದಾರೆ.

ಮದುವೆಯಾದ ದಿನದಿಂದ ನಾವಿಬ್ಬರೂ ಹೆಚ್ಚು ಭೇಟಿ ಆಗಲು ಸಾಧ್ಯವಾಗಲಿಲ್ಲ ಎಂದು ಇತ್ತೀಚೆಗೆ ರಜಿನಿ ವೀಡಿಯೋ ಮಾಡಿದ್ದರು. ತಾವು ತಮ್ಮ ಧಾರಾವಾಹಿ ಕೆಲಸಗಳಲ್ಲಿ ಬ್ಯುಸಿ. ಪತಿ ಅರುಣ್ ಸ್ಪರ್ಧೆವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ಹೆಚ್ಚು ಭೇಟಿ ಸಾಧ್ಯವಾಗಲಿಲ್ಲ ಎಂದಿದ್ದರು. ಏರ್‌ಪೋರ್ಟ್‌ವರೆಗೆ ಹೋಗಿ ಪತಿಯನ್ನು ಸ್ಪರ್ಧೆಗೆ ಬೀಳ್ಕೊಟ್ಟು ಬಂದಿದ್ದರು. ಗೆದ್ದು ಬರುವಂತೆ ಹಾರೈಸಿದ್ದರು. ಅಭಿಮಾನಿಗಳ ಹಾರೈಕೆ ಕೂಡ ಕೇಳಿದ್ದರು.

Rajini Supports Husband Arun After Competition Loss Shares Emotional Message With Fans

ಸ್ಪರ್ಧೆ ಮುಗಿಸಿ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಅರುಣ್ ಅವರನ್ನು ಪತ್ನಿ ರಜಿನಿ ಹೋಗಿ ಕರೆದುಕೊಂಡು ಬಂದಿದ್ದಾರೆ. "ಸೋಲು ಕೊನೆಯಲ್ಲ.. ಗೆಲುವು ಶಾಶ್ವತ ಅಲ್ಲ.. ಸೋಲು ಗೆಲುವಿನ ನಡುವೆ ನಮ್ಮ ಪ್ರಯತ್ನ ನಿರಂತರ. ನನ್ನ ಪತಿಗೆ ಶುಭ ಹಾರೈಸಿದ್ದ ಎಲ್ಲರಿಗೂ ಧನ್ಯವಾದ. ನನ್ನ ಬೆಬೊಗೆ ಮೆಡಲ್ ಸಿಗದೇ ಇರಬಹುದು. ಆದರೆ ನೀವು ಹಾರೈಕೆ ಯಾವ ಮೆಡಲ್‌ಗಿಂತ ಕಮ್ಮಿ ಅಲ್ಲ" ಎಂದು ರಜಿನಿ ಹೇಳಿದ್ದಾರೆ.

ಇದು ಬರೀ ಅರುಣ್ ಒಬ್ಬರ ಕಥೆಯಲ್ಲ. ಅಲ್ಲಿ ಬಂದಿದ್ದ ಸಾವಿರಾರು ಅಥ್ಲೆಟ್‌ಗಳ ಕಥೆ. ಉಪ್ಪು ಖಾರ ಇಲ್ಲದೇ ಊಟ ಮಾಡಿದ ನಿದ್ದೆ ಇಲ್ಲದೇ ರಾತ್ರಿಗಳು. ಈ ಒಂದು ದಿನಕ್ಕೆ ಒಂದು ವರ್ಷ ಸಾವು ಬದುಕಿನ ಹೋರಾಟ. ಆದರೆ ಕೊನೆಗೆ ಬರೀಗೈಯಲ್ಲಿ ನಿಲ್ಲುವುದು, ಯಾವ ಶತ್ರುಗೂ ಬೇಡ.. ನನ್ನ ಬೆಬೋ ಬಾಡಿ ಕಂಡೀಷನ್ ಬಹಳ ಚೆನ್ನಾಗಿತ್ತು ಅಂತ ಕೋಚ್ ಕೂಡ ಹೇಳಿದ್ದರು. ನಾವು ಮಾಡುವ ಕೆಲಸ ಗುರುಗಳಿಗೆ ಇಷ್ಟವಾದರೆ ದೇವರಿಗೆ ಇಷ್ಟವಾದಂತೆ ಎಂದು ನನ್ನ ಬೆಬೋ ಕೂಡ ಎಕ್ಸೈಟ್ ಆಗಿದ್ದ. ಆದರೆ ಅದೃಷ್ಟ ಕೈಕೊಟ್ಟಿತ್ತು. ಅವನು ಸ್ಟೇಜ್‌ ಮೇಲೆ ಸೋಲುತ್ತಿರುವುದು ಇದೇ ಮೊದಲಲ್ಲ ಎಂದು ರಜಿನಿ ವಿವರಿಸಿದ್ದಾರೆ.

