For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಯಲ್ಲಿ ರಾಖಿ ಸಾವಂತ್, ಐಸಿಯುನಲ್ಲಿ ತಾಯಿಗೆ ಚಿಕಿತ್ಸೆ

  |

  ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಖಿ ಸಹೋದರ ರಾಕೇಶ್ ಮಾಹಿತಿ ನೀಡಿದ್ದಾರೆ.

  ಅತ್ತ ಬಿಗ್ ಬಾಸ್ ಮನೆಯಲ್ಲಿರುವ ರಾಖಿ ಸಾವಂತ್ ಗೆ ತಮ್ಮ ತಾಯಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರವನ್ನು ತಿಳಿಸಲಾಗಿದ್ದು, ನಟಿ ಆತಂಕಗೊಂಡಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರೂ, ಬಿಗ್ ಬಾಸ್ ಮನೆಯಲ್ಲಿ ನೀನು ಆಟ ಮುಂದುವರಿಸಿ ಟ್ರೋಫಿ ಗೆಲ್ಲಬೇಕು ಎಂದು ತಾಯಿ ಆಸೆಪಟ್ಟಿರುವುದಾಗಿ ಎಂದು ಸಹೋದರ ರಾಕೇಶ್ ನಟಿಗೆ ಸಂದೇಶ ರವಾನಿಸಿದ್ದಾರೆ.

  ರಾಖಿ ಸಾವಂತ್ ಗೆ ಸೀರೆ ಉಡಿಸಿದ ಅಭಿನವ್: ಪತ್ನಿಯ ಪ್ರತಿಕ್ರಿಯೆ ಹೀಗಿತ್ತುರಾಖಿ ಸಾವಂತ್ ಗೆ ಸೀರೆ ಉಡಿಸಿದ ಅಭಿನವ್: ಪತ್ನಿಯ ಪ್ರತಿಕ್ರಿಯೆ ಹೀಗಿತ್ತು

  ರಾಖಿ ತಾಯಿ ಜಯಾ ಭೇದ ಶನಿವಾರ (ಜನವರಿ 30) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸೋಮವಾರದಿಂದ (ಫೆಬ್ರವರಿ 1) ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾಗಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ರಾಕೇಶ್ ತಮ್ಮ ಸಹೋದರಿಗೆ ವಿಷಯ ಮುಟ್ಟಿಸಿದ್ದಾರೆ.

  ಇದಕ್ಕೂ ಮುಂಚೆ ರಾಖಿ ಸಾವಂತ್ ಅವರ ತಾಯಿಯ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಲಾಗಿತ್ತು. ಸದ್ಯದಲ್ಲೇ ತಮ್ಮ ತಾಯಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಗ್ ಬಾಸ್ ತಿಳಿಸಿತ್ತು. ಆ ವೇಳೆ ಬಿಗ್ ಬಾಸ್ ಮನೆಯಲ್ಲಿದ್ದ ರಾಖಿ ಭಾವುಕರಾಗಿದ್ದರು.

  ಬಾಲಿವುಡ್ ನಲ್ಲಿರುವುದೇ ಅಪರಾಧನಾ, ಡ್ಯಾನ್ಸರ್ ಆಗಿರುವುದೇ ತಪ್ಪಾ?; ನಟಿ ರಾಖಿ ಸಾವಂತ್ಬಾಲಿವುಡ್ ನಲ್ಲಿರುವುದೇ ಅಪರಾಧನಾ, ಡ್ಯಾನ್ಸರ್ ಆಗಿರುವುದೇ ತಪ್ಪಾ?; ನಟಿ ರಾಖಿ ಸಾವಂತ್

  ಅಂದ್ಹಾಗೆ, ರಾಖಿ ಸಾವಂತ್ ಬಿಗ್ ಬಾಸ್ ಹಿಂದಿ 14ನೇ ಆವೃತ್ತಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದರು. 70ನೇ ದಿನ ಬಿಗ್ ಮನೆಗೆ ಪ್ರವೇಶಿಸಿದ್ದ ನಟಿ ಕೊನೆಯ ಹಂತಕ್ಕೆ ಬಂದಿದ್ದಾರೆ

  English summary
  Bollywood actress Rakhi Sawant mother admitted to ICU, chemotherapy to start from Monday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X