ಯಶಸ್ಸಿನ ಹಾದಿಯಲ್ಲಿ ಏರಿಳಿತ ಸಹಜ.. ಮುಂದಿನ ನಮ್ಮ ಗೆಲುವು ಹೇಗಿರಬೇಕು ಅಂದ್ರೆ ಸೋಲು ಕೂಡ ನಮ್ಮ ಮುಂದೆ ತಲೆ ಬಾಗಬೇಕು ಎಂದು ರಜಿನಿ ಭರವಸೆಯ ಮಾತುಗಳನ್ನಾಡಿದ್ದಾರೆ. "ಬದುಕನ್ನು ಪ್ರೀತಿಸುತ್ತಾ ಸಾಗಿ ಬದುಕು ನಮ್ಮನ್ನು ಪ್ರೀತಿಸುತ್ತೆ ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲುವು ನಮ್ಮನ್ನು ಸ್ವಾಗತಿಸುತ್ತೆ" ಎಂದು ಕ್ಯಾಪ್ಷನ್ ಕೊಟ್ಟು ವೀಡಿಯೋ ಪೋಸ್ಟ್ ಮಾಡಿದ್ದಾರೆ.

ರಜಿನಿ ವೀಡಿಯೋಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಬೇಸರ ಮಾಡ್ಕೊಬೇಡಿ, ಒಂದಲ್ಲ ಒಂದು ದಿನ ಗೆಲುವು ನಿಮ್ಮದಾಗುತ್ತದೆ ಎಂದು ಬೆಂಬಲ ಸೂಚಿಸುತ್ತಿದ್ದಾರೆ. 'ಅಮೃತವರ್ಷಿಣಿ', 'ಹಿಟ್ಲರ್ ಕಲ್ಯಾಣ' ಸೇರಿ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ರಜಿನಿ ಕಿರುತೆರೆ ನಿರೂಪಕಿಯಾಗಿ ಕೂಡ ಮಿಂಚಿದ್ದರು. ಜಿಮ್ ಕೋಚ್ ಅರುಣ್ ಜೊತೆ ರೀಲ್ಸ್ ವೀಡಿಯೋ ಮಾಡುತ್ತಾ ಗಮನ ಸೆಳೆದಿದ್ದರು. ಅದನ್ನು ನೋಡಿ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಆರಂಭದಲ್ಲಿ ಅದನ್ನು ಒಪ್ಪಿಕೊಳ್ಳದ ಜೋಡಿ ದಿಢೀರನೆ ಮದುವೆ ಆಗಿ ಅಚ್ಚರಿ ಮೂಡಿಸಿದ್ದರು. ಇಬ್ಬರು ಮದುವೆ ಫೋಟೊ, ವೀಡಿಯೋಗಳು ವೈರಲ್ ಆಗಿತ್ತು.

ಸದ್ಯ 'ನೀ ಇರಲು ಜೊತೆಯಲ್ಲಿ' ಎಂಬ ಧಾರಾವಾಹಿಯಲ್ಲಿ ರಜಿನಿ ನಟಿಸುತ್ತಿದ್ದಾರೆ. ಈ ಹಿಂದೆ 'ಡ್ಯಾನ್ಸಿಂಗ್ ಸ್ಟಾರ್' ಹಾಗೂ 'ಮಜಾ ಟಾಕೀಸ್' ಶೋಗಳಲ್ಲಿ ಕೂಡ ರಜಿನಿ ಕಾಣಿಸಿಕೊಂಡು ಮೋಡಿ ಮಾಡಿದ್ದರು.

More from Filmibeat

Read more about: actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X